ಕಡಬ | ಸರಕಾರಿ ಬಸ್‌ನಲ್ಲೇ ಚಾಲಕ ಸಾವು

ಕಡಬ : ಕಡಬ ತಾಲೂಕು ಕೇಂದ್ರದಲ್ಲಿ ರಾತ್ರಿ ನಿಲ್ಲಿಸಿದ ಕೆಎಸ್ಆರ್ಟಿಸಿ ಬಸ್‌ನಲ್ಲಿ ಚಾಲಕ ಮೃತಪಟ್ಟ ಸ್ಥಿತಿಯಲ್ಲಿ ಮಾ.11 ರಂದು ಬೆಳಿಗ್ಗೆ ಕಂಡು ಬಂದಿದ್ದಾರೆ.

 

ನಿನ್ನೆ ರಾತ್ರಿ ಬಸ್‌ ಅನ್ನು ನಿಲುಗಡೆ ಮಾಡಲಾಗಿದ್ದು, ಕಡಬ-ಶಾಂತಿಮೊಗರು-ಸವಣೂರು-ಪುತ್ತೂರು ಗೆ ಬೆಳಿಗ್ಗೆಯ ಟ್ರಿಪ್ ಹೊರಡುವ ಬಸ್ ಇದಾಗಿದೆ. ಎಂದಿನಂತೆ ಚಾಲಕ ರಾತ್ರಿ ತನ್ನ ಕೆಲಸ ಮುಗಿಸಿ ಈ ಬಸ್ಸಿನಲ್ಲಿ ಮಲಗಿದ್ದರು. ಆದರೆ ಬೆಳಿಗ್ಗೆ ನೋಡಿದಾಗ ಚಾಲಕ ಎದ್ದೇ ಇಲ್ಲ. ನಿರ್ವಾಹಕ ಮತ್ತು ಸಾರ್ವಜನಿಕರು ಗಮನಿಸಿ ನೋಡಿದಾಗ ಆತ ಮೃತ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಬಸ್ಸು ಚಾಲಕ ಜಾರಿ ಮುಗ್ಗರಿಸಿ ಬಿದ್ದ ಸ್ಥಿತಿಯಲ್ಲಿದ್ದು, ಬಹುಶ: ತೀವ್ರ ಎದೆನೋವು ನೋವು ಉಂಟಾಗಿ ತಾನು ಮಲಗಿದ್ದ ಸೀಟಿನಿಂದ ಕೆಳಗೆ ಬಿದ್ದಿರಬಹುದೆಂದು ಭಾವಿಸಲಾಗಿದೆ.

ಚಾಲಕನನ್ನು ಬೀದರ್ ಮೂಲದ ರೇವಣಪ್ಪ ಎಂದು ಗುರುತಿಸಲಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರಬೇಕೆಂದು ಅಂದಾಜಿಸಲಾಗಿದೆ. ಬಸ್ ಧರ್ಮಸ್ಥಳ ಡಿಪೋ ಗೆ ಸೇರಿದ್ದು ಎನ್ನಲಾಗಿದೆ.

ಮಾ. 14 | ಕೈಕಾರದಲ್ಲಿ ವೈಭವದ ಶ್ರೀನಿವಾಸ ಕಲ್ಯಾಣೋತ್ಸವ

Leave A Reply

Your email address will not be published.