Day: March 14, 2020

ಪುತ್ತೂರು| ಶ್ರೀ ಲಕ್ಷ್ಮೀ ಬೆಟ್ಟಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬೇಟಿ

ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಲಕ್ಷ್ಮೀ ದೇವಿ ಬೆಟ್ಟಕ್ಕೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬೇಟಿ ನೀಡಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದರು. ಬಳಿಕ ದೇವಿಯ ಪೂಜೆ ನೆರವೇರಿಸಿದರು. ಮೀನ ಸಂಕ್ರಮಣವಾದ ಇಂದು ಕುಂಭರಾಶಿಯಿಂದ ಮೀನರಾಶಿಗೆ ಸೂರ್ಯದೇವರು ದಾಟುವ ಪುಣ್ಯಪರ್ವಕಾಲದಲ್ಲಿ ಸೂರ್ಯರಶ್ಮಿಯು ದೇಗುಲದ ಮೂರು ಬಾಗಿಲುಗಳನ್ನು ದಾಟಿ ಮಹಾಲಕ್ಷಿಯ ಬಿಂಬವನ್ನು ಸ್ಪರ್ಶಿಸಿದ ದಿನದಂದೇ ಸಾಧ್ವಿ ಬೇಟಿ ನೀಡಿದರು. ಶ್ರೀ ಮಹಾಲಕ್ಷ್ಮೀ ದೇವಿಗೆ ಸಾಧ್ವೀ ಅವರು ಪುಷ್ಪಾರ್ಚನೆ ಗೈದು, ಆರತಿ ಬೆಳಗಿಸಿದರು. ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ …

ಪುತ್ತೂರು| ಶ್ರೀ ಲಕ್ಷ್ಮೀ ಬೆಟ್ಟಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬೇಟಿ Read More »

ಕುದ್ಮಾರು -ಶಾಂತಿಮೊಗರು ರಸ್ತೆ | ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ | ಮಾ.20ಕ್ಕೆ ರಸ್ತೆ ತಡೆದು ಪ್ರತಿಭಟನೆ |ಸಾರ್ವಜನಿಕ ಸಭೆಯಲ್ಲಿ ನಿರ್ಧಾರ

ಬೆಳಂದೂರು : ಸುಳ್ಯ ವಿಧಾನಸಭಾ ಕ್ಷೇತ್ರಕ್ಕೊಳಪಡುವ ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯಾಗಿರುವ ಕುದ್ಮಾರು- ಶಾಂತಿಮೊಗರು-ಆಲಂಕಾರು ಸಂಪರ್ಕ ರಸ್ತೆಯ ಅಗಲೀಕರಣ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ .ಸಮಸ್ಯೆ ಪರಿಹರಿಸದೇ ಇದ್ದರೆ ಮಾ.20ರಂದು ಕುದ್ಮಾರು ಜಂಕ್ಷನ್‍ನಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ …

ಕುದ್ಮಾರು -ಶಾಂತಿಮೊಗರು ರಸ್ತೆ | ಅವೈಜ್ಞಾನಿಕ ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆ | ಮಾ.20ಕ್ಕೆ ರಸ್ತೆ ತಡೆದು ಪ್ರತಿಭಟನೆ |ಸಾರ್ವಜನಿಕ ಸಭೆಯಲ್ಲಿ ನಿರ್ಧಾರ Read More »

ಪುತ್ತೂರು ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕೈಕಾರದಲ್ಲಿ ನಡೆಯುತ್ತಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನೇರ ಪ್ರಸಾರ

ಪುತ್ತೂರು ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಕೈಕಾರದಲ್ಲಿ ನಡೆಯುತ್ತಿರುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನೇರ ಪ್ರಸಾರ🔽

ಮಾ.15 16 | ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೆ

ನರಿಮೊಗರು :ರಾಜ್ಯ ಮುಜರಾಯಿ ಇಲಾಖೆಗೆ ಒಳಪಟ್ಟ ಏಕೈಕ ಮೃತ್ಯುಂಜಯ ದೇವಸ್ಥಾನವಾಗಿರುವ ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವವು ಮಾ.15 ಮತ್ತು ಮಾ.16 ರ ತನಕ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಮಾ.15 ರಂದು ಬೆಳಗ್ಗೆ 8-00ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಸ್ವಸ್ಥಿ ಪುಣ್ಯಹವಾಚನ, ಶ್ರೀ ಮಹಾಗಣಪತಿ ಹೋಮ, ಶ್ರೀ ಮಹಾ ಮೃತ್ಯುಂಜಯ ಹೋಮ, ಹಾಗೂ ಬೆಳಗ್ಗೆ 11-30 ಕ್ಕೆ ಶ್ರೀ ಮಹಾಮೃತ್ಯುಂಜಯ ಹೋಮದ ಪೂರ್ಣಾಹುತಿ ನಡೆಯಲಿದೆ. ಸಂಜೆ ವೀರಮಂಗಲ ಕೃಷ್ಣ …

ಮಾ.15 16 | ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೆ Read More »

ಸುಳ್ಯ ಕ್ಷೇತ್ರದಲ್ಲಿ 1 ಕೋಟಿ 10 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ

ಸುಳ್ಯ ಶಾಸಕರಾದ ಶ್ರೀ ಎಸ್ ಅಂಗಾರ ಅವರ ಶಿಫಾರಸ್ಸಿನಲ್ಲಿ , ಎಂ.ಆರ್.ಪಿ.ಎಲ್ ಮಂಗಳೂರು ಇವರ ಸಿ.ಎಸ್.ಆರ್ ಫಂಡ್ ನಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳ ಲೋಕಾರ್ಪಣೆ ಮಾ.14ರಂದು ನಡೆಯಿತು. ಸುಳ್ಯ ವಿಧಾನಸಭಾ ಕ್ಷೇತ್ರದ ಒಟ್ಟು 211 ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮತ್ತು 9 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 1 ಕೋಟಿ 10ಲಕ್ಷ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕ ಗಳ ಲೋಕಾರ್ಪಣಾ ಕಾರ್ಯಕ್ರಮ ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ …

ಸುಳ್ಯ ಕ್ಷೇತ್ರದಲ್ಲಿ 1 ಕೋಟಿ 10 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆ Read More »

ಕೇಂದ್ರ ಸಚಿವ ಡಿ.ವಿ.ಎಸ್‌ ಗೆ ಶಾಂತಿಮೊಗರು ಬ್ರಹ್ಮಕಲಶದ ಆಮಂತ್ರಣ

ಬೆಳಂದೂರು : ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೆಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಕೇಧ್ರ ಸಚಿವ ಡಿ.ವಿ.ಸದಾನಂದ ಗೌಡ ಅವರಿಗೆ ನೀಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಕೆ.ಸೀತಾರಾಮ ರೈ ಅವರು ಸದಾನಂದ ಗೌಡ ಅವರಿಗೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.ಈ ಸಂದರ್ಭ ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ ಜತೆಗಿದ್ದರು.

ಪುತ್ತೂರು| ನೆಲಪ್ಪಾಲ್ ಆಂಜನೇಯ ಕ್ಷೇತ್ರಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬೇಟಿ

ಭೋಪಾಲ್ ನ ಸಂಸದೆ ಸಾಧ್ವೀ ಪ್ರಜ್ಞಾಸಿಂಗ್ ಠಾಕೂರ್ ಅವರು ವಿಟ್ಲ ಹಿಂದೂ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಲು ಆಗಮಿಸಿದ್ದು ಕಾರ್ಯಕ್ರಮದ ಮುಂದೂಡಿಕೆಯ ಹಿನ್ನೆಲೆಯಲ್ಲಿ ಪುತ್ತೂರು ನೆಹರುನಗರದ ನೆಲಪ್ಪಾಲ್ ಆಂಜನೇಯ ಕ್ಷೆತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಜರಂಗದಳದ ದ.ಪ್ರಾಂತ ಸಹ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ ವಿ.ಹಿಂ. ಪ ಜಿಲ್ಲಾಧ್ಯಕ್ಷ ಡಾ|ಕೃಷ್ಣಪ್ರಸನ್ನ,ಕಾರ್ಯದರ್ಶಿ ಸತೀಶ್ ಬಿ ಎಸ್, ಪ್ರಖಂಡದ ಅಧ್ಯಕ್ಷ ಜನಾರ್ಧನ ಬೆಟ್ಟ, ಬಜರಂಗದಳದ ಪ್ರಮುಖರಾದ ಹರೀಶ್ ದೋಳ್ಪಾಡಿ, ಬಜರಂಗದಳದ ಜಿಲ್ಲಾ ಸಂಚಾಲಕ ಶ್ರೀಧರ ತೆಂಕಿಲ …

ಪುತ್ತೂರು| ನೆಲಪ್ಪಾಲ್ ಆಂಜನೇಯ ಕ್ಷೇತ್ರಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬೇಟಿ Read More »

ಕೊರೋನಾ ಎಫೆಕ್ಟ್ ಸಾರ್ವಜನಿಕ ಕಾರ್ಯಕ್ರಮ ನಡೆಸದಂತೆ ಸರಕಾರದ ಆದೇಶ|ವಿಟ್ಲ ಹಿಂದೂ ಸಮಾವೇಶ ಮುಂದೂಡಿಕೆ

ಮಾರ್ಚ್ 15ರಂದು ವಿಟ್ಲದ ರಥದ ಗದ್ದೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗ ದಳದ ವತಿಯಿಂದ ನಡೆಯಬೇಕಿದ್ದ ವಿರಾಟ್ ಹಿಂದೂ ಸಮಾಜೋತ್ಸವ ಮುಂದೂಡಲಾಗಿದೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಟ್ಟೆ ತಿಳಿಸಿದ್ದಾರೆ. ಕಾರ್ಯಕ್ರಮದ ನಿಮಿತ್ತ ದಿಕ್ಸೂಚಿ ಭಾಷಣ ಮಾಡಲಿದ್ದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಮಂಗಳೂರಿಗೆ ಆಗಮಿಸಿದ್ದರು.ಮುಂದಿನ ದಿನಾಂಕ ವನ್ನು ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಪುತ್ತೂರು|ದೇವಿ ಬೆಟ್ಟದ ಮಹಾಲಕ್ಷ್ಮಿಯ ಸ್ಪರ್ಶಿಸಿದ ಸೂರ್ಯ ರಶ್ಮಿ

ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಲಕ್ಷ್ಮೀ ದೇವಿ ಬೆಟ್ಟದಲ್ಲಿ ವರ್ಷಂಪ್ರತಿಯಂತೆ ಮೀನ ಸಂಕ್ರಮಣವಾದ ಇಂದು ಕುಂಭರಾಶಿಯಿಂದ ಮೀನರಾಶಿಗೆ ಸೂರ್ಯದೇವರು ದಾಟುವ ಪುಣ್ಯಪರ್ವಕಾಲದಲ್ಲಿ ಸೂರ್ಯರಶ್ಮಿಯು ದೇಗುಲದ ಮೂರು ಬಾಗಿಲುಗಳನ್ನು ದಾಟಿ ಮಹಾಲಕ್ಷಿಯ ಬಿಂಬವನ್ನು ಸ್ಪರ್ಶಿಸಿತು. ಸುಮಾರು 7 ಗಂಟೆಯಿಂದ ಮಹಾಲಕ್ಷ್ಮಿಯ ಪಾದದಿಂದ ಸ್ಪರ್ಶಿಸಿ ಪೂಜಾಸಮಯವಾದ 7.30ಕ್ಕೆ ಸೂರ್ಯನ ಆರತಿಯು ಬೆಳಗಿತು. ಈ ಸಂದರ್ಭದಲ್ಲಿ ಧರ್ಮದರ್ಶಿಗಳಾದ ಶ್ರೀ ಎನ್ ಐತ್ತಪ್ಪ ಸಪಲ್ಯ ಮೊದಲಾದವರಿದ್ದರು.

ಮಾ.15 | ಭಜನಾಮೃತ 2020,ವಿವೇಕ ಯುವ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಬಿಡುಗಡೆ

ಕಡಬ : ಎ.5 ರಂದು ಪಾಲ್ತಾಡಿಯ ಮಂಜುನಾಥನಗರದಲ್ಲಿ ನಡೆಯಲಿರುವ ಭಜನಾಮೃತ-2020 ಹಾಗೂ ಯುವ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಬಿಡುಗಡೆ 15/03/2020 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 08:30 ಕ್ಕೆ ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ. ಈ ಸಂಧರ್ಭ ವಿವೇಕಾನಂದ ಯುವಕ ಮಂಡಲದ ಲಾಂಛನ ಬಿಡುಗಡೆ ನಡೆಯಲಿದೆ. ಶ್ರೀ ರಾಕೇಶ್ ರೈ ಕೆಡೆಂಜಿ ನಿಕಟಪೂರ್ವ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸವಣೂರು ವಲಯ ಇವರು ಲಾಂಛನ ಬಿಡುಗಡೆ ಮಾಡುವರು. ಆಮಂತ್ರಣ ಪತ್ರಿಕೆಯನ್ನು ತಾರಾನಾಥ ಕಾಯರ್ಗ, ಉಪಾಧ್ಯಕ್ಷರು, …

ಮಾ.15 | ಭಜನಾಮೃತ 2020,ವಿವೇಕ ಯುವ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಬಿಡುಗಡೆ Read More »

error: Content is protected !!
Scroll to Top