ಬೆಳ್ತಂಗಡಿ, ನಾವೂರು | ಪ್ರತೀಕ್ ಕೋಟ್ಯಾನ್ ತಂಡದ ಮೇಲೆ ದಾಳಿ, ಭಾರೀ ಪ್ರಮಾಣದ ಸ್ಪೋಟಕ ಸಹಿತ 25 ಲಕ್ಷ ರೂ. ಸೊತ್ತು ವಶ| ಪ್ರತೀಕ್, ಅಣ್ಣಪ್ಪ ಬಂಧನ

0 6

ಬೆಳ್ತಂಗಡಿ : ಅಕ್ರಮವಾಗಿ ಕಪ್ಪುಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಲಾಯಿಲ ನಿವಾಸಿ, ಮಾಜಿ ಪತ್ರಕರ್ತ ಪ್ರತೀಕ್ ಕೋಟ್ಯಾನ್ ಮತ್ತವರ ತಂದೆ ಮತ್ತು ತಂಡದ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ರ ಸೂಚನೆಯಂತೆ ಬೆಳ್ತಂಗಾಡಿ ಪೊಲೀಸರು ದಾಳಿ ನಡೆಸಿದ್ದಾರೆ. ಆದರೆ ಜಗತ್ ಚಾಲಾಕಿ ಪ್ರತೀಕ್ ಕೋಟ್ಯಾನ್ ಓಡಿ ತಪ್ಪಿಸಿಕೊಂಡಿದ್ದಾನೆ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಓಡಿಕಾರು ಎಂಬಲ್ಲಿ ಹಲವಾರು ಸಮಯಗಳಿಂದ ಈತ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ.

ದಾಳಿ ಸಮಯ ಕಲ್ಲಿನ ಕೋರೆ ಸ್ಥಳದಲ್ಲಿ ಭಾರೀ ಪ್ರಮಾಣದ ಜಿಲೆಟಿನ್ ಕಡ್ಡಿಗಳು, ವಯರ್‌ಗಳು, 11 ಜೀವಂತ ಮದ್ದುಗಳು, 15 ಚೀಲದಲ್ಲಿ ಜಿಲೆಟಿನ್ ಕಡ್ಡಿಗಳು, ಟ್ರಾಕ್ಟರ್, ಎರಡು ಹಿಟಾಚಿಗಳು ಸಹಿತ 25 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ವಾಹನ, ಹಿಟಾಚಿ ಮತ್ತು ಸೊತ್ತುಗಳನ್ನು ಜಪ್ತಿ ಮಾಡಿದ್ದಾರೆ.

ಅಕ್ರಮ ಗಣಿಗಾರಿಕೆ ನಡೆದ ಜಾಗವು ಝೇವಿಯರ್ ಪಾಲೇಲಿ ಎಂಬವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಮಂಗಳೂರು ಡಿಆರ್‌ಡಿಒ ಪೊಲೀಸರಿಂದ ಈ ಅಕ್ರಮ ಸ್ಪೋಟಕಗಳನ್ನು ಸ್ಥಳದಲ್ಲೆ ವಿಲೇವಾರಿ ಮಾಡಲಾಗಿದೆ.

ಈ ಹಿಂದೆ ಪತ್ರಕರ್ತನಾಗಿ ಸ್ವಲ್ಪ ಸಮಯ ತೊಡಗಿಕೊಂಡಿದ್ದ ಪ್ರತೀಕ್ ಕೋಟ್ಯಾನ್, ಅಕ್ರಮ ಮರಳುಗಾರಿಕೆಯಲ್ಲೂ ಕೈಯಾಡಿಸಿ ಹೆಸರು ಕೆಡಿಸಿಕೊಂಡಿದ್ದ. ಬೆಳ್ತಂಗಡಿ ಉಪ ನಿರೀಕ್ಷಕ ನಂದ ಕುಮಾರ್, ಗಣಿ ಮತ್ತು ಭೂ ಗಣಿವಿಜ್ಞಾನ ಇಲಾಖೆ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.


ಈ ಪ್ರಕರಣಕ್ಕೆ ಸಂಬಂಧಿಸಿ 1) ಪ್ರತೀಕ್ ತಂದೆ ರಮೇಶ ವಾಸ ಲಾಯಿಲಾ ಮನೆ, ಮತ್ತು ಗ್ರಾಮ, ಬೆಳ್ತಂಗಡಿ ತಾಲೂಕು. ಹಾಗೂ 2) ವೇಣೂರು ಗ್ರಾಮದ ಅಣ್ಣಪ್ಪ ಎಂಬವರುಗಳನ್ನು ಬಂಧಿಸಲಾಗಿರುತ್ತದೆ.

Leave A Reply