ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ, ಕಿಡಿಗೇಡಿಗಳನ್ನು ಬಂಧಿಸಿ | ಗೊನೆ ಮುಹೂರ್ತ ವಿಡಿಯೋ ಎಡಿಟ್ ಹಿನ್ನೆಲೆ | ವಿ ಹೆಚ್ ಪಿ, ಭಜರಂಗದಳ ಆಗ್ರಹ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಕೊನೆ ಮುಹೂರ್ತ ಸಮಾರಂಭದಲ್ಲಿ ಸರಕಾರದ ನಿಯಮ ಉಲ್ಲಂಘಿಸಿ ಜನರು ಗುಂಪು ಸೇರಿದ್ದಾರೆ ಎಂದು ಬಿಂಬಿಸಲು ದುಷ್ಕರ್ಮಿಗಳು ಹೊರಟಿದ್ದರು. ಅದರಂತೆ ವಿಡಿಯೋ ಒಂದನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿಬಿಟ್ಟಿದ್ದರು. ಅದು ಜನರ ಭಕ್ತಾದಿಗಳ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಷಯದ ಬಗ್ಗೆ ವಿಶ್ವ ಹಿದೂ ಪರಿಷತ್ ಮತ್ತು ಭಜರಂಗದಳ ಪತ್ರಿಕಾ ಪ್ರಕಟಣೆ ಹೊರಡಿಸಿವೆ.
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ ಪುತ್ತೂರು ಸೀಮೆಯ ಪ್ರಧಾನ ದೇವಾಲಯವಾಗಿದ್ದು ಪ್ರತಿವರ್ಷ ಲಕ್ಷಾಂತರ ಭಕ್ತಾದಿಗಳು ಸೇರಿ ವಿಜೃಂಭಣೆಯಿಂದ ಜಾತ್ರೋತ್ಸವ ಆಚರಿಸಲಾಗುತ್ತಿದೆ.
ಈ ವರ್ಷ ಕೋವಿಡ್ 19 ಮಹಾಮಾರಿ ಹಾವಳಿಯಿಂದಾಗಿ ಸರಕಾರ ಲಾಕ್ಡೌನ್ ಆದೇಶವನ್ನು ನೀಡಿದ್ದು ಈ ಆದೇಶಕ್ಕೆ ತಲೆಭಾಗಿ ಜಾತ್ರೋತ್ಸವವನ್ನು ಕೇವಲ ಪ್ರಮುಖ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿ,ದೇವಾಲಯ ಅರ್ಚಕರು, ಚಾಕರಿಯವರು ಹಾಗೂ ಸೀಮಿತ ದೇವಾಲಯ ಸಿಬ್ಬಂದಿಗಳು ಸೇರಿ ಅತ್ಯಂತ ಸರಳವಾಗಿ ಜಾತ್ರೋತ್ಸವವನ್ನು ನಡೆಸಲು ದೇವಾಲಯದ ವ್ಯವಸ್ಥಾಪನ ಸಮಿತಿಯವರು ತೀರ್ಮಾನಿಸಿದ್ದಾರೆ.
ಅದರಂತೆ ಸೀಮಿತ ವ್ಯಕ್ತಿಗಳು ಸೇರಿ ಎಪ್ರಿಲ್ 1 ನೇ ತಾರೀಖಿನಂದು ಜಾತ್ರೋತ್ಸವದ ಪ್ರಯುಕ್ತ ಗೊನೆ ಮುಹೂರ್ತ ಕಾರ್ಯಕ್ರಮವನ್ನು ನಡೆಸಲಾಗಿತ್ತು.
ಅದರೆ ಕೆಲವು ಮತಾಂಧ ಕಿಡಿಗೇಡಿಗಳು ಖಾಸಗಿ ವಾಹಿನಿಯೊಂದರ ವಿಡಿಯೋ ಕ್ಲಿಪಿಂಗ್ ಗೆ ಗೊನೆ ಮುಹೂರ್ತ ಫೋಟೋವನ್ನು ಎಡಿಟ್ ಮಾಡಿ ದೇವಾಲಯದ ವ್ಯವಸ್ಥಾಪನ ಸಮಿತಿಯವರು ವಿಜೃಂಭಣೆಯಿಂದ ಜಾತ್ರೋತ್ಸವ ಅಚರಿಸಲು ತಯಾರಿ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗಿದೆ.
ಅದರಿಂದ ಮಹಾಲಿಂಗೇಶ್ವರ ದೇವಾಲಯ ಹಾಗೂ ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೇಂದು ಸರಕಾರ ಹಾಗೂ ಪೋಲಿಸ್ ಇಲಾಖೆಗೆ ಅಗ್ರಹಿಸುತ್ತಿದ್ದೇವೆ.
ಡಾ.ಕೃಷ್ಣ ಪ್ರಸನ್ನ
ಜಿಲ್ಲಾ ಅಧ್ಯಕ್ಷರು
ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲೆ
ಶ್ರೀಧರ್ ತೆಂಕಿಲ
ಜಿಲ್ಲಾ ಸಂಚಾಲಕ್
ಬಜರಂಗದಳ ಪುತ್ತೂರು ಜಿಲ್ಲೆ