ಉಪ್ಪಿನಂಗಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ಮುಖಾಮುಖಿ : ಕಾರು ಚಾಲಕ ಸಾವು

ಉಪ್ಪಿನಂಗಡಿಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ನಡುವೆ  ಸಂಭವಿಸಿದ ರಸ್ತೆ ಅಪಘಾತದಲ್ಲಿ  ಕಾರು ಚಾಲಕ ಮೃತಪಟ್ಟ ಘಟನೆ ನಡೆದಿದೆ.


Ad Widget

ಉಪ್ಪಿನಂಗಡಿಯಲ್ಲಿ ಇಂದು, ಭಾನುವಾರ ರಾತ್ರಿ  ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಮೃತನು ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಮೀನಾಡಿ ನಿವಾಸಿ ಬಾಳಪ್ಪ ಗೌಡರ ಪುತ್ರ ದಯೇಶ್ ಆಗಿದ್ದು ಆತನು ಕಾರನ್ನು ಚಲಾಯಿಸುತ್ತಿದ್ದರು.


Ad Widget

ಕಡಬ ಕಡೆಗೆ ಕೆಎಸ್ಸಾರ್ಟಿಸಿ ಬಸ್ ಹೋಗುತ್ತಿತ್ತು. ಕಡಬದಿಂದ ಉಪ್ಪಿನಂಗಡಿಗೆ ಸ್ವಿಫ್ಟ್ ಕಾರು ಬರುತ್ತಿತ್ತು. ಹಾಗೂ ನಡುವೆ ಉಪ್ಪಿನಂಗಡಿಯ ಹೆದ್ದಾರಿಯ ಸಿಟಿ ಲ್ಯಾಂಡ್ ಹೊಟೇಲ್ ಮುಂಭಾಗದಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಬಸ್ಸಿನ ಹೊಡೆತಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಕಾರಿನ ಚಾಲಕ ದಯೇಶ್ ಕಾರಿನಲ್ಲಿ ಸಿಲುಕಿ ಕೊಂಡಿದ್ದ. ಆತನನ್ನು ಕಾರಿನಿಂದ ಎಳೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ದಾರಿಯ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


Ad Widget

ಅಪಘಾತದ ಕಾರಣದಿಂದ ಸ್ವಲ್ಪ ಸಮಯ ಸಂಚಾರ ವ್ಯತ್ಯಯ ಉಂಟಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ತೆರವು ಕಾರ್ಯ ಕೈಗೊಂಡಿದ್ದಾರೆ.

0 thoughts on “ಉಪ್ಪಿನಂಗಡಿಯಲ್ಲಿ ಕೆಎಸ್ಆರ್ಟಿಸಿ ಬಸ್ ಹಾಗೂ ಮಾರುತಿ ಸ್ವಿಫ್ಟ್ ಕಾರು ಮುಖಾಮುಖಿ : ಕಾರು ಚಾಲಕ ಸಾವು”

  1. Pingback: ಬೆಂಗಳೂರಿನಲ್ಲಿ ತ್ಯಾಜ್ಯ ರಾಶಿಯಲ್ಲಿ ಸ್ಫೋಟ | ಎಡಗಾಲು ಕಳೆದುಕೊಂಡ ಸೆಕ್ಯುರಿಟಿ ಗಾರ್ಡ್ - ಹೊಸ ಕನ್ನಡ

error: Content is protected !!
Scroll to Top
%d bloggers like this: