” ಮುಸ್ಲಿಮರ ತಂಟೆಗೆ ಬಂದರೆ ಕೈ,ಕಾಲು ಗಂಟು ಮುರಿಯುತ್ತೇವೆ ” | ಅಕ್ಷಯ್ ರಜಪೂತ್ ಸಹಿತ 3 ಬಜರಂಗದಳ ಕಾರ್ಯಕರ್ತರಿಗೆ ಜೀವ ಬೆದರಿಕೆ

ಮಂಗಳೂರು : ವಿಟ್ಲದ ಬಜರಂಗದಳದ ಮೂವರು ಕಾರ್ಯಕರ್ತರಿಗೆ ಅಂತರಾಷ್ಟ್ರೀಯ ಕರೆಯ ಮೂಲಕ ಜೀವ ಬೆದರಿಕೆ ಒಡ್ಡಿದ ಘಟನೆಯ ಕುರಿತು ವಿಟ್ಲದಲ್ಲಿ ವರದಿಯಾಗಿದೆ.

ಬಜರಂಗದಳದ ಮುಖಂಡರಾದ ಅಕ್ಷಯ ರಜಪೂತ್, ಚರಣ್ ಕಾಪುಮಜಲು ಹಾಗೂ ಕಿರಣ್ ಕುಮಾರ್ ಎಂಬವರಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಕಿರಣ್ ಕುಮಾರ್ ಎಂಬವರಿಗೆ ರಾತ್ರಿ ಅಂತರಾಷ್ಟ್ರೀಯ ಕರೆ ಮಾಡಿ ಬೆದರಿಕೆ ಕರೆ ಮಾಡಿರುವುದಾಗಿ ಆರೋಪಿಸಲಾಗಿದೆ.

ಘಟನೆಯ ವಿವರ ಏನು?

ಎ.4 ರಾತ್ರಿ ಸುಮಾರು 10 ಗಂಟೆಗೆ +6274657 ಎಂಬ ವಿದೇಶಿ ನಂಬರ್ ನಿಂದ ಬಜರಂಗದಳದ ಪ್ರಮುಖರಾದ ಕಿರಣ್ ಕುಮಾರ್ ಗೆ ಅಂತರಾಷ್ಟ್ರೀಯ ಕರೆಯೊಂದು ಬಂದಿತ್ತು. ಅತ್ತ ಕಡೆಯಿಂದ ಮಾತನಾಡಿದ ವ್ಯಕ್ತಿ ಬೆದರಿಕೆ ಹಾಕಿದ್ದ.

“ನಿನಗೆ ಮುಸ್ಲಿಂ ರ ವಿಷಯ ಬೇಡ. ಒಂದು ವೇಳೆ ನೀನು ಮುಸ್ಲಿಂರ ವಿಷಯಕ್ಕೆ ಬಂದರೆ ಕೈ ಕಾಲು ಗಂಟು ಮುರಿದು ಜೀವ ತೆಗೆಯುತ್ತೇವೆ. ಈ ಬಗ್ಗೆ ಅಕ್ಷಯ್ ರಜಪೂತ್‌ ಹಾಗೂ ಚರಣ್ ಗೆ ತಿಳಿಸಿ. ಈ ಬಗ್ಗೆ ಪ್ರತ್ಯೇಕವಾಗಿ ಎಚ್ಚರಿಕೆ ಕೊಡುವುದಿಲ್ಲ. ಒಂದು ವೇಳೆ ಹಾರಾಟ ಜಾಸ್ತಿಯಾದರೆ, ನಮ್ಮ ಸುದ್ದಿಗೆ ಬಂದರೆ ಎಲ್ಲರನ್ನು ಶೂಟ್ ಮಾಡುತ್ತೇವೆ.”

-ಎಂಬ ಜೀವ ಬೆದರಿಕೆಯ ಕರೆ ಬಂದಿತ್ತು.

ತಕ್ಷಣ ಜೀವ ಬೆದರಿಕೆಯ ವಿಷಯವನ್ನು ಕಿರಣ್ ಕುಮಾರ್ ಅವರು ತನ್ನ ಗೆಳೆಯರಿಗೆ ತಿಳಿಸಿ ವಿಟ್ಲ ಠಾಣೆಗೆ ದೂರು ಸಲ್ಲಿಸಿದ್ದಾರೆ.

Leave A Reply

Your email address will not be published.