ಪುತ್ತೂರು ತಾಲೂಕಿನ ಚೆಲ್ಯಡ್ಕದಲ್ಲಿ ಗುಡ್ಡಕ್ಕೆ ಬೆಂಕಿ

ಪುತ್ತೂರು ತಾಲೂಕಿನ ಚೆಲ್ಯಡ್ಕ ದಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದು ಉರಿಯುತ್ತಿದೆ.

ಬೆಟ್ಟಂಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ನಿಂದ ಬಿದ್ದ ಕಿಡಿಯಿಂದ ಬೆಂಕಿ ಹೊತ್ತಿಕೊಂಡಿದೆ.
ಟ್ರಾನ್ಸ್ ಫಾರ್ಮರ್ ನಿಂದ ಸಿಡಿದ ಕಿಡಿಗೆ ತರಗೆಲೆ ಹೊತ್ತಿಕೊಂಡು ಅ ನಂತರ ಬೆಂಕಿ ಹರಡಿದೆ.

ಬೆಂಕಿಯ ತೀವ್ರತೆ ಮತ್ತು ನಷ್ಟದ ಬಗ್ಗೆ ಮಾಹಿತಿ ಇಲ್ಲ.

ನಿನ್ನೆ ಸುಳ್ಯದಲ್ಲಿ ಕೂಡ ಇದೇ ಮಾದರಿಯಲ್ಲಿ ಗುಡ್ಡಕ್ಕೆ ಬೆಂಕಿ ಬಿದ್ದಿತ್ತು. ಈಗ ಬೇಸಿಗೆ ಆದ ಕಾರಣ ಒಣಹುಲ್ಲು ಮತ್ತು ತರಗೆಲೆ ಬೆಂಕಿ ಹರಡಲು ಪೂರಕವಾಗಿದೆ.

Leave A Reply

Your email address will not be published.