ತೊಕ್ಕೊಟ್ಟು ಧರ್ಮಗುರು ದೆಹಲಿಯ ಮೃತ್ಯು ಕೂಪದಿಂದ ವಾಪಸ್ । ವೆನ್ ಲಾಕ್ ಆಸ್ಪತ್ರೆಗೆ ದಾಖಲು । ದಕ್ಷಿಣ ಕನ್ನಡ ಎಷ್ಟು ಸೇಫ್ ?!

ದೆಹಲಿಯ ಮರ್ಕಜ್ ನಿಜಾಮುದ್ದೀನ್ ಎಂಬ 100 ವರ್ಷ ವಯಸ್ಸಿನ ಕಟ್ಟಡದಲ್ಲಿ ನಡೆದ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದ ಒಟ್ಟು ಜನರಲ್ಲಿ ಈಗಾಗಲೇ 10 ಜನ ಕೊರೋನಾ ರೋಗಕ್ಕೆ ಬಲಿಯಾಗಿದ್ದಾರೆ. ಅವರಲ್ಲಿ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಜನರಲ್ಲಿ ಒಟ್ಟು 100 ಜನ ಕೊರೋನಾದಿಂದ ಸೋಂಕಿತರಾಗಿದ್ದಾರೆ.
ಹಾಗೆ ದೆಹಲಿಯ ಮೃತ್ಯು ಕೂಪದಿಂದ ಬಂದ ನಮ್ಮ ಮಂಗಳೂರಿನ ತೊಕ್ಕೊಟ್ಟುವಿನ ಧರ್ಮ ಗುರು ಕೂಡ ಒಬ್ಬರು. ಅವರನ್ನು ಈಗ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು- ಉಡುಪಿಯಿಂದ ಒಟ್ಟು 15 ಜನಕ್ಕೂ ಮಿಕ್ಕಿ ಅಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ದಕ್ಷಿಣ ಕನ್ನಡ ಎಷ್ಟು ಸೇಫ್ ಎಂಬ ಪ್ರಶ್ನೆ ಎದ್ದಿದೆ.

ಕಳೆದ ಮಾರ್ಚ್ 8-10 ರ ಸುಮಾರಿಗೆ ಪಶ್ಚಿಮ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಜ್ ನಿಜಾಮುದ್ದೀನ್ ಎಂಬ ಕಟ್ಟಡದಲ್ಲಿ ತಂಬ್ಳಿಘಿ ಜಮಾತ್ ಸಂಸ್ಥೆಯ ಅನುಯಾಯಿಗಳು ಸುಮಾರು 2100 ಕ್ಕೂ ಹೆಚ್ಚು ಜನ ಜನ ಸೇರಿಕೊಂಡಿದ್ದರು. ಅವರಲ್ಲಿ 1100 ಮಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ತಮಿಳಿನಾಡಿನಲ್ಲಿ ನಿನ್ನೆ 50 ಜನ ಕೊರೋನಾ ಪಾಸಿಟಿವ್. ಅವರಲ್ಲಿ 45 ಜನ ದೆಹಲಿಯ ಮಸೀದಿಗೆ ಭೇಟಿ ನೀಡಿದವರು. ವಿದೇಶೀಯರೂ ಸೇರಿದಂತೆ ದೇಶದ ಮೂಲೆ ಮೂಲೆಗಳಿಂದಲೂ ಧರ್ಮಗುರುಗಳು ಅಲ್ಲಿ ಭೇಟಿಯಾಗಿದ್ದರು. ಯಾರೆಲ್ಲ ಅಲ್ಲಿ ರೋಗವನ್ನು ಎಕ್ಸ್ ಚೇಂಜ್ ಮಾಡಿಕೊಂಡರೋ ದೇವರೇ ಬಲ್ಲ.

ಪ್ರಧಾನಿ ಮೋದಿಯವರು, ಆ ಎಲ್ಲ ವಿದೇಶೀಯರನ್ನು ಹುಡುಕಿ ಗಡೀಪಾರು ಮಾಡುವಂತೆ ಆದೇಶಿಸಿದ್ದಾರೆ. ಎಲ್ಲ ರಾಜ್ಯಗಳಿಗೂ ಸಂದೇಶ ಹೋಗಿದ್ದು, ಶೀಘ್ರ ಮಸೀದಿಯಲ್ಲಿ ಭಾಗವಹಿಸಿದ ಎಲ್ಲರನ್ನೂ ಪತ್ತೆ ಹಚ್ಚಿ ಹೋಂ ಕ್ವಾರಂಟೈನ್ ನಲ್ಲಿಡಲು ಸೂಚಿಸಲಾಗಿದೆ.

ಧರ್ಮಗುರು ಅಂದ ಮೇಲೆ ನೂರಾರು ಜನರನ್ನು ಭೇಟಿಯಾಗುತ್ತಾರೆ. ಅವರಿವರ ಜತೆ ಸಂಭಾಷಣೆ ನಡೆಯುತ್ತದೆ. ಒಂದೊಮ್ಮೆ ಅವರಿಗೆ ಸೋಂಕು ತಗಲಿದ್ದರೆ ಖುದಾ ಕೂಡಾ ನಮ್ಮನ್ನು ಕೈ ಬಿಟ್ಟ ಹಾಗೆ. ಯಾಕೆಂದರೆ, ಸಾವಿರಾರು ಜನರ ಮಾಸ್ ಸೋಂಕು ಆಗುವ ಸನ್ನಿವೇಶ ಸೃಷ್ಟಿಯಾಗುತ್ತದೆ. ಆ ಸೋಂಕು ಅನಿಯಂತ್ರಿತವಾಗಿ ಹರಡುತ್ತದೆ. ಆ ಧರ್ಮಗುರು ಆರೋಗ್ಯವಾಗಿರಲಿ ಎಂದು ನಾವೆಲ್ಲಾ ಧರ್ಮಾತೀತವಾಗಿ ಮನೆಯಲ್ಲೇ ಕುಳಿತು ಪ್ರಾರ್ಥಿಸುವುದೊಂದೇ ಈಗ ಉಳಿದಿರುವ ಪರಿಹಾರ.

ನಿನ್ನೆಯ ಸುದ್ದಿ :

ದೆಹಲಿ ಮಸೀದಿಯಲ್ಲಿ ಸೇರಿದ್ದ 441 ಜನರಿಗೆ ಕೊರೋನಾದ ಲಕ್ಷಣಗಳು ಗೋಚರಿಸಿವೆ. ಈ ಸುದ್ದಿ ತಿಳಿಯುತ್ತಲೇ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೆಂಡಾಮಂಡಲವಾಗಿದ್ದಾರೆ. ಮರ್ಕಜ್ ನಿಜಾಮುದ್ದೀನ್ ಮಸೀದಿಯ ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ” ಇದೊಂದು ಅತ್ಯಂತ ಬೇಜಾವಾಬ್ದಾರಿಯ ಕೃತ್ಯ. ಪ್ರಪಂಚದೆಲ್ಲೆಡೆ ಸಾವಿರಾರು ಜನ ಸಾಯುತ್ತಿದ್ದಾರೆ. ಮಂದಿರ ಮಸೀದಿಗಳು ಎಲ್ಲವೂ ಮುಚ್ಚಿರುವಾಗ ಇಲ್ಲಿ ಜನ ಸೇರಿದ್ದಾರೆ. ” ಎಂದು ಮಸೀದಿಯಲ್ಲಿ ಸೇರಲು ಬಿಟ್ಟ ಆಡಳಿತ ಮಂಡಳಿಯವರನ್ನು ದೂರಿದ್ದಾರೆ.

Leave A Reply

Your email address will not be published.