ಸರ್ವೆ ಕಲ್ಪಣೆ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಜತೆಗೆ ಮಾಸ್ಕ್ ವಿತರಣೆ | ಶಿವನಾಥ ರೈ ಮೇಗಿನಗುತ್ತು ನೇತೃತ್ವದಲ್ಲಿ ಮನೆ ಬಾಗಿಲಿಗೆ ರೇಷನ್

ಪುತ್ತೂರು: ಸರ್ವೆ ಗ್ರಾಮದ ಕಲ್ಪಣೆಯಲ್ಲಿರುವ ನ್ಯಾಯ ಬೆಲೆ ಅಂಗಡಿಯಲ್ಲಿ ಎ.೫ರಂದು ಅಕ್ಕಿ ವಿತರಣೆ ಆರಂಭಗೊಂಡಿದ್ದು ಅಕ್ಕಿಯ ಜೊತೆ ಪ್ರತೀ ಗ್ರಾಹಕರಿಗೂ ಮಾಸ್ಕ್‌ನ್ನು ವಿತರಿಸಲಾಗುತ್ತಿದ್ದು ಆ ಮೂಲಕ ಕೊರೋನಾ ಜಾಗೃತಿಯನ್ನೂ ನ್ಯಾಯ ಬೆಲೆ ಅಂಗಡಿ ಮೂಲಕ ಮಾಡಲಾಗುತ್ತಿದೆ. ಎ.೫ರಂದು ಬೆಳಿಗ್ಗೆಯೇ ಸೊಸೈಟಿ ಎದುರು ಗ್ರಾಹಕರು ಅಂತರ ಕಾಯ್ದುಕೊಂಡು ಕ್ಯೂ ನಿಂತಿದ್ದ ದೃಶ್ಯ ಕಂಡು ಬಂದಿತ್ತು. ಸೊಸೈಟಿಯ ಸಿಬ್ಬಂದಿ ರಿತೇಶ್ ರೈ ಸರ್ವೆ ಅವರು ಕೊರೋನಾ ಜಾಗೃತಿ ಸಲುವಾಗಿ ಮಾಸ್ಕ್ ವಿತರಿಸುತ್ತಿದ್ದುದು ಕಂಡು ಬಂತು.

1 ಸಾವಿರ ಮಾಸ್ಕ್ ವಿತರಣೆ

ಮುಂಡೂರು ಪ್ರಾ.ಕೃ.ಪ.ಸಹಕಾರಿ ಸಂಘದ ವತಿಯಿಂದ ಸರ್ವೆ ಕಲ್ಪಣೆ ಹಾಗೂ ಮುಂಡೂರು ನ್ಯಾಯ ಬೆಲೆ ಅಂಗಡಿಗಳಲ್ಲಿ ಒಟ್ಟು ಒಂದು ಸಾವಿರ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ ತಿಳಿಸಿದ್ದಾರೆ.

ಸೇವಾ ಕೇಂದ್ರದ ಮೂಲಕ ಮನೆಬಾಗಿಲಿಗೆ ರೇಷನ್…!

ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಜನರು ತೊಂದರೆಗೀಡಾಗುವುದು ಬೇಡ ಎಂಬ ನಿಟ್ಟಿನಲ್ಲಿ ಮುಂಡೂರು ಗ್ರಾ.ಪಂ ಸದಸ್ಯ ಶಿವನಾಥ ರೈ ಮೇಗಿನಗುತ್ತು ನೇತೃತ್ವದಲ್ಲಿ ಸ್ಪರ್ಶ ಸೇವಾ ಕೇಂದ್ರ ಎನ್ನುವ ಸಹಾಯವಾಣಿ ಆರಂಭಿಸಲಾಗಿದ್ದು ಮುಂಡೂರು ಗ್ರಾ.ಪಂ ವತಿಯಿಂದ ಅಕ್ಕಿ ಸಾಗಿಸಲು ವಾಹನದ ವ್ಯವಸ್ಥೆ ಮಾಡಲಾಗಿದೆ.

ಶಿವನಾಥ ರೈ ಮೇಗಿನಗುತ್ತು

ಅದರ ಮೂಲಕ ಅಗತ್ಯವಿರುವ ಮನೆಗಳಿಗೆ ರೇಷನ್‌ನ್ನು ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಜನರ ಅಗತ್ಯತೆಗನುಸಾರವಾಗಿ ಹಲವಾರು ಮಂದಿಯ ಮನೆ ಬಾಗಿಲಿಗೆ ರೇಷನ್ ಅಕ್ಕಿಯನ್ನು ತಲುಪಿಸಿಸುವ ಕಾರ್ಯವನ್ನು ಮಾಡಿದ್ದೇವೆ ಎಂದು ಮುಂಡೂರು ಗ್ರಾ.ಪಂ ಸದಸ್ಯ ಶಿವನಾಥ ರೈ ಮೇಗಿನಗುತ್ತು ತಿಳಿಸಿದ್ದಾರೆ.

Leave A Reply

Your email address will not be published.