ಸವಣೂರು ಗ್ರಾ.ಪಂ |ಆಶಾ ಕಾರ್ಯಕರ್ತೆಯರಿಗೆ ಗೌರವಧನ| ಮಾದರಿಯಾದ ಗ್ರಾ.ಪಂ ಕಾರ್ಯ

ಕಡಬ: ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ 8 ಮಂದಿ ಆಶಾ ಕಾರ್ಯಕರ್ತೆಯರು ಸುಮಾರು 15 ಹೊಂಕ್ವಾರಂಟೈನ್ನಲ್ಲಿರುವ ಮನೆಗಳಿಗೆ ಬೇಟಿ ನೀಡುವುದು ಮತ್ತು ಗ್ರಾಮದ ಪ್ರತಿ ಮನೆಗಳಿಗೂ ಕೊರೊನಾದ ಕುರಿತು ಮಾಹಿತಿ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಇವರ ಈ ಕಾರ್ಯವನ್ನು ಪರಿಗಣಿಸಿ ಸವಣೂರು ಗ್ರಾಮ ಪಂಚಾಯತ್ ವತಿಯಿಂದ ಆಡಳಿತ ಮಂಡಳಿ ಮತ್ತು ಅಧಿಕಾರಿ,ಸಿಬ್ಬಂದಿ ವರ್ಗದವರ ಒಮ್ಮತದ ಅಭಿಪ್ರಾಯದ ಮೇರೆಗೆ ಪ್ರತಿ ಆಶಾಕಾರ್ಯಕರ್ತೆಯರಿಗೆ ತಲಾ 2000.00 ರೂಪಾಯಿಯನ್ನು ಪಂಚಾಯತ್ ನ ಸ್ವತಃ ಸಂಪನ್ಮೂಲದಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ,ಪಿಡಿಓ ನಾರಾಯಣ ಬಟ್ಟೋಡಿ,ಲೆಕ್ಕ ಸಹಾಯಕ ಎ.ಮನ್ಮಥ ಹಾಗೂ ಸಿಬಂದಿಗಳು ಉಪಸ್ಥಿತರಿದ್ದರು.

ಬೆಲೆ ಕಟ್ಟಲಾಗದ ಶ್ರಮಕ್ಕೆ ಕಿಂಚಿತ್ ಸಹಾಯ ಸವಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮಗಳಲ್ಲಿ 8 ಮಂದಿ ಆಶಾ ಕಾರ್ಯಕರ್ತೆಯರು ಸುಮಾರು 15 ಹೊಂಕ್ವಾರಂಟೈನ್ನಲ್ಲಿರುವ ಮನೆಗಳಿಗೆ ಬೇಟಿ ನೀಡುವಂತದ್ದು ಮತ್ತು ಗ್ರಾಮದ ಪ್ರತಿ ಮನೆಗಳಿಗೂ ಕೊರೊನಾದ ಕುರಿತು ಮಾಹಿತಿ ನೀಡುವುದನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಾ ಬರುತ್ತಿದ್ದಾರೆ..ತಮ್ಮ ಆರೋಗ್ಯ ಮತ್ತು ತಮ್ಮ ಮನೆಯವರ ಆರೋಗ್ಯವನ್ನು ಪಣಕ್ಕಿಟ್ಟು ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಈ ಕಾರ್ಯಕರ್ತೆಯರಿಗೆ ನಮ್ಮ ಗ್ರಾಮ ಪಂಚಾಯತ್ ವತಿಯಿಂದ ಆಡಳಿತ ಮಂಡಳಿ ಮತ್ತು ಅಧಿಕಾರಿ,ಸಿಬ್ಬಂದಿ ವರ್ಗದವರ ಒಮ್ಮತದ ಅಭಿಪ್ರಾಯದ ಮೇರೆಗೆ ಪ್ರತಿ ಆಶಾಕಾರ್ಯಕರ್ತೆಯರಿಗೆ ತಲಾ 2000.00 ರೂಪಾಯಿಯನ್ನು ಪಂಚಾಯತ್ ನ ಸ್ವತಃ ಸಂಪನ್ಮೂಲದಿಂದ ನೀಡಲಾಯಿತು. ಪ್ರಾಯಶಃ ಈ ಕಾರ್ಯ ಪುತ್ತೂರು ತಾಲೂಕಿನಲ್ಲಿಯೇ ಪ್ರಥಮ ಎನ್ನುವ ಬಗ್ಗೆ ನಮ್ಮ ಆಡಳಿತ ಮಂಡಳಿಗೆ ಸಂತೃಪ್ತಿ ತಂದಿದೆ.

ಸವಣೂರು ಗ್ರಾಮಪಂಚಾಯತ್ ಪರವಾಗಿ ಅನನ್ಯ ಸೇವೆಗೆ ಧನ್ಯವಾದ

Leave A Reply

Your email address will not be published.