ಕೊರೊನಾ ವೈರಸ್ ಹರಡುವಿಕೆ ತಡೆಗೆ ಮುನ್ನೆಚ್ಚರಿಕೆ | ಪುತ್ತೂರಿನಲ್ಲಿ ಶಾಸಕರಿಂದ ಅಧಿಕಾರಿಗಳ ಸಭೆ
ಪುತ್ತೂರು: ಕೊರೋನಾ (ಕೋವಿಡ್ 19) ವೈರಸ್ ಹರಡುವಿಕೆ ತಡೆಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರ ನೇತೃತ್ವದಲ್ಲಿ ಪುತ್ತೂರು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಡಾ.ಯತೀಶ್ ಉಳ್ಳಾಲ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ ಸೇರಿದಂತೆ ಇಲಾಖಾಧಿಕಾರಿಗಳು ಹಾಜರಿದ್ದರು.
ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡು ಕೊರೊನಾ ವೈರಸ್ ತಡೆಗೆ ಏನೆಲ್ಲಾ ಮಾಡ ಬಹುದು. ಜನರಲ್ಲಿ ಜಾಗೃತಿ ಮೂಡಿಸೋ ಕಾರ್ಯಗಳ ಕುರಿತು ಸಂವಹನ ನಡೆಸಲಾಯಿತು.