ಕ್ಯಾಂಪ್ಕೋ ವತಿಯಿಂದ ಏ.9 ರಿಂದ ಕೊಕ್ಕೋ ಖರೀದಿ ಆರಂಭ | ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ

ಕ್ಯಾಂಪ್ಕೋ ವತಿಯಿಂದ, ನಾಳಿದ್ದು ಏ.9 ರಿಂದ ಕೊಕ್ಕೋ ಖರೀದಿ ಆರಂಭವಾಗಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.

ಏ.9 ರಿಂದ ಪ್ರತೀ ಗುರುವಾರ ಸುಳ್ಯ, ವಿಟ್ಲ, ಅಡ್ಯನಡ್ಕ, ಕಡಬದ ಕ್ಯಾಂಪ್ಕೋ ಶಾಖೆಗಳಲ್ಲಿ ಕೊಕ್ಕೋ ಖರೀದಿ ನಡೆಯಲಿದೆ. ಪ್ರತೀ ಶುಕ್ರವಾರ, ಏ.10 ರಿಂದ ಪುತ್ತೂರು ಶಾಖೆಯಲ್ಲಿ ಕೊಕ್ಕೋ ಖರೀದಿ ಶುರುವಾಗಲಿದೆ.

ಏ.13 ರಿಂದ ಪ್ರತೀ ಸೋಮವಾರ ಬೆಳ್ತಂಗಡಿಯ ಶಾಖೆಯಲ್ಲಿ ಕೊಕ್ಕೋ ಖರೀದಿ ಮಾಡಲಾಗುತ್ತದೆ.

ಕೋರೋಣ ಲಾಕ್ ಡೌನ್ ನ ಕಾರಣದಿಂದ ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಮಾತ್ರ ಕೊಕ್ಕೋ ಖರೀದಿ ನಡೆಯುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ. ಕೃಷಿ ವಸ್ತು ಮಾರಾಟಕ್ಕೆ ಬರುವ ಹಿನ್ನೆಲೆಯಲ್ಲಿ ಕ್ಯಾಂಪ್ಕೋ ಐಡಿ ಕಾರ್ಡ್ ಅಥವಾ ಆರ್ ಟಿಸಿ ಜೊತೆ ಬರಬೇಕಾ ಗುತ್ತದೆ. ಮುಂದಿನ ದಿನಗಳಲ್ಲಿ  ಕೊಕ್ಕೋ ಖರೀದಿಯ ಅವಧಿ ವಿಸ್ತರಣೆ ಬಗ್ಗೆ ಮತ್ತು ಇತರೆ ಕಡೆಗಳಲ್ಲೂ ಖರೀದಿ ನಡೆಸಬೇಕೇ ಬೇಡವೇ ಎಂಬುದರ ಬಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ನಿರ್ಧರಿಸಲಾಗುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.

ಜಿಲ್ಲೆಯ ರೈತರ ಹಿತಕ್ಕಾಗಿ ಸಂಸದ ನಳಿನ್ ಕುಮಾರ್ ಕಟೀಲು, ಜಿಲ್ಲೆಯ ಎಲ್ಲಾ ಶಾಸಕರ ಪ್ರಯತ್ನ ಹಾಗೂ
ಜಿಲ್ಲಾಡಳಿತವು ಕೊಕ್ಕೋ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದಕ್ಕಾಗಿ ಕ್ಯಾಂಪ್ಕೋ ಹಾಗೂ ರೈತರ ಪರವಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸತೀಶ್ಚಂದ್ರ ತಿಳಿಸಿದ್ದಾರೆ.

Leave A Reply

Your email address will not be published.