ಸುಳ್ಯ| ಬೀರಮಂಗಲ ನಾಗರಿಕ ಸಮಿತಿಯ ನೇತೃತ್ವದಲ್ಲಿ ಮನೆ ಬಾಗಿಲಿಗೆ ತರಕಾರಿ ಪೂರೈಕೆ

ಸುಳ್ಯ: ಬೀರಮಂಗಲ ನಾಗರಿಕ ಸಮಿತಿ ಹಾಗೂ ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತ ರವರ ನೇತೃತ್ವದಲ್ಲಿ ಕೊರೊನ ಮಹಾಮಾರಿಯ ವಿರುದ್ಧ ಭಾರತ ಸರಕಾರ ಘೋಷಿಸಿದ ಲಾಕ್ ಡೌನ್ ನ ಪರಿಣಾಮ ಜನರು ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ,ಬೀರಮಂಗಲದ ಜನತೆಗೆ ಮೈಸೂರು ಜಿಲ್ಲೆಯ ಕೆ.ಆರ್.ನಗರದ ತರಕಾರಿ ವ್ಯಾಪಾರಸ್ಥರ ಮುಖಾಂತರ ಮಾತುಕತೆ ನಡೆಸಿ ಬೀರಮಂಗಲದ ಜನತೆಗೆ ಇಂದು ಅತೀ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ತರಕಾರಿ ವಿತರಿಸಲು ಸಹಕರಿಸಿದರು.

ದಕ್ಷಿಣ ಬೀರಮಂಗಲದ ಪ್ರತಿ ಮನೆಗಳಿಗೆ ತೆರಳಿ ತರಕಾರಿ ವಿತರಣೆ ಬಗ್ಗೆ ಮಾಹಿತಿ ನೀಡಲು ಸಹಕರಿಸಿದ ಚೆನ್ನಕೇಶವ ಬಂಗ್ಲೆಗುಡ್ಡೆ ಇನ್ನೆರಡು ದಿನಗಳಲ್ಲಿ ಮತ್ತೆ ನಿಮ್ಮ ಮನೆ ಬಾಗಿಲಿಗೆ ತರಕಾರಿ ವಿತರಣಾ ವ್ಯವಸ್ಥೆ ನಡೆಯಲಿದೆ ಎಂದು ಅವರು ಹೇಳಿದರು.

ವಿತರಣಾ ಸಂಧರ್ಭ ನಗರ ಪಂಚಾಯತ್ ನ ಮುಖ್ಯಾಧಿಕಾರಿಗಳು, ನಗರ ಪಂಚಾಯತ್ ಸದಸ್ಯ ಡೇವಿಡ್ ಧೀರ ಕ್ರಾಸ್ತಾ ಹಾಗೂ ನಗರ ಪಂಚಾಯತ್ ನ ಮಾಜಿ ಸದಸ್ಯರುಗಳಾದ ಶ್ರೀಮತಿ ಸುನಿತಾ ಡಿ’ಸೋಜ ಹಾಗೂ ಶ್ರೀಮತಿ ಹಾಜಿರ ಅವರು ಉಪಸ್ಥಿತರಿದ್ದರು.

ಜೊತೆಗೆ ಬೀರಮಂಗಲ ನಾಗರಿಕ ಸಮಿತಿಯ ಗೌರವ ಸಲಹೆಗಾರರಾದ ಬೆಳ್ಯಪ್ಪ ಗೌಡ.ಡಾ.ಪೂವಪ್ಪ ಕಣಿಯೂರು, ಅಜಿತ್ ಬೀರಮಂಗಲ ಹಾಗೂ ದೀಪಕ್ ಲೋಬೊರವರು ಉಪಸ್ಥಿತರಿದ್ದರು

Leave A Reply

Your email address will not be published.