ಉಪ್ಪಿನಂಗಡಿಯ ವ್ಯಕ್ತಿ ದೆಹಲಿ ಮರ್ಕಜ್ ನಿಜಾಮುದ್ದೀನ್ ಗೆ ಹೋಗಿ ವಾಪಸ್ಸಾದ ಸುದ್ದಿ । ಪತ್ತೆ ಕಾರ್ಯ ಪ್ರಗತಿಯಲ್ಲಿ

Share the Article

ಉಪ್ಪಿನಂಗಡಿಯ ವ್ಯಕ್ತಿಯೊಬ್ಬ ದೆಹಲಿಯ ವಿವಾದಿತ ಮರ್ಕಜ್ ನಿಜಾಮುದ್ದೀನ್ ನಲ್ಲಿ ಧಾರ್ಮಿಕ ಸಭೆಗೆ ಹೋಗಿ ವಾಪಸ್ಸು ಉಪ್ಪಿನಂಗಡಿಗೆ ಬಂದಿದ್ದಾನೆ ಎಂದು ಮಾಹಿತಿ ಬಂದಿದೆ.

ಆತ ಉಪ್ಪಿನಂಗಡಿ ನಿವಾಸಿಯಾಗಿದ್ದು ಮಾರ್ಚ್ 8 ಕ್ಕೆ ದೆಹಲಿಗೆ ಹೋಗಿದ್ದ. ಆತನನ್ನು ಪತ್ತೆ ಹಚ್ಚಿ ಆತನ ಜತೆ ಸಂಪರ್ಕಕ್ಕೆ ಬಂದವರ ಮಾಹಿತಿ ಕಲೆ ಹಾಕುವತ್ತ ಪ್ರಯತ್ನ ಸಾಗಿದೆ ಎನ್ನಲಾಗಿದೆ.

ಆ ವ್ಯಕ್ತಿ ಸಂಘಟನೆಯೊಂದರ ಮುಖಂಡ ಎನ್ನಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.

ಕಳೆದ ಮಾರ್ಚ್ 8-10 ರ ಸುಮಾರಿಗೆ ಪಶ್ಚಿಮ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಜ್ ನಿಜಾಮುದ್ದೀನ್ ಎಂಬ ಕಟ್ಟಡದಲ್ಲಿ ತಂಬ್ಳಿಘಿ ಜಮಾತ್ ಸಂಸ್ಥೆಯ ಅನುಯಾಯಿಗಳು ಸುಮಾರು 2100 ಕ್ಕೂ ಹೆಚ್ಚು ಜನ ಜನ ಸೇರಿಕೊಂಡಿದ್ದರು. ಅವರಲ್ಲಿ 1100 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ತಮಿಳಿನಾಡಿನಲ್ಲಿ ನಿನ್ನೆ 50 ಜನ ಕೊರೋನಾ ಪಾಸಿಟಿವ್. ಅವರಲ್ಲಿ 45 ಜನ ದೆಹಲಿಯ ಮಸೀದಿಗೆ ಭೇಟಿ ನೀಡಿದವರು. ಹೆಚ್ಚಿನ ಮಾಹಿತಿಗೆ ಕೆಳಗಿನ ಲಿಂಕ್ ಓಪನ್ ಮಾಡಿ.

Leave A Reply

Your email address will not be published.