Breaking | ಮರ್ಕಜ್ ನಿಜಾಮುದ್ದೀನ್ ಕಟ್ಟಡ ಎಂಬ ಮೃತ್ಯು ಕೂಪ । ಏಕಾಏಕಿ 441 ಜನರಿಗೆ ಕೋರೋನಾ ಲಕ್ಷಣ । ದೆಹಲಿ ಕಂಪನ !

ಕರೋನಾದ ಮುಖ ದೆಹಲಿಯ ಪಾಲಿಗೆ ಕರಾಳ ವಿಕರಾಳವಾಗಿ ತೋರುವ ಎಲ್ಲ ಲಕ್ಷಣವಿದೆ. ಮತ್ತು ಅದು ದೇಶದೆಲ್ಲೆಡೆ ಕರೋನಾ ಅನ್ನು ವೇಗವಾಗಿ ಬಿರುಗಾಳಿಯಂತೆ ಹಬ್ಬಿಸುವ ಎಲ್ಲ ಮುನ್ಸೂಚನೆಯೂ ಈಗ ಸಿಗುತ್ತಿದೆ.

ಕಳೆದ ಮಾರ್ಚ್ 8-10 ರ ಸುಮಾರಿಗೆ ಪಶ್ಚಿಮ ನಿಜಾಮುದ್ದೀನ್ ಪ್ರದೇಶದಲ್ಲಿರುವ ಮರ್ಕಜ್ ನಿಜಾಮುದ್ದೀನ್ ಎಂಬ ಕಟ್ಟಡದಲ್ಲಿ ತಂಬ್ಳಿಘಿ ಜಮಾತ್ ಸಂಸ್ಥೆಯಾ ಅನುಯಾಯಿಗಳು ಸುಮಾರು 2000 ಜನ ಸೇರಿಕೊಂಡಿದ್ದರು.

ಅವರೇ ಇವತ್ತು ದೆಹಲಿಯಲ್ಲಿ ಕೊರೋನಾ ಹಬ್ಬಿಸುತ್ತಿರುವ ಮೂಲವಸ್ತುಗಳು !
ಅದು ನಡೆದು ತುಂಬಾ ದಿನಗಳೇ ಕಳೆದಿವೆ. ಈಗ ಅವರಲ್ಲಿ ಹಲವಾರು ಜನ ದೇಶಾದ್ಯಂತ ಹರಿದು ಹಂಚಿ ಹೋಗಿದ್ದಾರೆ. ಈಗಾಗಲೇ 1000 ಕ್ಕೂ ಅಧಿಕ ಜನರನ್ನು ಆ ಬಿಲ್ಡಿಂಗ್ ನಿಂದ ಸಾಗಿಸಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ಒಟ್ಟು 24 ಜನರಿಗೆ ಸೋಂಕಿರುವುದು ಖಚಿತವಾಗಿದೆ ಮತ್ತು ಈಗಾಗಲೇ 7 ಜನರು ತೀರಿಕೊಂಡದ್ದು ಇದೇ ಮಸೀದಿಯಿಂದ ಹರಡಿದ ಸೋಂಕಿನಿಂದ ಎಂದು ನಂಬಲಾಗಿದೆ.
ಇದರ ಮಧ್ಯೆ ಈಗ ತಾನೇ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ದೆಹಲಿ ಮಸೀದಿಯಲ್ಲಿ ಸೇರಿದ್ದ 441 ಜನರಿಗೆ ಕೊರೋನಾದ ಲಕ್ಷಣಗಳು ಗೋಚರಿಸಿವೆ. ಈ ಸುದ್ದಿ ತಿಳಿಯುತ್ತಲೇ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೆಂಡಾಮಂಡಲವಾಗಿದ್ದಾರೆ. ಮರ್ಕಜ್ ನಿಜಾಮುದ್ದೀನ್ ಮಸೀದಿಯ ಆಡಳಿತ ಮಂಡಳಿಯ ಮೇಲೆ ಕ್ರಿಮಿನಲ್ ಮೊಕದ್ದಮೆ ತೆಗೆದುಕೊಳ್ಳುವಂತೆ ಆದೇಶಿಸಿದ್ದಾರೆ. ” ಇದೊಂದು ಅತ್ಯಂತ ಬೇಜಾವಾಬ್ದಾರಿಯ ಕೃತ್ಯ. ಪ್ರಪಂಚದೆಲ್ಲೆಡೆ ಸಾವಿರಾರು ಜನ ಸಾಯುತ್ತಿದ್ದಾರೆ. ಮಂದಿರ ಮಸೀದಿಗಳು ಎಲ್ಲವೂ ಮುಚ್ಚಿರುವಾಗ ಇಲ್ಲಿ ಜನ ಸೇರಿದ್ದಾರೆ. ” ಎಂದು ಮಸೀದಿಯಲ್ಲಿ ಸೇರಲು ಬಿಟ್ಟ ಆಡಳಿತ ಮಂಡಳಿಯವರನ್ನು ದೂರಿದ್ದಾರೆ.

ಸಭೆ ನಡೆಯಲು ಬಿಟ್ಟು ಈಗ ದೂರಿದರೆ ಏನು ಪ್ರಯೋಜನ ? ಅಂದು ಅಲ್ಲಿ ಸೇರಿದ ಜನ ಕೊರೋನಾ ರೋಗದ ಪಾರ್ಸೆಲ್ ಎತ್ತಿಕೊಂಡು ಗಂಟಲ ಒಳಗೆ ಹಾಕಿಕೊಂಡು ಈಗ ದೇಶಾದ್ಯಂತ ಚದುರಿಹೋಗಿದೆ. ಅವರನ್ನು ಪತ್ತೆ ಮಾಡುವುದು ಹೇಗೆ ? ಪತ್ತೆ ಆಗುವ ಒಳಗೆ ಅವರು ಅದೆಷ್ಟು ಜನರಿಗೆ ರೋಗ ದಾನ ಮಾಡಿಬಿಡುತ್ತಾರೋ?

ಇದೀಗ ಬಂದ ಸುದ್ದಿ : ಕರ್ನಾಟಕದಿಂದ ‘ ನಿಜಾಮುದ್ದೀನ್ ‘ ನಲ್ಲಿ ಒಟ್ಟು 45 ಭಾಗಿಯಾಗಿದ್ದಾರೆಂದು ತಿಳಿದು ಬಂದಿದೆ. ಅವರಲ್ಲಿ 13 ಜನರನ್ನು ಪತ್ತೆ ಮಾಡಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Fresh Update : ತಮಿಳಿನಾಡಿನಲ್ಲಿ 50 ಜನ ಕೊರೋನಾ ಪಾಸಿಟಿವ್. ಅವರಲ್ಲಿ 45 ಜನ ದೆಹಲಿಯ ಮಸೀದಿಗೆ ಭೇಟಿ ನೀಡಿದವರು.

ಕೋರೋನಾ ಸೋಂಕಿತರ ಸುಶ್ರೂಷೆಗೈದ ನರ್ಸ್ ಗೆ ವೈರಸ್ ಸೋಂಕು | ಗುಣಮುಖರಾದ 93 ವರ್ಷದ ವೃದ್ಧ ದಂಪತಿ

Leave A Reply

Your email address will not be published.