ಕೋರೋನಾ | ರೈತರ ಸಂಕಷ್ಟಕ್ಕೆ ಮುಖ್ಯಮಂತ್ರಿ ಯಿಂದ ಒಂದಷ್ಟು ರಿಲೀಫ್

“ಲಾಭ ಬೇಡ, ಕನಿಷ್ಠ ಅಗತ್ಯಗಳಿಗಾಗಿ ಕೃಷಿ ಉತ್ಪನ್ನಗಳಿಗೆ ಬೆಲೆ ಸಿಕ್ಕರೆ ಸಾಕು”. ಇಂದಿನ ದಿನದಲ್ಲಿ ಇದು ರೈತನ ಮನಸ್ಥಿತಿ. ಕೊರೋನ ಸೋಂಕು ತಡೆಗಾಗಿ ಸರ್ಕಾರ ಘೋಷಿಸಿರುವ ಲಾಕ್ ಡೌನ್ ನಿಂದಾಗಿ ರಾಜ್ಯದಲ್ಲಿ ತರಕಾರಿ, ಸೊಪ್ಪು ಹಾಗೂ ಹಣ್ಣು ಹಂಪಲು ಸಾಗಣೆಯಲ್ಲಿ ಭಾರೀ ವ್ಯತ್ಯಯವಾಗುತ್ತಿದೆ. ಇದಂರಿಂದಾಗಿ ರೈತರ ಪಾಡು ಕೇಳುವವರು ಯಾರೂ ಇಲ್ಲ ಎಂಬಂತಾಗಿದೆ. ಲಕ್ಷಾಂತರ ಖರ್ಚು ಮಾಡಿ ಬೆಳೆದ ಬೆಳೆ ನಷ್ಟಕ್ಕೀಡಾಗಿದೆ. ಖರೀದಿದಾರರಿಲ್ಲ ! ಮಾರಾಟಕ್ಕೆ ಸುವ್ಯವಸ್ಥೆಯಿಲ್ಲ ಎಂಬಂತಾಗಿದೆ.

ರೈತರು ಬೆಳೆಗಳನ್ನು ತಿಪ್ಪೆಗೆಸೆದರು, ಉಚಿತವಾಗಿ ನೀಡಿದರು, ಕೆರೆಗೆ ಸುರಿದರು ಮತ್ತು ಟ್ರ್ಯಾಕ್ಟರ್ ಬಳಸಿ ನಾಶ ಮಾಡಿದರು ಎಂಬ ಸುದ್ದಿಯನ್ನು ಕೇಳುತ್ತಿದ್ದೇವೆ. ಆದರೂ ಸರ್ಕಾರ ರೈತರ ಮನವಿಯನ್ನು ಬಹಳ ತಡವಾಗಿಯೇ ಸ್ವೀಕರಿಸುತ್ತಿದೆ. ಯಾಕೆ ಹೀಗೆ ?? ರೈತರು ಬೆಳೆದ ಅನ್ನವನ್ನು ಇದೇ ರೀತಿಯಾಗಿ ತಡವಾಗಿ ಉಣ್ಣುವಿರಾ ?? ಹಸಿವಾದಾಗ ಉಂಡುರಿವಿರಲ್ಲಾ !! ಅದೇ ರೀತಿ ಅನ್ನದಾತನ ಕೂಗನ್ನು ಕೇಳಿ ಸಹಕರಿಸಿ. ಅಂತೂ, ಮುಖ್ಯಮಂತ್ರಿಯವರು ಇಂದು ರೈತರ ವಿಚಾರವಾಗಿ ಸಭೆಯನ್ನು ಕರೆಯಲಾಗಿದೆ. ಏನೇನು ನಿರ್ಧಾರವಾಗಬಹುದು ಎಂದು ಮಳೆಗೆ ಕಾದಂತೆ ರೈತ ಕಾಯುತ್ತಲೇ ಇದ್ದಾನೆ.

ಈ ಸಂದರ್ಭದಲ್ಲಿ ರೈತರ ಬೆಳೆಯನ್ನು ಸರ್ಕಾರವೇ ಖರೀದಿ ಮಾಡಿದರೆ ಅನೇಕ ಲಾಭವಿದೆ. ಆರ್ಥಿಕವಾಗಿ ಅಲ್ಲ. ಕೊರೋನಾದಿಂದ ದೂರವಿದ್ದು, ಆರೋಗ್ಯಕ್ಕೆ ಒಳಿತು. ಹೇಗೆಂದರೆ ತರಕಾರಿ ಹಣ್ಣುಗಳನ್ನು ಸರ್ಕಾರವೇ ಯಾವ ತಾಲೂಕಿಗೆ ಅಗತ್ಯವಿದೆಯೋ ಶಾಸಕರ/ ಜನಪ್ರತಿನಿಧಿಗಳ ಕ್ಲೋಸ್ಡ್ ಗ್ರೂಪ್ ( ಸೀಮಿತ ಜನರ ಟೀಮು ) ಮೂಲಕ ಜನರ ಮನೆಗೆ ( ಅಥವಾ ಗ್ರಾಮಕ್ಕೆ ) ತಲುಪಿಸಿದರೆ ಸೋಂಕು ಮುಕ್ತರಾಗಬಹುದು. ನಾವು ಬೆಳೆದ ತರಕಾರಿ ಯಾರೋ ಒಬ್ಬ ತಗೊಂಡು, ಅಲ್ಲಿಂದ ಅದು ಎಲ್ಲೋ ಸಾಗಿ, ಮತ್ತೆಲ್ಲೋ ಹೋಗಿ ಕೊನೆಗೆ ಅದು ಬಳಕೆದಾರನ ಕೈಗೆ ಬರುವಷ್ಟರಲ್ಲಿ ಕೋರೋನಾ ಕಳಂಕಿತ ಆದರೂ ಅಚ್ಚರಿಯಿಲ್ಲ. ಯಾಕೆಂದರೆ ಅದೇ ತರಕಾರಿ ಟೆಂಪೋದಲ್ಲಿ, ತರಕಾರಿ ಕಟ್ಟಿನ ಮೇಲೆ ಕುಳಿತೇ ಜನ ಪ್ರಯಾಣಿಸುತ್ತಾರೆ, ಜರ್ದಾ ಬೀಡಾ ಅದರ ಮೇಲೇನೆ ‘ಪುಚಿಕ್ ‘ ! ಪ್ರತಿಯೊಂದು ಕಡೆ ಲೋಡಿಂಗ್ ಅನ್ಲೋಅಡಿಂಗ್- ಹೀಗೆ ಹಲವು ಮನುಷ್ಯರ ಸಂಪರ್ಕಕ್ಕೆ ಅದು ಬರುತ್ತಿದೆ.
ಹೀಗೆ ಮಾಡುವುದರಿಂದ ರೈತನ ದುಡಿಮೆಗೆ ತಕ್ಷಣದ ಫಲ ದೊರಕುವುದು. ಈಗ ಲಾಭದ ಕಡೆಗೆ ಯೋಚಿಸುವ ಹಾಗಿಲ್ಲ. ದುಡಿಮೆಗೆ ಸಮವಾದ, ದಿನನಿತ್ಯದ ನಿರ್ವಹಣೆಗೆ ಬೇಕಾದ ವಿತ್ತ ದೊರೆತರೆ ಕಿಂಚಿತ್ತು ತೃಪ್ತಿ ಪಡಬಹುದು.

ಮುಖ್ಯಮಂತ್ರಿ ಸಭೆ ಬಳಿಕ ನಿರ್ಧಾರ

  • ರೈತರ ವಾಹನಕ್ಕೆ ಸಾಗಾಟಕ್ಕೆ ಅವಕಾಶ
  • ರೈತರ ಬೆಳೆಗಳನ್ನು ರೈಲುಗಳಲ್ಲಿ ಹೊರ ರಾಜ್ಯಕ್ಕೆ ಸಾಗಿಸಲು ಅವಕಾಶ
  • ರೈತರ ಮತ್ತು ಕೃಷಿ ಆಧಾರಿತ ವಾಹನ ಸಾಗಾಟಕ್ಕೆ ಅನುಮತಿ ನಿರಾಕರಿಸುವ ಪೊಲೀಸರ ವಿರುದ್ಧ ಕ್ರಮ
  • ಹಾಪ್ ಕಾಮ್ಸ್ ನಲ್ಲಿ ಮೊಟ್ಟೆ ಮಾರಲು ಅವಕಾಶ
  • ಕಲ್ಲಂಗಡಿ, ದ್ರಾಕ್ಷಿ, ಕರ್ಬೂಜ, ಸಪೋಟ, ನಿಂಬೆ ತರಕಾರಿ ಹೂವು ಬೆಳೆಯಲಾಗುತ್ತದೆ. ಬೇರೆ ರಾಜ್ಯಗಳಿಗೆ ರಪ್ತು ಮಾಡಲು ಕ್ರಮ
  • 14 ಲಕ್ಷ ಜನರಿಗೆ ಪ್ಯಾಕೇಟ್ ಮೂಲಕ ಆಹಾರ
  • ಪ್ರತಿನಿತ್ಯ ಹಣ್ಣು ತರಕಾರಿ ಮಾರಾಟ, ಹಣ್ಣು ತರಕಾರಿಗಳ ಸಂಗ್ರಹಣೆ ಇದೆ
  • ದಿನದ 24 ಗಂಟೆ ಹಾಪ್ ಕಾಮ್ಸ್ ಕಾರ್ಯನಿರ್ವಹಿಸಲು ಅನುಮತಿ
  • ಬಡವರಿಗೆ ಅರ್ಧ ಲೀ ಹಾಲು ಉಚಿತ ಏಪ್ರಿಲ್ 14 ರವರೆಗೆ
Leave A Reply

Your email address will not be published.