ಪುತ್ತೂರು| ಶ್ರೀ ಲಕ್ಷ್ಮೀ ಬೆಟ್ಟಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬೇಟಿ

ಪುತ್ತೂರು ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಲಕ್ಷ್ಮೀ ದೇವಿ ಬೆಟ್ಟಕ್ಕೆ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಬೇಟಿ ನೀಡಿ ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದರು. ಬಳಿಕ ದೇವಿಯ ಪೂಜೆ ನೆರವೇರಿಸಿದರು.


Ad Widget

Ad Widget


Ad Widget

ಮೀನ ಸಂಕ್ರಮಣವಾದ ಇಂದು ಕುಂಭರಾಶಿಯಿಂದ ಮೀನರಾಶಿಗೆ ಸೂರ್ಯದೇವರು ದಾಟುವ ಪುಣ್ಯಪರ್ವಕಾಲದಲ್ಲಿ ಸೂರ್ಯರಶ್ಮಿಯು ದೇಗುಲದ ಮೂರು ಬಾಗಿಲುಗಳನ್ನು ದಾಟಿ ಮಹಾಲಕ್ಷಿಯ ಬಿಂಬವನ್ನು ಸ್ಪರ್ಶಿಸಿದ ದಿನದಂದೇ ಸಾಧ್ವಿ ಬೇಟಿ ನೀಡಿದರು.

ಶ್ರೀ ಮಹಾಲಕ್ಷ್ಮೀ ದೇವಿಗೆ ಸಾಧ್ವೀ ಅವರು ಪುಷ್ಪಾರ್ಚನೆ ಗೈದು, ಆರತಿ ಬೆಳಗಿಸಿದರು. ಶ್ರೀ ಕ್ಷೇತ್ರದ ಧರ್ಮದರ್ಶಿಗಳಾದ ಎನ್. ಐತ್ತಪ್ಪ ಸಪಲ್ಯರು ಶಾಲು ಹೊದಿಸಿ, ಫಲ ಪುಷ್ಪ ನೀಡಿ ದೇವಿಯ ಮೂಲ ಪ್ರಸಾದವನ್ನು ನೀಡಿದರು.

Ad Widget

Ad Widget

Ad Widget
error: Content is protected !!
Scroll to Top
%d bloggers like this: