ಸುಬ್ರಹ್ಮಣ್ಯ: ತೆಂಗಿನಮರಕ್ಕೆ ವಿದ್ಯುತ್ ತಂತಿ ತಾಗಿ ಬೆಂಕಿ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದಲ್ಲಿ ಇಂದು ಸಂಜೆ ಬೀಸಿದ ಗಾಳಿಗೆ ತೆಂಗಿನಮರವೊಂದಕ್ಕೆ ವಿದ್ಯುತ್ ತಂತಿ ತಾಗಿ ಬೆಂಕಿ ಹಿಡಿದ ಘಟನೆ ನಡೆದಿದೆ.

ಕುಕ್ಕೆ ಸುಬ್ರಹ್ಮಣ್ಯ ದಿಂದ ಆದಿ ಸುಬ್ರಹ್ಮಣ್ಯ ಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ಇದ್ದ ತೆಂಗಿನಮರಕ್ಕೆ ಅದರ ಸಮೀಪದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯು ಗಾಳಿಗೆ ತೆಂಗಿನಗರಿಗೆ ತಾಗಿ ಬೆಂಕಿ ಹಿಡಿದು ಕೊಂಡಿದೆ.

ವಿದ್ಯುತ್ ತಂತಿಯಿಂದಾಗಿ ಬೆಂಕಿ‌ ಹಿಡಿದುದರಿಂದ ನೀರು ಹಾಕಿ ಬೆಂಕಿ ನಂದಿಸುವುದು ಅಪಾಯಕಾರಿಯಾಗಿದ್ದರಿಂದ ಸ್ಥಳೀಯರು ಮೆಸ್ಕಾಂಗೆ ಮಾಹಿತಿ ನೀಡಿದರು.

ಆದರೆ ಬೆಂಕಿಯ ತೀವ್ರತೆಗೆ ತೆಂಗಿನ ಸಂಪೂರ್ಣ ಬೆಂದು ಹೋಗಿದೆ.

Leave A Reply

Your email address will not be published.