‘ ಕನಸು ಮಾರಾಟಕ್ಕಿದೆ ‘ | ನಮ್ಮೂರ ಸುಂದರ ಹುಡುಗ-ಹುಡುಗಿಯರ ಕನಸಿನ ಚಿತ್ರ ಶೀಘ್ರ ತೆರೆಗೆ

0 14

‘ ಕನಸು ಮಾರಾಟಕ್ಕಿದೆ ‘
ಚಿತ್ರರಂಗವೇ ಒಂದು ದೊಡ್ಡ ಕನಸು. ಈಗ ಕನಸನ್ನು ಕೂಡ ಮಾರಲು ಹೊರಟಿದೆ  ‘ ನಮ್ಮ ಊರುದ, ನಮ್ಮ ನೀರ್ ದ ‘ ತುಳು ಯುವ ತಂಡ.

ಕನಸು ಮಾರುವ ಮೊದಲು ಕನಸನ್ನು ಕಾಣಬೇಕು. ಕನಸನ್ನು ಹುಟ್ಟಿಸಬೇಕು, ತಯಾರು ಮಾಡಬೇಕು.  ಆಗ ಮಾತ್ರ ಅದನ್ನು ಮಾರಲು ಸಾಧ್ಯ. ಹಾಗೆ ಕನಸನ್ನು ದೊಡ್ಡ ಮಟ್ಟದಲ್ಲಿ ಮ್ಯಾನುಫ್ಯಾಕ್ಚರ್ ಮಾಡಿಕೊಂಡು ಅದೇ ಕನಸಿನ ಬೆನ್ನೇರಿ ಹೊರಟಿದೆ ಶ್ರಿ ಪಾಷಾನಮೂರ್ತಿ ಕ್ರಿಯೇಷನ್ಸ್ .

ಹೀಗೆ ಕನಸುಗಳನ್ನು ನನಸಾಗಿಸಲು ಹೊರಟoತಹ ಈ ಚಿತ್ರ ತಂಡದಂತಹ ಉತ್ಸಾಹಿ ಯುವಕರ ಕಥೆಯೇ ಕನಸು ಮಾರಾಟಕ್ಕಿದೆ ಚಿತ್ರದ ವಸ್ತು. ಸಾಧಕರಾಗಬೇಕೆಂಬ ಆಸೆ ಹೊತ್ತವನಿಗೆ ಯಾವೆಲ್ಲ ವಿಧದಲ್ಲಿ‌ ಸಾಧಕನಾಗಬಹುದು ಎಂಬ ಸಂದೇಶವನ್ನು ಕಾಮಿಡಿ ಮಾಡುತ್ತಲೇ ಚಿತ್ರ ನಿಮಗೆ ಹೇಳಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.

ಕಾಮಿಡಿ ಕಿಲಾಡಿ ಅನೀಶ್ ಅಮೀನ್

ಇದೊಂದು ಪಕ್ಕಾ ಕಮರ್ಶಿಯಲ್ ಚಿತ್ರವಾಗಿದ್ದು ಇಲ್ಲಿ‌ ಹಾಸ್ಯಕ್ಕೆ ಕೊರತೆಯಿಲ್ಲ. ಜತೆಗೆ ಹಾಸ್ಯಕ್ಕೆ ಸರಿಯಾಗಿ ಹೊಂದುವ ಥ್ರಿಲ್ಲಿಂಗ್ ಅಂಶಗಳೂ ಚಿತ್ರದಲ್ಲಿ ಇರಲಿದೆ. ಒಟ್ಟಾರೆ ಮಸ್ತ್  ಮನೋರಂಜನೆಯ ಮಹಾಪೂರವೇ ಇರುತ್ತದೆ ಎಂಬುದು ಚಿತ್ರ ತಂಡದ ಭರವಸೆ.

ಈ ಚಿತ್ರಕ್ಕೆ  ಶಿವಕುಮಾರ್ ನಿರ್ಮಾಪಕರಾಗಿ ; ಶರತ್ ಕುಮಾರ್, ಪ್ರಶಾಂತ್ ಕೋಟ್ಯಾನ್ (ಜಶನ್ ಗ್ರೂಪ್)ಪಾದೆಗುತ್ತು, ಶರತ್ ಕುಮಾರ್ ರವರು ಸಹ ನಿರ್ಮಾಪಕರಾಗಿ ಬಂಡವಾಳ ಹೂಡಿದ್ದಾರೆ.

ನವ್ಯ

ಸ್ಮಿತೇಶ್

ಸ್ಮಿತೇಶ್ ಎಸ್ ಬಾರ್ಯ ನಿರ್ದೇಶನದ ಈ ಚಿತ್ರಕ್ಕೆ  ಕಾಮಿಡಿ ಕಿಲಾಡಿ ಖ್ಯಾತಿಯ, ಅದ್ಭುತ ಕಾಮಿಡಿ ಸೆನ್ಸ್ ಇರುವ ಅನೀಶ್ ಅಮೀನ್ ಅವರು ಚಿತ್ರಕಥೆ ಸಂಭಾಷಣೆ ಬರೆದಿದ್ದಾರೆ.
ನವೀನ್ ಪೂಜಾರಿ ಚಿತ್ರದ ಕಥೆ ಹೆಣೆದಿದ್ದಾರೆ.
ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಗ್ರಹಣದ ಜವಾಬ್ದಾರಿ ಹೊತ್ತಿದ್ದಾರೆ.

ಸಿನೆಮಾಗಳ ಗೀತೆಗೆ ಸಾಹಿತ್ಯ ಬರೆದ ಕವಿರಾಜ್, ಭರಾಟೆ ನಿರ್ದೇಶಕ ಚೇತನ್, ಸಾಹಿತಿ ನಾಗೇಂದ್ರಪ್ರಸಾದ್, ಸುಕೇಶ್ ಇವರುಗಳು ಕನಸಿನ ಹಾಡಿಗೆ ದನಿ ಸೇರಿಸಿದ್ದಾರೆ.
ಚಿತ್ರಕ್ಕೆ ಖ್ಯಾತ ಹಿನ್ನೆಲೆ ಗಾಯಕಿ ಮಾನಸ ಹೊಳ್ಳ ಅವರು ಭಾವ ಬೆರೆಸಿ ಹಾಡಿದ್ದಾರೆ. ಚಿತ್ರೀಕರಣ ಪೂರ್ತಿಯಾದ ಪರಿಣಾಮ ಸಂಕಲನಕಾರ ಗಣೇಶ್ ನಿರ್ಚಾಲ್ ಈಗ ಫುಲ್ ಬ್ಯುಸಿ.

ಪ್ರಜ್ಞೇಶ್

ಸ್ವಸ್ತಿಕ

ಚಿತ್ರದ ನಾಯಕನಾಗಿ ಪ್ರಜ್ಞೇಶ್ ಮತ್ತು ನಾಯಕಿಯಾಗಿ ಸ್ವಸ್ತಿಕ, ನವ್ಯ, ಸಿದ್ಲಿಂಗು ಶ್ರೀಧರ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ , ಧೀರಜ್ ನೀರ್ಮಾರ್ಗ, ಚಿದಂಬರ, ಸೂರ್ಯ ಕುಂದಾಪುರ, ಚೇತನ್ ರೈ ಮಾಣಿ, ಮೋಹನ್ ಶೇಣಿ, ಹೀಗೆ ಸಾಧಕ ಪ್ರತಿಭಾವಂತ ಕಲಾವಿದರ ದಂಡಿನ ಜತೆ ಹಲವುಹೊಸಬರು ಕೂಡ ಬಣ್ಣ ಹಚ್ಚಲಿದ್ದಾರೆ.

ಈ ಸಿನೆಮಾದ ಕುರಿತು ಚಿತ್ರ ತಂಡ  ಕುತೂಹಲ ಹುಟ್ಟಿಸಿದ್ದು‌ ಪ್ರೇಕ್ಷಕರ ಮನ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಬಹುಶ: ಏಪ್ರಿಲ್ ಅಥವಾ ಮೇ ತಿಂಗಳ ಬಳಿಕ ಕನಸು ಮಾರಾಟಕ್ಕೆ ಸಿದ್ದ.

ಹೊಸ ಕನ್ನಡದ ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡಿ

ಅನೈತಿಕ ಅನಿತಾಳ ಕಥೆ ಕೇಳಿ

Leave A Reply