Whats App Status ಗೂ ಲಾಕ್‌ ಡೌನ್ !

30 ಸೆಕೆಂಡ್‌ಗಳ ಕಾಲ ಇದ್ದ Whats App Status ಇದೀಗ 15 ಸೆಕೆಂಡ್‌ಗೆ ಇಳಿಸಲಾಗಿದೆ.

ದೇಶದೆಲ್ಲೆಡೆ ಕೊರೊನಾ ವೈರಸ್ ಭೀತಿಯಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಇದರಿಂದಾಗಿ ಮೊಬೈಲ್ ಇಂಟರ್‌ನೆಟ್ ಡೇಟಾ ಕೂಡ Traffic ಆಗಿದ್ದು, ಈ ಕಾರಣದಿಂದ ಸ್ಟೇಟಸ್ ಪ್ಲೇ ಅವಧಿಯನ್ನು 15 ಸೆಕೆಂಡ್‌ಗೆ ಇಳಿಸಲಾಗಿದೆ.

ಇಂಟರ್ನೆಟ್ ಕೂಡಾ ಲಾಕ್ ಡೌನ್ ನ ಕಾರಣದಿಂದ ತನ್ನ ವೇಗ ಕಳೆದುಕೊಂಡು ಸ್ಲೋ ಡೌನ್ ಆಗಿದೆ. ಪ್ರತಿಯೊಬ್ಬರಲ್ಲೂ ಒಂದು ಫೋನಿದೆ. ಬೇರೆ ಏನು ಮಾಡಲಿ ಕೆಲಸ ಎಂದು ಮೊಬೈಲು ಸ್ಕ್ರೀನಿನ ಮೇಲೆ ಬೆರಳಿನಲ್ಲಿ ನೈಸು ಮಾಡುವುದೇ ಆಗಿದೆ ಎಲ್ಲರಿಗೆ. ಅದಕ್ಕಾಗಿಯೇ ಇಂಟರ್ನೆಟ್ ನಿಧಾನವಾಗಿ ಕೆಲಸಮಾಡುತ್ತಿದೆ.

ಈ ಮಧ್ಯೆ ಇಂಟರ್ನೆಟ್ ಸೇವೆಗಳು ಕೂಡಾ ರದ್ದಾಗಲಿವೆ ಎಂದು ಹೇಳಲಾಗುತ್ತಿದೆ. ಆದರೆ ಆ ಸಾಧ್ಯತೆ ಕಡಿಮೆ. ಈಗಲೇ, ಮನೆಯಲ್ಲೇ ಕೂತು ತಲೆ ಕೆಡಿಸಿಕೊಳ್ಳುತ್ತಿರುವ ಜನರಿಗೆ ಒತ್ತಲು, ಹೇಗಾದರೂ ಮಾಡಿ ಸಮಯ ಕಳೆಯಲು ಮೊಬೈಲು ಅತ್ಯುತ್ತಮ ವಿಧಾನವಾಗಿದೆ. ಫ್ರಸ್ಟ್ರೇಷನ್ ನಲ್ಲಿರುವ ಜನರಿಗೆ ತಮ್ಮ ದುಗುಡ ಇಳಿಸಿಕೊಳ್ಳಲು ವಾಟ್ಸ್ ಆಪ್, ಫೇಸ್ ಬುಕ್ ಸ್ವಲ್ಪ ಸಹಾಯ ಮಾಡುತ್ತಿದೆ. ಬೇಜಾರಾದಾಗ ಗೆಳೆಯರಿಗೆ ಮತ್ತು ಆತ್ಮೀಯರಿಗೆ ಹೇಳಿಕೊಂಡು ಸಂಹವನ ನಡೆಸಿ ಒಂದಷ್ಟು ರಿಲೀಫ್ ಫೀಲ್ ಆಗುತ್ತಿದ್ದಾರೆ ನಮ್ಮ ಜನ. ಇದನ್ನೂ ಕಿತ್ತುಕೊಂಡರೆ ಹರೋ ಹರ !

Leave A Reply

Your email address will not be published.