ಮುಂಡೂರು ಆಲಡ್ಕ| ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶೋತ್ಸವ ಮೇ.19-24ಕ್ಕೆ ಮುಂದೂಡಿಕೆ.

ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನ ಬ್ರಹ್ಮಕಲಶೋತ್ಸವ ಮುಂದೂಡಿಕೆಯಾಗಿದ್ದು ಮೇ 19 ರಿಂದ 24 ಕ್ಕೆ ನಿಗದಿ ಮಾಡಲಾಗಿದೆ.

ಮಾರ್ಚ್ 25 ರಿಂದ 30 ರ ತನಕ ಶ್ರೀ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ನಡೆಸುವುದಾಗಿ ತೀರ್ಮಾನ ವಾಗಿ ಅದಕ್ಕೆ ಬೇಕಾದ ಬಹುತೇಕ ಕೆಲಸಗಳು ಎಲ್ಲಾ ಭಕ್ತರ ,ದಾನಿಗಳ‌ ಸಹಕಾರದಿಂದ ನಡೆದಿದೆ.


Ad Widget

Ad Widget

Ad Widget

Ad Widget

Ad Widget

Ad Widget

ಆದರೆ ಕೊರೋನ‌ ಸೋಂಕಿನ‌ ಕಾರಣದಿಂದ ಸಾರ್ವಜನಿಕ‌ ಕಾರ್ಯಕ್ರಮಗಳ ರದ್ದು ಮಾಡಲು ಸರಕಾರ ಸೂಚಿಸಿರುವುದರಿಂದ ಅನಿವಾರ್ಯವಾಗಿ ಈ ನಿರ್ದಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿಯವರ ನೇತೃತ್ವದಲ್ಲಿ ಬೋಳೋಡಿ ಚಂದ್ರಹಾಸ ರೈ,ಅರುಣ್ ಕುಮಾರ್ ರೈ,ರಾಘವ ಗೌಡ,ಭಾಸ್ಕರ ರೈ,ವಿಶ್ವನಾಥ ರೈ,ಸದಾಶಿವ ರೈ ಎಲ್ಲರು ಸೇರಿ ಕ್ಷೇತ್ರದ ತಂತ್ರಿಗಳಾದ ನಾಗೇಶ್ ತಂತ್ರಿಯವರನ್ನು ಭೇಟಿ ಮಾಡಿ ಸಲಹೆ ಪಡೆದು ಇದೇ ಮೇ ತಿಂಗಳ 19 ರಿಂದ ಪತ್ತನಾಜೆಯ ದಿನ 24 ರವರೆಗೆ ಈ ಹಿಂದೆ ನಿಗದಿಯಾದಂತೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಥಾವತ್ತಾಗಿ ನಡೆಸುವುದೆಂದು ನಿರ್ಧರಿಸಲಾಗಿದೆ.

error: Content is protected !!
Scroll to Top
%d bloggers like this: