ಕೊಡಗು-ದ.ಕ ಗಡಿಭಾಗದ ಸಂಪಾಜೆಯಲ್ಲಿ ವಾಹನ ತಪಾಸಣೆ| ವಾಹನ ದಟ್ಟನೆ
ಸುಳ್ಯ: ಕೊರೋನ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದ.ಕ. ಜಿಲ್ಲಾಡಳಿತ ಕಠಿಣ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ರಾತ್ರಿ 12 ಗಂಟೆಯವರೆಗೆ ಜಿಲ್ಲಾದ್ಯಂತ ಕರ್ಫ್ಯೂ ವಿಧಿಸಲಾಗಿದೆ. ಸಾರ್ವಜನಿಕರು ಹೊರಗೆ ಬಾರದಂತೆ ಎಚ್ಚರಿಕೆ ನೀಡಲಾಗಿದೆ.
ಮಾ.22ರ ಮಧ್ಯರಾತ್ರಿ 12 ಗಂಟೆಯಿಂದ ಮಾ.31ರವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಇದರ ಅನ್ವಯ ಮಾ.23ರಂದುದ.ಕ-ಕೊಡಗು ಗಡಿ ಭಾಗದ ಸಂಪಾಜೆಯಲ್ಲಿ ವಾಹನ ತಪಾಸಣೆಯನ್ನು ನಡೆಸಲಾಗುತ್ತದೆ.
ಉಭಯ ಜಿಲ್ಲೆಯನ್ನು ಲಾಕ್‌ಡೌನ್ ಮಾಡಲಾಗಿದ್ದರೂ,ವಾಹನ ಸಂಚಾರ ಆರಂಭವಾಗಿದೆ. ಆರೋಗ್ಯ ದೃಷ್ಟಿಯಿಂದ ಆದೇಶ ಪಾಲನೆ ಮಾಡಬೇಕಾದ ಜನತೆ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿರುವುದು ಕಂಡು ಬಂದಿದೆ. ತಪಾಸಣೆ ವೇಳೆ ಕಿ.ಮೀಗಟ್ಟಲೆ ವಾಹನಗಳು ನಿಂತಿದ್ದವು.
ದೇಶದಲ್ಲಿ ಈಗಾಗಲೇ ಅಪಾಯದ ಮಟ್ಟಕ್ಕೆ ಕೊರೊನಾ ವೈರಸ್‌ನ ಕಬಂಧ ಬಾಹು ಹಬ್ಬಿದೆ. ಆದರೆ ಜನತೆ ಇನ್ನೂ ಜಾಗೃತರಾಗದೇ ಇದ್ದರೆ ಅಪಾಯ ತಪ್ಪಿದಲ್ಲ ಎಂಬ ಅರಿವು ಮೂಡಿಲ್ಲ ಎಂದರೆ ಏನರ್ಥ?. ಸೆಕ್ಷನ್144 ಯಶಸ್ವಿ ಜಾರಿ ನಿಟ್ಟಿನಲ್ಲಿ ಸರಕಾರ, ಜಿಲ್ಲಾಡಳಿತ ಗಂಭೀರವಾಗಿ ಕ್ರಮ ತೆಗೆದು ಕೊಳ್ಳಬೇಕಿದೆ.