ಸುಳ್ಳು ಹೇಳಿದನಾ ಉಡುಪಿಯ ಸೋಂಕಿತ ವ್ಯಕ್ತಿ ? | ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ರಿಪೋರ್ಟ್ ಇಂದು ಕೈ ಸೇರಲಿದೆ

ಉಡುಪಿ: ನಗರದಲ್ಲಿ ಪತ್ತೆಯಾದ ಕೊರೊನಾ ಸೋಂಕಿತನ ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ಮಾಡಲು ಉಡುಪಿ ಜಿಲ್ಲಾಡಳಿತ ನಿರ್ಧರಿಸಿದೆ. ಸೋಂಕಿತ ವ್ಯಕ್ತಿಯ ಹೇಳಿಕೆಗೂ ಆತನ ಪರಿಚಯಸ್ತರು ಮತ್ತು ಸಂಬಂಧಿಸಿದ ಹೇಳಿಕೆಗಳು ತಾಳೆಯಾಗದ ಕಾರಣ ಈ ನಿರ್ಧಾರಕ್ಕೆ ಬರಲಾಗಿದೆ.

ಮಣಿಪಾಲ ಕೆಎಂಸಿಯ ಲ್ಯಾಬ್ ಟೆಕ್ನಿಷನ್ ಆಗಿರುವ ಸೋಂಕಿತ ವ್ಯಕ್ತಿ, ಮಾರ್ಚ್ 18 ರಂದು ದುಬೈನಿಂದ ಮಂಗಳೂರಿಗೆ ಬಂದು ಇಳಿದು, ಆ ನಂತರ ಮಂಗಳೂರು ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಮಣಿಪಾಲದಲ್ಲಿರುವ ತನ್ನ ಮನೆ ಸೇರಿಕೊಂಡಿದ್ದಾರೆ. ನಂತರ ನಾನು ಮನೆಬಿಟ್ಟು ಎಲ್ಲೂ ಹೋಗಿಲ್ಲ. ಶೀತ ಕೆಮ್ಮು ಜ್ವರ ಶುರುವಾದ ಬಳಿಕ ನೇರವಾಗಿ ಜಿಲ್ಲಾಸ್ಪತ್ರೆಗೆ ಮಾತ್ರ ಬಂದಿದ್ದಾಗಿ ಆತ ಹೇಳಿಕೊಂಡಿದ್ದಾರೆ.
ಆದರೆ ಆತನು ಕೋರೋಣ ಸೋಂಕಿತ ಎಂದು ದ್ರುಡವಾದ ಕೂಡಲೇ ಆತನ ಪರಿಚಯಸ್ತರು ಮತ್ತು ಸಂಬಂಧಿಕರು ವ್ಯಕ್ತಿ ಉಡುಪಿ-ಮಣಿಪಾಲ ಸುತ್ತಮುತ್ತ ದಿನಗಳಲ್ಲಿ ಓಡಾಟ ಮಾಡಿದ್ದಾರೆ ಎಂದಿದ್ದಾರೆ.

ಉಡುಪಿ ಡಿಎಚ್‍ಒ ಜಿಲ್ಲಾಡಳಿತದ ಸಿಬ್ಬಂದಿ, ಪೊಲೀಸರು ಸೋಂಕಿತ ವ್ಯಕ್ತಿಯ ಟ್ರಾವೆಲ್ ಹಿಸ್ಟ್ರಿ ಬಗ್ಗೆ ತರತರನಾಗಿ ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೋಂಕಿತ ಮಾತ್ರ ಇಷ್ಟನ್ನೇ ಹೇಳಿಕೊಂಡಿದ್ದಾರೆ. ಹೋಂ ಕ್ವಾರಂಟೈನ್‍ನಲ್ಲಿ ಇದ್ದ ಸಂದರ್ಭ ತಾವು ಐದು ದಿನವೂ ಆನ್‍ಲೈನ್ ಮೂಲಕ ಆಹಾರ ತರಿಸಿಕೊಂಡಿರುವುದಾಗಿ ತಿಳಿಸಿದ್ದರು. ಯಾರ ಜೊತೆಯೂ ನೇರವಾಗಿ ಸಂಪರ್ಕ ಮಾಡಿಲ್ಲ ಎಂದು ಹೇಳಿಕೊಂಡಿದ್ದರು.

ಸೋಂಕಿತನ ಮತ್ತು ಸಂಬಂಧಿಕರ ಹೇಳಿಕೆಗಳಿಗೆ ತಾಳೆಯಾಗದ ಕಾರಣ ಸಂಗೀತ ಮೊಬೈಲ್ ಟ್ರ್ಯಾಕಿಂಗ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಸೋಂಕಿತ ವ್ಯಕ್ತಿಯ ಫೋನ್ ನೆಟ್‌ವರ್ಕ್‌ ಟ್ರ್ಯಾಕ್ ಮಾಡಲು ಜಿಲ್ಲಾಧಿಕಾರಿ ಜಿ.ಜಗದೀಶ್, ಎಸ್‍ಪಿ ವಿಷ್ಣುವರ್ಧನ್ ಅವರಿಗೆ ಆದೇಶಿಸಿದ್ದಾರೆ.

ಒಂದೊಮ್ಮೆ ಹೋಂ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಊರಲ್ಲಿ ಓಡಾಡಿದ್ದರೆ ಆತ ಸಂಪರ್ಕಿಸಿದ ಇತರ ಜನರನ್ನು ಕೂಡಾ ಪರೀಕ್ಷೆಗೆ ಒಳಪಡಿಸುವ ಅಗತ್ಯವಿರುತ್ತದೆ. ಲ್ಯಾಬ್ ಟೆಕ್ನಿಷಿಯನ್ ಆಗಿ, ವೈದ್ಯಕೀಯ ವೃತ್ತಿಯಲ್ಲಿ ಇರುವ ದಾವಣಗೆರೆ ಮೂಲದ ಈ ವ್ಯಕ್ತಿ ಜವಾಬ್ದಾರಿಯಿಂದ ನಡೆದುಕೊಂಡಿದ್ದಾನೆ ಇಲ್ಲವೋ ಎನ್ನುವುದು ಮೊಬೈಲ್ ಟ್ರ್ಯಾಕಿಂಗ್ ರಿಪೋರ್ಟ್ ನಿಂದ ಇಂದು ತಿಳಿದು ಬರುವ ಸಂಭವ ಇದೆ.

Leave A Reply

Your email address will not be published.