ಕೊರೋನಾ ಹಟಾವೋಗಾಗಿ ಉಜಿರೆಯ ಬಸ್ ಸ್ಟ್ಯಾಂಡಿನಲ್ಲಿ ಸ್ವತಃ ಕ್ಲೀನಿಂಗ್ ಗೆ ಇಳಿದ ಈ ಪ್ರಭಾವೀ ವ್ಯಕ್ತಿ ಯಾರು ? | Live Updates !
ಮುಂದೆ ಓದುವ ಮೊದಲು ಈ ಫೋಟೋದಲ್ಲಿರುವ ಮಾಸ್ಕ್ ಧರಿಸಿದ ವ್ಯಕ್ತಿಯನ್ನು ಗುರುತಿಸಿ.
ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಬೆಳ್ತಂಗಡಿಯ ವಿವಿಧ ಪೇಟೆಗಳನ್ನು ಸ್ಯಾನಿಟೈಸ್ ಮಾಡಬೇಕು ಎಂಬ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದರು.
ಅದರಂತೆ ಉಜಿರೆಯ ಉದ್ಯಮಿಗಳಾದ ಲಕ್ಸ್ಮಿ ಗ್ರೂಪ್ಸ್ ನ ಶ್ರೀ ಮೋಹನ್ ಮತ್ತು ಸಂಧ್ಯಾ ಟ್ರೇಡರ್ಸಿನ ಶ್ರೀ ರಾಜೇಶ್ ಪೈ ಅವರ ” ಬದುಕು ಕಟ್ಟೋಣ ಬನ್ನಿ ” ಗುಂಪಿನ ಸ್ವಯಂಸೇವಕರ ಸಹಕಾರದೊಂದಿಗೆ ಸ್ಯಾನಿಟೈಸ್ ಮಾಡುವ ಕೆಲಸವನ್ನು ಸಾಂಕೇತಿಕವಾಗಿ ಆರಂಭಿಸಲಾಯಿತು.
ಈ ಚಿತ್ರದಲ್ಲಿರುವ, ಉಜಿರೆಯ ಬಸ್ ಸ್ಟ್ಯಾಂಡ್ ಮುಂಭಾಗವನ್ನು ಶುದ್ಧ ಗೊಳಿಸುತ್ತಿರುವ ಈ ಪ್ರಭಾವೀ ವ್ಯಕ್ತಿಯನ್ನು ನೀವು ಗುರುತಿಸಬಲ್ಲಿರಾ ?
ಅವರು ಬೆಳ್ತಂಗಡಿಯ ನಮ್ಮ ಹೆಮ್ಮೆಯ ಶಾಸಕ ಶ್ರೀ ಹರೀಶ್ ಪೂಂಜಾ ಅಲ್ಲದೆ ಬೇರೆ ಯಾರಿರಲು ಸಾಧ್ಯ? ಶಾಸಕರು ಸ್ವತಃ ನೀರಿನ ಪೈಪು ಹಿಡಿದು, ಪೊರಕೆ ಬಳಸಿ ಕ್ಲೀನ್ ಮಾಡುತ್ತಿದ್ದಾರೆ. ಲೈವ್ ಅಪ್ಡೇಟ್ಸ್ …ಕ್ಲೀನಿಂಗ್ ಅಂಡರ್ ಪ್ರೋಗ್ರೆಸ್…….