ಕಡಬ | ಕಾರು ಬ್ರೇಕ್ ಫೇಲ್, ಅಪ್ ಸೈಡ್ ಡೌನ್ | ಹಲವರಿಗೆ ಗಾಯ

ಕಡಬ, ಎ.06: ಕಡಬದಲ್ಲಿ ಕಾರೊಂದು ಉರುಳಿ ಬಿದ್ದು ಅದರಲ್ಲಿದ್ದವರು ಪವಾಡಸದೃಶರಾಗಿ ಪಾರಾಗಿ ಬಂದಿದ್ದಾರೆ.  

ಕಡಬ – ಪಂಜ ರಸ್ತೆಯ ಪುಳಿಕುಕ್ಕು ಬಳಿ ಇಂದು ನಸುಕಿ ಜಾವ ಘಟನೆ ಸಂಭವಿಸಿದೆ.

ಸುಳ್ಯ ಸಮೀಪದ ಸಂಬಂಧಿಕರೋರ್ವ ರು ಮೃತಪಟ್ಟ ಹಿನ್ನೆಲೆಯಲ್ಲಿ ಕಡಬದ ಕುಟುಂಬವೊಂದು ಮಾರುತಿ 800 ಕಾರಿನಲ್ಲಿ ಕಡಬದಿಂದ ಸುಳ್ಯಕ್ಕೆ ಹೊರಡಿತ್ತು. ಆ ವೇಳೆ ಬ್ರೇಕ್ ವೈಫಲ್ಯಕ್ಕೊಳಗಾದ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನಂತರ ಅಪ್ಸೈಡ್ ಡೌನ್ ಆಗಿ ಬಿದ್ದು ಕಾರಿಗೆ ತೀವ್ರ ಹಾನಿಯಾಗಿದೆ.

ಆದರೆ ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡದ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ.

Leave A Reply

Your email address will not be published.