ಬ್ಯಾಂಕ್ ಸಾಲಗಾರರಿಗೆ RBI ನಿಂದ ಬಿಗ್ ರಿಲೀಫ್ | 3 ತಿಂಗಳ ಸಾಲದ ಕಂತು ಮುಂದೂಡಿಕೆ
ನವದೆಹಲಿ : ದೇಶದ ಎಲ್ಲಾ ಬ್ಯಾಂಕ್ಗಳಲ್ಲಿ ಸಾಲ ಪಡೆದಿರುವ ಸಾಲಗಾರರಿಗೆ ಕೊರೊನಾ ಎಫೆಕ್ಟ್ ಲಾಕ್ಡೌನ್ನಿಂದಾಗಿ 3 ತಿಂಗಳ ಸಾಲದ ಕಂತು ಮುಂದೂಡಿಕೆ ಮಾಡಲಾಗಿದೆ ಎಂದು ಆರ್ಬಿಐ ಘೋಷಿಸಿದೆ.
ಈ ಕೆಳಗಿನ ಲೋನುಗಳ ಇಎಂಐ ಮೂರು ತಿಂಗಳು ಕಟ್ಟಬೇಕಾಗಿಲ್ಲ. ಇದು ಇಂದು ಬೆಳಿಗ್ಗೆ RBI ತೆಗೆದುಕೊಂಡ ಮಹತ್ವದ ನಿರ್ಧಾರ. ಈ ನಿರ್ಧಾರದಿಂದ, ಕೆಲಸ, ವ್ಯಾಪಾರ ವ್ಯವಹಾರ, ಕೃಷಿ ಚಟುವಟಿಕೆ ಇಲ್ಲದೆ ಹಣ ಕೈಯಲ್ಲಿ ಓಡಾಡದೆ ಕೈಕಟ್ಟಿ ಕೊಂಡ ಜನರ ಟೆನ್ಷನ್ ಅನ್ನು ಮೋದಿ ಸರಕಾರ ಕಡಿಮೆ ಮಾಡಿದ್ದಾರೆ. ಜನರ ಮನದಲ್ಲಿ ಒಂದಷ್ಟು ನಿರಾಳತೆ.
ಯಾವ ಬ್ಯಾಂಕುಗಳಿಗೆ / ಹಣಕಾಸು ಸಂಸ್ಥೆಗಳಿಗೆ ಅನ್ವಯ
- ರಾಷ್ಟ್ರೀಕೃತ ಬ್ಯಾಂಕುಗಳು
- ಪ್ರೈವೇಟ್ ಬ್ಯಾಂಕುಗಳು
- ಸಹಕಾರಿ ಬ್ಯಾಕುಗಳು
- ಗೋಲ್ಡ್ ಲೋನ್ ಸಂಸ್ಥೆಗಳು
ಯಾವುದೆಲ್ಲ ಲೋನ್ ಗಳು
- ಅಡಮಾನ ಸಾಲ
- ಕೃಷಿ ಸಾಲ
- ಚಿನ್ನದ ಮೇಲಿನ ಸಾಲ
- ಬ್ಯಾಂಕಿನ ಮನೆಸಾಲದ ಲೋನು
- ಕಾರು- ವಾಹನ ಲೋನು
- ವಾಣಿಜ್ಯ ಲೋನು
- ಕೈಗಾರಿಕೆ ಲೋನು
ಕ್ರೆಡಿಟ್ ಕಾರ್ಡ್ ಸಾಲದ ಬಗ್ಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಅದನ್ನು ಬ್ಯಾಂಕ್ ಗಳ ನಿರ್ಧಾರಕ್ಕೆ ಬಿಟ್ಟಂತಿದೆ.
ಇಷ್ಟೇ ಅಲ್ಲದೆ RBI ಯು ಬ್ಯಾಂಕ್ಗಳಿಗೆ ನೀಡುವ ಸಾಲದ ದರದಲ್ಲಿಯೂ ಭಾರಿ ಕಡಿತ ಮಾಡಿದೆ. ಈ ಹಿಂದೆ ಇದ್ದ 5.1% ದರವನ್ನು ಈಗ 4.4 % ಗೆ ಇಳಿಸಿದೆ. ಇದರಿಂದ ಆರ್ಥಿಕತೆಗೆ ಹೊಡೆತ ಬಿದ್ದರೂ, ಇದು ಈಗ ಅನಿವಾರ್ಯವಾಗಿದೆ ಎಂದು RBI ಗವರ್ನರ್ ಶಕ್ತಿ ದಾಸ್ ಕಾಂತ್ ಅವರು ಹೇಳಿದರು.