ಜನತೆಯ ಇದೇ ರೀತಿಯ ಸಹಕಾರ ವಿದ್ದಲ್ಲಿ ಕೊರೋನಾ ವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ- ಸಂಸದ ಕಟೀಲ್

ದಕ್ಷಿಣ ಕನ್ನಡ ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇಂದು ವಿಶ್ವದ ದೊಡ್ಡ ದೊಡ್ಡ ರಾಷ್ಟ್ರಗಳು ಕೋರೋಣ ವೈರಸ್ಸಿನಿಂದ ತತ್ತರಿಸಿದ್ದು, ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕೊರೋನಾ ವೈರಸ್ಸನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ.

ಪ್ರಧಾನಮಂತ್ರಿ ಮೋದಿ ಯವರ ಉತ್ತಮ ಉತ್ತಮ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾದ ಹಿನ್ನೆಲೆಯಲ್ಲಿ ದೇಶದಲ್ಲಿ ಈ ವೈರಸ್ ಮೂರನೇ ಹಂತಕ್ಕೆ ಬಾರದೆ ನಿಯಂತ್ರಣದಲ್ಲಿದೆ. ವಿಶ್ವದ ಇತರ ರಾಷ್ಟ್ರಗಳನ್ನು ಹೋಲಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದ್ದು ಅದೇರೀತಿ ದೇಶದಲ್ಲಿ ಕರ್ನಾಟಕ ರಾಜ್ಯವು ಮುಖ್ಯಮಂತ್ರಿ ಯಡಿಯೂರಪ್ಪರವರ ನೇತೃತ್ವದಲ್ಲಿ ಕೊರೋಣ ವೈರಸ್ಸನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ.

ಇದಕ್ಕೆಲ್ಲ ಮೂಲ ಕಾರಣ ಜನರ ಸಹಕಾರ ಮತ್ತು ಜನರು ಸ್ವಯಂ ಪ್ರೇರಿತರಾಗಿ ವೈರಸ್ಸಿನ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಕೈಜೋಡಿಸಿರುವುದು.
ಕರ್ನಾಟಕ ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರಾರಂಭದಲ್ಲಿಯೇ ಜನಜಾಗೃತಿ ಗೊಳಿಸಿದ್ದು, ಜನತೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಮಾದರಿಯಾಗಿದ್ದಾರೆ.

ಸಂದರ್ಭ ಯೋಜಿತವಾಗಿ ಅವರು ತೆಗೆದುಕೊಂಡ ಶಿಸ್ತುಕ್ರಮ ಇಂದು ವೈರಸ್ ನಿಯಂತ್ರಣಕ್ಕೆ ಸಹಕಾರಿಯಾಗಿದೆ.ಜನರು ಭಯಬೀತ ಗೊಂಡಿರುವ ಕಾರಣ ಕೆಲವು ಸಮಸ್ಯೆಗಳು ಸ್ವಾಭಾವಿಕವಾಗಿ ಕಂಡುಬಂದಿದೆ.

ಪ್ರಧಾನಮಂತ್ರಿಯವರು ಕೂಡ ದೇಶದ ಜನತೆಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಜನ್ ಧನ್ ಖಾತೆಗೆ ಸಹಾಯಧನ ಜಮಾವಣೆ, ಕಿಸಾನ್ ಯೋಜನೆ, ಉಜ್ವಲ್ ಗ್ಯಾಸ್ ಯೋಜನೆ, ಇಎಂಐ ಗಳಲ್ಲಿ ರಿಯಾಯಿತಿ ಮುಂತಾದ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಜನತೆಗೆ ಸಹಕಾರಿಯಾಗಿದ್ದಾರೆ.

ಶಾಸಕರ ಸಹಾಯ ಕೇಂದ್ರಗಳು ಪ್ರಾರಂಭಗೊಂಡಿದ್ದು ಬಡವರಿಗೆ ಅಕ್ಕಿ ವಿತರಣೆ ಕೂಲಿಕಾರ್ಮಿಕರಿಗೆ ಅಕ್ಕಿ ಅಗತ್ಯ ವಸ್ತುಗಳ ವಿತರಣೆ ವಿವಿಧ ಸಂಘಟನೆಗಳ ಮೂಲಕ ನಡೆಯುತ್ತಿದ್ದು ಬಡಜನತೆಗೆ ಆಸರೆಯಾಗಿದೆ. ಬಡವರಿಗೆ ಸಹಾಯ ಮಾಡುವಾಗ ಮಾನವೀಯತೆಯ ದೃಷ್ಟಿಯಿಂದ ಮಾಡಬೇಕು ಪ್ರಚಾರಕ್ಕಾಗಿ ಮಾಡಬೇಡಿ. ನಮ್ಮ ಕರ್ತವ್ಯವೆಂದು ಪಾಲಿಸಿ ಮಾಡಬೇಕು. ಅದರೊಂದಿಗೆ ಸರಿಯಾದ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸಹಕಾರಿಯಾಗಬೇಕು ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.

ಇದೇ ವೇಳೆ ವೈದ್ಯರ ಮತ್ತು ಆಶಾ ಕಾರ್ಯಕರ್ತರ ಸೇವೆಯನ್ನು ಕೊಂಡಾಡಿದ ಸಂಸದರು ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೆ ಇಂತಹ ಸಂದರ್ಭದಲ್ಲಿ ಸೇವೆಯನ್ನು ಮಾಡುತ್ತಿರುವುದು ಪ್ರಶಂಸನೀಯವಾದುದು. ಇಂತಹ ವೇಳೆಯಲ್ಲಿ ಅವರುಗಳಿಗೆ ಕಿರುಕುಳ ನೀಡುವಂಥದ್ದು ಅವರ ಮೇಲೆ ಪುಂಡಾಟಿಕೆ ಮಾಡುವಂತ ಘಟನೆಗಳು ನಡೆದಿದ್ದಲ್ಲಿ ಕೂಡಲೇ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯಾ ಕಲ್ತಡ್ಕ, ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿ ಶುಭೋದ್ ಶೆಟ್ಟಿ ಮೇನಾಲ, ನಗರ ಪಂಚಾಯತ್ ಸದಸ್ಯ ವಿನಯ ಕಂದಡ್ಕ, ಬಿಜೆಪಿ ಪಕ್ಷದ ನಾಯಕರಾದ ಸುರೇಶ್ ಕಣೆಮರಡ್ಕ, ಮಹೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.

Leave A Reply

Your email address will not be published.