ಮಾ.15 | ಭಜನಾಮೃತ 2020,ವಿವೇಕ ಯುವ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಬಿಡುಗಡೆ

ಕಡಬ : ಎ.5 ರಂದು ಪಾಲ್ತಾಡಿಯ ಮಂಜುನಾಥನಗರದಲ್ಲಿ ನಡೆಯಲಿರುವ ಭಜನಾಮೃತ-2020 ಹಾಗೂ ಯುವ ಪ್ರಶಸ್ತಿ ಪ್ರದಾನ ಸಮಾರಂಭದ ಆಮಂತ್ರಣ ಬಿಡುಗಡೆ 15/03/2020 ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 08:30 ಕ್ಕೆ ಸವಣೂರು ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.

ಈ ಸಂಧರ್ಭ ವಿವೇಕಾನಂದ ಯುವಕ ಮಂಡಲದ ಲಾಂಛನ ಬಿಡುಗಡೆ ನಡೆಯಲಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಶ್ರೀ ರಾಕೇಶ್ ರೈ ಕೆಡೆಂಜಿ ನಿಕಟಪೂರ್ವ ಅಧ್ಯಕ್ಷರು, ಜನಜಾಗೃತಿ ವೇದಿಕೆ ಸವಣೂರು ವಲಯ ಇವರು ಲಾಂಛನ ಬಿಡುಗಡೆ ಮಾಡುವರು.

ಆಮಂತ್ರಣ ಪತ್ರಿಕೆಯನ್ನು ತಾರಾನಾಥ ಕಾಯರ್ಗ, ಉಪಾಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ, ಸವಣೂರು ಬಿಡುಗಡೆ ಮಾಡುವರು.

ಶ್ರೀಮತಿ ಇಂದಿರಾ ಬಿ.ಕೆ. ಅಧ್ಯಕ್ಷರು ಗ್ರಾಮ ಪಂಚಾಯತ್ ಸವಣೂರು,ಸುರೇಶ್ ರೈ ಸೂಡಿಮುಳ್ಳು, ಕಾರ್ಯದರ್ಶಿಗಳು, ರಾಜ್ಯ ಯುವಜನ ಒಕ್ಕೂಟ ಬೆಂಗಳೂರು ಉಪಸ್ಥಿತರಿರುವರು ಎಂದು ಕಾರ್ಯಕ್ರಮ ಆಯೋಜಕರ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top
%d bloggers like this: