ಮಾ.22 ಜನತಾ ಕರ್ಫ್ಯೂ ಹಿನ್ನೆಲೆ | ಚಿಕನ್ ಸೆಂಟರ್, ವೈನ್ ಶಾಪ್ ಫುಲ್ ರಶ್ !

ನಾಳೆಯಿಂದ ಬಾರ್, ಹೋಟೆಲ್ ಬಂದ್ ಆಗಲಿದೆ. ಆದರೆ ಟೇಕ್ ಆವೇ( ಪಾರ್ಸೆಲ್) ಇರಲಿದೆ. ವೈನ್ ಶಾಪ್ ಕೂಡ ಓಪನ್ ಇರಲಿದೆ. ಆದರೆ ನಮ್ಮ ಜನಕ್ಕೆ ನಂಬಿಕೆ ಇಲ್ಲ. ಎಲ್ಲಿ ಬಾರ್ ಬಂದ್ ಆದಂತೆ, ವೈನ್ ಶಾಪ್ ಸಡನ್ ಆಗಿ ಬಂದ್ ಆಗಿಬಿಟ್ಟರೆ? ನಾಳೆ ಭಾನುವಾರ ಬೇರೆ : ಹೇಗಪ್ಪಾ ದಿನ ಕಳೆಯೋದು ? ಎಂಬ ಚಿಂತನೆ.


Ad Widget

Ad Widget

ಕೋಳಿ ಕುಯ್ದು, ನಾಟಿ ಮಸಾಲಾ ಕುದಿ ಬರುವಾಗ ಸಣ್ಣಗೆ ಗಂಟಲಿಗೆ ಬಿಟ್ಟುಕೊಳ್ಳಲು ಏನಾದರೂ ಮನೇಲಿ ಇಲ್ಲದೆ ಹೋದರೆ ಹೇಗೆ ? ಅದಕ್ಕೆಂದೇ, ಯಾವತ್ತೂ ಫ್ಯೂಚರ್ ಬಗ್ಗೆ ಯೋಚಿಸದ ಜನ ಫ್ಯೂಚರ್ ಪ್ಲಾನಿಂಗ್ ಮಾಡುತ್ತಿದ್ದಾರೆ. ಅದಕ್ಕೇ ಇವತ್ತು ಸಂಜೆ ವೈನ್ ಶಾಪ್ ಮತ್ತು ಮಾಂಸದಂಗಡಿಗಳ ಮುಂದೆ ಜನವೋ ಜನ………!


Ad Widget

ಬಾರ್, ಹೋಟೆಲ್ ಗಳು ಮಾ.21 ರ ಸಂಜೆಯಿಂದ ಬಂದ್ ಆಗಿದೆ. ಹೊಟೆಲ್ ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ.

ಹೀಗಾಗಿ ಶನಿವಾರ ಸಂಜೆಯಿಂದಲೇ ಚಿಕನ್ ಸೆಂಟರ್‌ನಲ್ಲಿ ರಶ್ಶೋ ರಶ್..ಬಾರ್ ಬಂದ್ ಆದ ಪರಿಣಾಮ ಪಾನಪ್ರಿಯರಂತೂ ವೈನ್‌ಶಾಪ್ ಮುಂದೆ ಕ್ಯೂ ನಲ್ಲಿ ನಿಂತು ತಮಗಿಷ್ಟ ಬಣ್ಣ ಬಣ್ಣದ ದ್ರವ ಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

Ad Widget

Ad Widget

Ad Widget

ಹೇಗೂ ನಾಳೆ ಇಡೀ ದಿನ ಜನತಾ ಕರ್ಫ್ಯೂ ಆಚರಿಸುತ್ತಾ ಮನೇಲೇ ಇರ್ತಾರೆ. ಮನೇಲಿ ಟೈಮ್ ಪಾಸ್ ಆಗಾಕೆ ಕಂಪನಿ ಇಲ್ಲದೆ ಇದ್ರ ಹೆಂಗೆ ?

error: Content is protected !!
Scroll to Top
%d bloggers like this: