ಮಾ.24 | 252 ನೇ ವರ್ಷದ ಪಾಲ್ತಾಡು ಒತ್ತೆಕೋಲ | ಸಂತೆ ವ್ಯಾಪಾರ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಇಲ್ಲ
ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುನಗರದಲ್ಲಿ ವರ್ಷಂಪ್ರತಿ ನಡೆಯುವ ವಿಷ್ಣುಮೂರ್ತಿ ದೈವದ 252ನೇ ವರ್ಷದ ಒತ್ತೆಕೋಲವು ಮಾ.24,25ರಂದು ನಡೆಯಲಿದೆ.
ಮಾ.24 ರಂದು ಬೆಳಿಗ್ಗೆ ಗಣಹೋಮ,ಮಧ್ಯಾಹ್ನ ಹರಿಸೇವೆ ,ಸಂಜೆ ಪಾಲ್ತಾಡು ನಡುಮನೆ ದೈವಸ್ಥಾನದಿಂದ ಭಂಡಾರ ತೆಗೆಯುವುದು,ರಾತ್ರಿ ಮೇಲೇರಿಗೆ ಬೆಂಕಿ ಕೊಡುವುದು,ನಂತರ ಕುಳಿಚಟ್ಟು ನಡೆಯಲಿದೆ.
ಮಾ.25 ರಂದು ಪ್ರಾತಃಕಾಲ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ,ಪ್ರಸಾದ ವಿತರಣೆ,ಮುಳ್ಳು ಗುಳಿಗನ ಕೋಲ ನಡೆಯಲಿದೆ.
ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರಕಾರದ ಮುನ್ನೆಚ್ಚರಿಕೆ ಕ್ರಮದ ಅಂಗವಾಗಿ ಈ ವರ್ಷ ಸಂತೆ ವ್ಯಾಪಾರಕ್ಕೆ ಅವಕಾಶವಿಲ್ಲ, ಜತೆ ಸಾಂಸ್ಕೃತಿಕ ಕಾರ್ಯಕ್ರಮ,ಅನ್ನಸಂತರ್ಪಣೆಯೂ ನಡೆಸಲಾಗುವುದಿಲ್ಲ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.