ಸುಳ್ಯ| ಕೊರೊನಾ ಜಾಗೃತಿ ಪ್ರಗತಿ ಪರಿಶೀಲನಾ ಸಭೆ | ಪತ್ರಕರ್ತರಿಗೆ ನಿರ್ಬಂಧ

ಸುಳ್ಯ: ಜಿಲ್ಲೆಯ ಐಎಎಸ್ ಅಧಿಕಾರಿ ಸೇರಿದಂತೆ ತಾಲೂಕು ಉಸ್ತುವಾರಿ ಅಧಿಕಾರಿಗಳ ನೇತೃತ್ವದಲ್ಲಿ ಕೊರೊನಾ ಜಾಗೃತಿ ಪ್ರಗತಿಪರಿಶೀಲನಾ ಸುಳ್ಯ ತಾಲೂಕು ನೊಡೇಲ್ ಅಧಿಕಾರಿಗಳ ಸಭೆ ಸೋಮವಾರ ಸಂಜೆ ನಡೆದಿದ್ದು, ಪತ್ರಕರ್ತರಿಗೆ ನಿರ್ಬಂಧ ಹೇರಿ ಗುಪ್ತವಾಗಿ ಸುಳ್ಯ ತಾಲೂಕು ಕಚೇರಿಯಲ್ಲಿ ಸಭೆ ನಡೆದಿದೆ. ಸಂಜೆ ಸಭೆಯ ವಿಷಯ ತಿಳಿದು ತಾಲೂಕು ಕಚೇರಿಗೆ ಪತ್ರಕರ್ತರು ಆಗಮಿಸಿದರು.

ಇದೇ ವೇಳೆ ಪುತ್ತೂರು ಸಹಾಯಕ ಕಮಿಷನರ್ ರವರು ಕಂದಾಯ ವೃತ್ತನಿರೀಕ್ಷಕರನ್ನು ಕರೆದು ಸಭೆಯಿಂದ ಹೊರಹೊಗುವಂತೆ ಸೂಚನೆ ನೀಡಲಾಗಿದ್ದು, ಸುಮಾರು 4.30ರಿಂದ 6ಗಂಟೆ ವರೆಗೆ ಸಭೆ ನಡೆಯಿತು.

ತಾಲೂಕಿನ ಸಮಗ್ರ ಮಾಹಿತಿ ಸಂಗ್ರಹಿಸಲು ಅವಕಾಶ ನೀಡದಿರುವುದು ವಿಪರ‍್ಯಾಸವಾಗಿದ್ದು, ಸಭೆಗೆ ಬಂದ ಪತ್ರಕರ್ತರ ಅಸಮಾಧಾನಕ್ಕೂ ಕಾರಣವಾಗಿದೆ. ಐಎಎಸ್ ಅಧಿಕಾರಿ ರಾಹುಲ್ ಸಿಂಧೆ, ಅಪರ ಜಿಲ್ಲಾಧಿಕಾರಿ ರಾಜ್ ಮೊಗವೀರ, ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್, ತಹಸೀಲ್ದಾರ್ ಅನಂತ ಶಂಕರ ಇದ್ದರು. ತಾಲೂಕಿನ ಗ್ರಾಮಗಳ ನೊಡೆಲ್ ಅಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Leave A Reply

Your email address will not be published.