ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜೆಡಿಎಸ್ ಘಟಕದಿಂದ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ : ಮಿಜಾರಿನ ಶ್ರೇಯ ಪುಷ್ಪರಾಜ್ ಶೆಟ್ಟಿಗೆ ಸನ್ಮಾನ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜನತಾದಳ ಸಂಯುಕ್ತದ ಕರ್ನಾಟಕ ರಾಜ್ಯ ಮಹಿಳಾ ಘಟಕವು ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.

 

ಅಟೋ ಡ್ರೈವರ್ಸ್, ಪೌರಕಾರ್ಮಿಕರು, ಪತ್ರಕರ್ತೆಯರು ಹೀಗೆ ಸಮಾಜದ ವಿವಿಧ ಸ್ತರಗಳಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ದೇಶ ಕಾಯುವ ಯೋಧರ ಪತ್ನಿಯರನ್ನು ಕೂಡ ಗೌರವಿಸಲಾಯಿತು.

ಸನ್ಮಾನಿತರ ಪೈಕಿ ದಕ್ಷಿಣ ಕನ್ನಡದ ಮೀಜಾರಿನ , ಪ್ರತಿಭಾನ್ವಿತೆ ಪತ್ರಕರ್ತೆ ಶ್ರೇಯಾ ಪುಷ್ಪರಾಜ್ ಶೆಟ್ಟಿ ಅವರನ್ನು ಕೂಡ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೇಯಾ ಅವರು ಸುವರ್ಣ ನ್ಯೂಸ್ ನಲ್ಲಿ ವೃತ್ತಿ ಜೀವನ‌ ಆರಂಭಿಸಿ, ತದನಂತರ ಸಮಯ ನ್ಯೂಸ್, ನ್ಯೂಸ್ 18 ನಲ್ಲೂ ವರದಿಗಾರ್ತಿಯಾಗಿ ಒಟ್ಟು 8 ವರ್ಷ ಸೇವೆ ಸಲ್ಲಿಸಿದ್ದಾರೆ.

ನಗರದ ರಾಜಾಜಿನಗರದ ಡಾ.ರಾಜ್ ಕುಮಾರ್ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕಿರುತೆರೆ ನಟಿ ವೈಷ್ಣವಿ, ಜೆಡಿಯು ಪ್ರಧಾನ ಕಾರ್ಯದರ್ಶಿ ಇ ಆನಂದ್ ಹಾಗೂ ರಾಜ್ಯಾಧ್ಯಕ್ಷ ಮಹಿಮ ಜೆ ಪಟೇಲ್ ಉಪಸ್ಥಿತರಿದ್ದು, ಮಹಿಳಾ ದಿನಾಚರಣೆಯ ಶುಭ ಕೋರಿದರು.

Leave A Reply

Your email address will not be published.