ಬ್ಯಾಂಕ್ ಸಾಲಗಾರರಿಗೆ RBI ನಿಂದ ಬಿಗ್ ರಿಲೀಫ್ | 3 ತಿಂಗಳ ಸಾಲದ ಕಂತು ಮುಂದೂಡಿಕೆ

ನವದೆಹಲಿ : ದೇಶದ ಎಲ್ಲಾ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಸಾಲಗಾರರಿಗೆ ಕೊರೊನಾ ಎಫೆಕ್ಟ್ ಲಾಕ್‌ಡೌನ್‌ನಿಂದಾಗಿ 3 ತಿಂಗಳ ಸಾಲದ ಕಂತು ಮುಂದೂಡಿಕೆ ಮಾಡಲಾಗಿದೆ ಎಂದು ಆರ್‌ಬಿಐ ಘೋಷಿಸಿದೆ.

ಈ ಕೆಳಗಿನ ಲೋನುಗಳ ಇಎಂಐ ಮೂರು ತಿಂಗಳು ಕಟ್ಟಬೇಕಾಗಿಲ್ಲ. ಇದು ಇಂದು ಬೆಳಿಗ್ಗೆ RBI ತೆಗೆದುಕೊಂಡ ಮಹತ್ವದ ನಿರ್ಧಾರ. ಈ ನಿರ್ಧಾರದಿಂದ, ಕೆಲಸ, ವ್ಯಾಪಾರ ವ್ಯವಹಾರ, ಕೃಷಿ ಚಟುವಟಿಕೆ ಇಲ್ಲದೆ ಹಣ ಕೈಯಲ್ಲಿ ಓಡಾಡದೆ ಕೈಕಟ್ಟಿ ಕೊಂಡ ಜನರ ಟೆನ್ಷನ್ ಅನ್ನು ಮೋದಿ ಸರಕಾರ ಕಡಿಮೆ ಮಾಡಿದ್ದಾರೆ. ಜನರ ಮನದಲ್ಲಿ ಒಂದಷ್ಟು ನಿರಾಳತೆ.

ಯಾವ ಬ್ಯಾಂಕುಗಳಿಗೆ / ಹಣಕಾಸು ಸಂಸ್ಥೆಗಳಿಗೆ ಅನ್ವಯ

  • ರಾಷ್ಟ್ರೀಕೃತ ಬ್ಯಾಂಕುಗಳು
  • ಪ್ರೈವೇಟ್ ಬ್ಯಾಂಕುಗಳು
  • ಸಹಕಾರಿ ಬ್ಯಾಕುಗಳು
  • ಗೋಲ್ಡ್ ಲೋನ್ ಸಂಸ್ಥೆಗಳು

ಯಾವುದೆಲ್ಲ ಲೋನ್ ಗಳು

  • ಅಡಮಾನ ಸಾಲ
  • ಕೃಷಿ ಸಾಲ
  • ಚಿನ್ನದ ಮೇಲಿನ ಸಾಲ
  • ಬ್ಯಾಂಕಿನ ಮನೆಸಾಲದ ಲೋನು
  • ಕಾರು- ವಾಹನ ಲೋನು
  • ವಾಣಿಜ್ಯ ಲೋನು
  • ಕೈಗಾರಿಕೆ ಲೋನು

ಕ್ರೆಡಿಟ್ ಕಾರ್ಡ್ ಸಾಲದ ಬಗ್ಗೆ ಯಾವುದೇ ಹೇಳಿಕೆ ಹೊರಬಿದ್ದಿಲ್ಲ. ಅದನ್ನು ಬ್ಯಾಂಕ್ ಗಳ ನಿರ್ಧಾರಕ್ಕೆ ಬಿಟ್ಟಂತಿದೆ.

ಇಷ್ಟೇ ಅಲ್ಲದೆ RBI ಯು ಬ್ಯಾಂಕ್ಗಳಿಗೆ ನೀಡುವ ಸಾಲದ ದರದಲ್ಲಿಯೂ ಭಾರಿ ಕಡಿತ ಮಾಡಿದೆ. ಈ ಹಿಂದೆ ಇದ್ದ 5.1% ದರವನ್ನು ಈಗ 4.4 % ಗೆ ಇಳಿಸಿದೆ. ಇದರಿಂದ ಆರ್ಥಿಕತೆಗೆ ಹೊಡೆತ ಬಿದ್ದರೂ, ಇದು ಈಗ ಅನಿವಾರ್ಯವಾಗಿದೆ ಎಂದು RBI ಗವರ್ನರ್ ಶಕ್ತಿ ದಾಸ್ ಕಾಂತ್ ಅವರು ಹೇಳಿದರು.

Leave A Reply

Your email address will not be published.