ಬೆಳ್ಳಾರೆ | ಗ್ರಾ.ಪಂ. ಗೆ SDPI ವತಿಯಿಂದ ಅಗತ್ಯ ಸಾಮಾಗ್ರಿಗಳ ಕಿಟ್ ವಿತರಣೆ

ವರದಿ : ಹಸೈನಾರ್ ಜಯನಗರ

ಬೆಳ್ಳಾರೆ : ಕೊರೋನಾ ವೈರಸ್ ನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಬೆಳ್ಳಾರೆ ಪಂಚಾಯತ್ ವ್ಯಾಪ್ತಿಯಲ್ಲಿ ಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ನೀಡಲಿರುವ ಅಗತ್ಯ ವಸ್ತುಗಳ ಕಿಟ್ ನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಳಾರೆ ವಲಯದ ವತಿಯಿಂದ ಬೆಳ್ಳಾರೆ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ಧನಂಜಯ್ ಕೆ.ಆರ್, ಕೋವಿಡ್19 ನಿಗ್ರಹ ದಳದ ಅಧಿಕಾರಿ ಮಣಿಕಂಠ, ಗ್ರಾ. ಪಂ ಉಪಾಧ್ಯಕ್ಷ ಮುಸ್ತಫಾ. ಕೆ ರವರಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ವಿಧಾನಸಭಾ ಸಮಿತಿ ಸದಸ್ಯರಾದ ಮಮ್ಮಾಲಿ ಹಾಜಿ, ಬಶೀರ್ ಬಿ.ಎ, ಬೆಳ್ಳಾರೆ ವಲಯ ಸಮಿತಿ ಸದಸ್ಯರಾದ ಅಬ್ದುಲ್‌ ರಹ್ಮಾನ್, ಫೈಝಲ್ ಜಾಬಿರ್ ಮತ್ತಿತ್ತರು ಉಪಸ್ಥಿತರಿದ್ದರು.

Leave A Reply

Your email address will not be published.