Day: February 25, 2020

ಫೆ.27 : ಪುತ್ತೂರಿನಲ್ಲಿ ಬಾಲವನಕ್ಕೆ ಹೆಜ್ಜೆ ಇಡೋಣ….ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ

ಪುತ್ತೂರು : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಡಾ.ಶಿವರಾಮ ಕಾರಂತ ಬಾಲವನ ಅಭಿವೃದ್ದಿ ಸಮಿತಿ ಪುತ್ತೂರು,ಸಹಾಯಕ ಆಯುಕ್ತರ ಕಛೇರಿ ಪುತ್ತೂರು ಉಪವಿಭಾಗ, ಪುತ್ತೂರು ತಾಲೂಕು ಪತ್ರಕರ್ತರ ಸಂಘ ಇದರ ಆಶ್ರಯದಲ್ಲಿ  ಬಾಲವನಕ್ಕೆ ಹೆಜ್ಜೆ ಇಡೋಣ….ಕಾರಂತರ ಕನಸುಗಳಿಗೆ ಜೀವ ತುಂಬೋಣ ..ಸಾಂಸ್ಕೃತಿಕ ಜಾಥಾವು ಫೆ.27ರಂದು ಬೆಳಿಗೆ 8.45ಕ್ಕೆ ಪುತ್ತೂರು ಬಸ್‌ನಿಲ್ದಾಣದಿಂದ ಬಾಲವನದವರೆಗೆ ಸಾಗಲಿದೆ. ಕಾರ್ಯಕ್ರಮವನ್ನು  ಶಾಸಕ ಸಂಜೀವ ಮಠಂದೂರು ಉದ್ಘಾಟಿಸುವರು.ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ಅಧ್ಯಕ್ಷತೆ ವಹಿಸುವರು.ಅತಿಥಿಗಳಾಗಿ ತಾ.ಪಂ.ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್,ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ …

ಫೆ.27 : ಪುತ್ತೂರಿನಲ್ಲಿ ಬಾಲವನಕ್ಕೆ ಹೆಜ್ಜೆ ಇಡೋಣ….ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ Read More »

ನಟ ರಕ್ಷಿತ್ ಶೆಟ್ಟಿ,ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಗೆ ಬಂಧನ ಭೀತಿ!

ಬೆಂಗಳೂರು : ಹಾಡೊಂದರ ಟ್ಯೂನ್ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿಗೆ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದರೂ ನಟ ರಕ್ಷಿತ್ ಶೆಟ್ಟಿ ವಿಚಾರಣೆಗೆ ಹಾಜರಾಗಿರಲಿಲ್ಲ, ಈ ಹಿನ್ನೆಲೆಯಲ್ಲಿ ಕೋರ್ಟ್ ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ. ರಕ್ಷಿತ್ ಶೆಟ್ಟಿ ಒಡೆತನದ ಪರಮ್ವಹ ಸ್ಟುಡಿಯೋಸ್ ವಿರುದ್ಧ ಕೃತಿಚೌರ್ಯದ ಪ್ರಕರಣವನ್ನು ಲಹರಿ ಆಡಿಯೋ ದಾಖಲಿಸಿತ್ತು, ಪ್ರಕರಣದ ವಿಚಾರಣೆಗೆ ಪದೇ-ಪದೇ ಗೈರಾದ ಕಾರಣ ಮ್ಯಾಜಿಸ್ಟ್ರೇಟ್ …

ನಟ ರಕ್ಷಿತ್ ಶೆಟ್ಟಿ,ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಗೆ ಬಂಧನ ಭೀತಿ! Read More »

ಸಾಂದೀಪನಿ ವಿದ್ಯಾಸಂಸ್ಥೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ

ನರಿಮೊಗರು : ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗೆ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇವರು ಭೇಟಿ ನೀಡಿದರು. ವಿದ್ಯಾಸಂಸ್ಥೆಯ ಕಾರ್ಯಚಟುವಟಿಕೆಗಳು,  ಸಂಸ್ಕಾರಯುತ ಶಿಕ್ಷಣ ,ಪಠ್ಯೇತರ ಚಟುವಟಿಕೆಗಳು , ಸಂಸ್ಥೆಯ ವಿಶೇಷತೆಗಳನ್ನು ಮನಗಂಡು ಸಂತಸ ಪಟ್ಟರು.ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನು ನಡೆಸಿದರು.ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು. ದೇಶವನ್ನು ರಕ್ಷಣೆ ಮಾಡುವಂತಹ ಯೋಧರಂತೆ ಸದಾ ದೇಶಭಕ್ತ ವಿದ್ಯಾರ್ಥಿಗಳು ನೀವಾಗಿರಬೇಕೆಂದು ತಿಳಿಸಿದರು.ಅಂತಹ ದೇಶಭಕ್ತ ಪ್ರಜೆಗಳ ನಿರ್ಮಾಣ ಮಾಡಲು ಪೂರಕವಾದ ವಾತಾವರಣ ಇಲ್ಲಿ ನಡೆಯುತ್ತಿದೆ ಎಂದರು. …

ಸಾಂದೀಪನಿ ವಿದ್ಯಾಸಂಸ್ಥೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ Read More »

ವಿದ್ಯಾರ್ಥಿ ಬಂಟರ ಸಂಘಕ್ಕೆ ಆಯ್ಕೆ | ಅಧ್ಯಕ್ಷ – ಪ್ರಣಾಮ್ ಶೆಟ್ಟಿ ಕೈಕಾರ, ಪ್ರಧಾನ ಕಾರ್ಯದರ್ಶಿ- ಎಂ.ಶಮಂತ್ ಆಳ್ವ, ಕೋಶಾಧಿಕಾರಿ- ಲಿಖಿತ್ ರೈ ಸವಣೂರು

ಪುತ್ತೂರು: ಫೆ. 22ರಂದು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ ಪುತ್ತೂರಿನಲ್ಲಿ ವಿದ್ಯಾರ್ಥಿ ಬಂಟರ ಸಂಘದ ಪದಾಧಿಕಾರಿಗಳ ನೂತನ ಸಮಿತಿ ರಚನಾ ಸಭೆ ನಡೆಯಿತು. ಈ ಸಭೆಯಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ,ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿಯ ಸಂಚಾಲಕರಾದ ದಯಾನಂದ ರೈ ಮನವಳಿಕೆ ಗುತ್ತು, ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ಪ್ರಧಾನ ಕಾರ್ಯದರ್ಶಿಯಾದ ರಾಕೇಶ್ ರೈ ಕೆಡೆಂಜಿ, …

ವಿದ್ಯಾರ್ಥಿ ಬಂಟರ ಸಂಘಕ್ಕೆ ಆಯ್ಕೆ | ಅಧ್ಯಕ್ಷ – ಪ್ರಣಾಮ್ ಶೆಟ್ಟಿ ಕೈಕಾರ, ಪ್ರಧಾನ ಕಾರ್ಯದರ್ಶಿ- ಎಂ.ಶಮಂತ್ ಆಳ್ವ, ಕೋಶಾಧಿಕಾರಿ- ಲಿಖಿತ್ ರೈ ಸವಣೂರು Read More »

ನಾಳೆ, ಫೆ.26 : ಹಿರೇಬಂಡಾಡಿಯ ಉಳ್ಳತ್ತೋಡಿ ಷಣ್ಮುಖ ದೇವರ ಸನ್ನಿಧಿಗೆ ಬರಲಿದ್ದಾರೆ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು

ನಾಳೆ ಹಿರೇಬಂಡಾಡಿಯ ಉಳ್ಳತ್ತೋಡಿಯ ಷಣ್ಮುಖ ದೇವಾಲಯದಲ್ಲಿ ನವೀಕರಣ – ಪುನಃ ಪ್ರತಿಷ್ಠಾಷ್ಟ ಬಂಧ ಬ್ರಹ್ಮಕಲಶೋತ್ಸವದ ಸಮಾರಂಭಕ್ಕೆ ಸಂಭ್ರಮದ ಆರನೆಯ ದಿನ. ಸ್ತಂಭ ಕಲಶ ತಳಿರು-ತೋರಣ ರಸ್ತೆಯ ಇಕ್ಕೆಲಗಳಲ್ಲೂ ಶುದ್ಧತೆಯ ಮೈಗೂಡಿಸಿಕೊಂಡ ಸ್ವಚ್ಛ ಬಂಡಾಡಿ ನಿಮ್ಮನ್ನು ಕೈಬೀಸಿ ಕರೆಯುತ್ತದೆ. ಹಿರೇಬಂಡಾಡಿ ಗ್ರಾಮದ ಪುರುಷರು ಬಿಳಿಯ ಪಂಚೆಯುಟ್ಟು ಕೇಸರಿ ಶಾಲಿನಲ್ಲಿ ನಿಮಗೆ ಸ್ವಾಗತ ಕೋರಿದರೆ, ಮಹಿಳೆಯರು ಕೇಸರಿ ಸೀರೆಯುಟ್ಟು ಬ್ರಹ್ಮಕಲಶೋತ್ಸವಕ್ಕೆ ಬರುವ ಭಕ್ತಾದಿಗಳ ಸ್ವಾಗತಕ್ಕೆ ನಿಲ್ಲುತ್ತಾರೆ. ಬನ್ನಿ, ಶ್ರೀ ಕ್ಷೇತ್ರ ಉಳ್ಳತ್ತೋಡಿಯ ಸುಬ್ರಹ್ಮಣ್ಯ ದೇವರ ಕೃಪೆಗೆ ಪಾತ್ರರಾಗಿ. 26/02/2020 ರ …

ನಾಳೆ, ಫೆ.26 : ಹಿರೇಬಂಡಾಡಿಯ ಉಳ್ಳತ್ತೋಡಿ ಷಣ್ಮುಖ ದೇವರ ಸನ್ನಿಧಿಗೆ ಬರಲಿದ್ದಾರೆ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರು Read More »

ಸಲ್ಮಾನ್ ಖಾನ್ ಹತ್ಯೆಗೆ 30 ಲಕ್ಷ ರೂ. ಸುಪಾರಿ ಪಡೆದಿದ್ದೆ | ರಾಜ್ ಕುಂದ್ರಾ ಕಛೇರಿಯಿಂದ 8 ಕೋಟಿ ದೋಚಿದ್ದು ನಾನೇ !- ರವಿ ಮಲ್ಲಿಕ್ @ ಭೂರಾ

ಖ್ಯಾತ ಬಾಲಿವುಡ್​ ನಟ ಸಲ್ಮಾನ್​ಖಾನ್​ ಅವರನ್ನು ಹತ್ಯೆ ಮಾಡಲು 30 ಲಕ್ಷ ರೂಪಾಯಿ ಸುಪಾರಿ ಪಡೆದಿರುವುದನ್ನು ಭೂಗತ ಪಾತಕಿ ರವಿ ಭೂರಾ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ. ಗ್ಯಾಂಗ್​ಸ್ಟರ್​ ಶಿವಶಕ್ತಿ ನಾಯ್ಡು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪಾತಕಿ ರವಿ ಮಲ್ಲಿಕ್ ಉರುಫ್​ ಭೂರಾ ಪೊಲೀಸರಿಗೆ ವಿಚಾರಣೆ ವೇಳೆ ಈ ವಿಚಾರ ತಿಳಿಸಿದ್ದಾನೆ. ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ಕಚೇರಿ ಲೂಟಿ ಮಾಡಿ 8 ಕೋಟಿ ಹಣ ಕದ್ದಿರುವುದಾಗಿ ಕೂಡ ಆತ …

ಸಲ್ಮಾನ್ ಖಾನ್ ಹತ್ಯೆಗೆ 30 ಲಕ್ಷ ರೂ. ಸುಪಾರಿ ಪಡೆದಿದ್ದೆ | ರಾಜ್ ಕುಂದ್ರಾ ಕಛೇರಿಯಿಂದ 8 ಕೋಟಿ ದೋಚಿದ್ದು ನಾನೇ !- ರವಿ ಮಲ್ಲಿಕ್ @ ಭೂರಾ Read More »

ದೇಶದ್ರೋಹಿಗಳಿಗೆ ಇನ್ಮುಂದೆ ಜೈಲು ಶಿಕ್ಷೆ ಇಲ್ಲ, ನೇರ ಗುಂಡೇಟು : ಬಸನಗೌಡ ಪಾಟೀಲ ಯತ್ನಾಳ

“ದೇಶದ್ರೋಹದ ಕಾರ್ಯದಲ್ಲಿ ಭಾಗಿಯಾಗುವವರಿಗೆ ಇನ್ನು ಮುಂದೆ ಜೈಲು ಶಿಕ್ಷೆ ಇಲ್ಲ, ನೇರವಾಗಿ ಗುಂಡೇಟು” ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಕ ಹೇಳಿಕೆ ನೀಡಿದ್ದಾರೆ. ತಮ್ಮ ಎಂದಿನ ನೇರ ನಿಷ್ಠುರ ಮಾತಿಗೆ ಹೆಸರಾದ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು, “ಪಾಕ್ ಪರ ಘೋಷಣೆ ಕೂಗುವ, ದೇಶದ್ರೋಹಿ ಕೃತ್ಯ ಎಸಗುವ, ಫೇಸ್‌‌ಬುಕ್ ನಲ್ಲಿ ಪೋಸ್ಟ್ ಹಾಕುವ ದೇಶದ್ರೋಹಿಗಳಿಗೆ ನೇರವಾಗಿ ಗುಂಡೇಟು ಸಲ್ಲುತ್ತವೆ ” ಎಂದರು. “ಸ್ವಾತಂತ್ರ್ಯ ಹೋರಾಟಗಾರ ಎಚ್. …

ದೇಶದ್ರೋಹಿಗಳಿಗೆ ಇನ್ಮುಂದೆ ಜೈಲು ಶಿಕ್ಷೆ ಇಲ್ಲ, ನೇರ ಗುಂಡೇಟು : ಬಸನಗೌಡ ಪಾಟೀಲ ಯತ್ನಾಳ Read More »

ಸಂಭ್ರಮದ ಕಾಣಿಯೂರು ಜಾತ್ರೆ

ಕಾಣಿಯೂರು ಶ್ರೀ ಮಠದ ಜಾತ್ರೋತ್ಸವ ಕಾಣಿಯೂರು: ಶ್ರೀ ಜಗದ್ಗುರು ಶ್ರೀಮನ್ಮದ್ವಾರ್ಯ ಮೂಲ ಸಂಸ್ಥಾನಂ ಉಡುಪಿ ಕಾಣಿಯೂರು ಶ್ರೀ ಮಠದ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ಆದೇಶದಂತೆ ಕಾಣಿಯೂರು ಜಾತ್ರೆಯು ಫೆ 21ರಿಂದ ಪ್ರಾರಂಭಗೊಂಡು ಫೆ 25ರವರೆಗೆ ನಡೆಯಿತು. ಫೆ 14ರಂದು ಕಾಣಿಯೂರು ಶ್ರೀ ಮಠದಲ್ಲಿ ನಡೆದ ಗೊನೆ ಮೂಹುರ್ತದ ಮೂಲಕ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಯಿತು. ಫೆ 19ರಂದು ಮುಂಡ್ಯ ಹಾಕಲಾಯಿತು. ಫೆ 21ರಂದು ರಾತ್ರಿ ಭಂಡಾರ ತೆಗೆದು ಧ್ವಜಾರೋಹಣ, ಫೆ 22ರಂದು ಬೆಳಿಗ್ಗೆ ಶ್ರೀ ಅಮ್ಮನವರ ಸನ್ನಿಧಿಯಲ್ಲಿ …

ಸಂಭ್ರಮದ ಕಾಣಿಯೂರು ಜಾತ್ರೆ Read More »

ಸವಣೂರು ವಿದ್ಯಾರಶ್ಮಿ ಕಾಲೇಜಿನಲ್ಲಿ ಕ್ಯಾಂಪಸ್ ಆಯ್ಕೆ ಮಾಹಿತಿ ಕಾರ್ಯಕ್ರಮ

ಸವಣೂರು : ಇಲ್ಲಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಭರವಸಾ ಕೋಶದ ವತಿಯಿಂದ ಅಂತಿಮ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಕೌಶಲಾಭಿವೃದ್ಧಿ ಮತ್ತು ಉದ್ಯೋಗ ತರಬೇತಿಯ ಬಗ್ಗೆ ಕಾರ್ಯಾಗಾರವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಉನ್ನತಿ ಕೇರಿಯರ್ ಅಕಾಡೆಮಿಯ ಸಂಯೋಜಕಿ ಸುಚೇತಾ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವೇದಿಕೆಯಲ್ಲಿ  ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್ ರೈ , ಆಂತರಿಕ ಭರವಸಾ ಕೋಶದ ಸಂಯೋಜಕಎಂ. ಶೇಷಗಿರಿ ಮೂಕಮಲೆ,ಉಪನ್ಯಾಸಕರಾದ  ಗುರುರಾಜ್, ಕಿರಣ್ ಚಂದ್ರಉಪಸ್ಥಿತರಿದ್ದರು. ವಿದ್ಯಾರ್ಥಿನಿ ರಫೀನಾ ಅವರು ಸ್ವಾಗತಿಸಿ, ವಂದಿಸಿದರು.

ಪುತ್ತೂರು| ಗೆಜ್ಜೆಗಿರಿ ಬ್ರಹ್ಮಕಲಶ- ಇತಿಹಾಸ ಸೃಷ್ಟಿಸಿದ ಹೊರೆಕಾಣಿಕೆ ಮೆರವಣಿಗೆ

ಪುತ್ತೂರು: ಗೆಜ್ಜೆ ಗಿರಿ ಕ್ಷೇತ್ರದ ಬ್ರಹ್ಮಕಲಶ ದ ಅಂಗವಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದವಠಾರದಿಂದ ಹೊರಟ ಹೊರೆಕಾಣಿಕೆ ಮೆರವಣಿಗೆ ಹೊಸ ಇತಿಹಾಸ ಸೃಷ್ಟಿ ಸಿದೆ. ಕೋಟಿ ಚೆನ್ನಯ್ಯ ಬಾಳಿ ಬದುಕಿದ ಗೆಜ್ಜೆಗಿರಿ ನಂದನ ವಿತ್ತಲ್ ಕ್ಷೇತ್ರವು ಗಡಿ ಭಾಷೆಗಳನ್ನು ಮೀರಿ ನಿಂತ ಐತಿಹಾಸಿಕ ಧಾರ್ಮಿಕ ಕ್ಷೇತ್ರವಾಗಿದೆ ಎಂಬುದಕ್ಕೆ ಇವತ್ತು ಪುತ್ತೂರಿನಲ್ಲಿ ನಮಗೆ ಕಾಣಸಿಕ್ಕ ಹೊರೆಕಾಣಿಕೆಯ ಮೆರವಣಿಗೆಯೇ ಸಾಕ್ಷಿ. ನ ಭೂತೋ ನ ಭವಿಷ್ಯತಿ ಎಂಬಂತೆ ದ.ಕ., ಉಡುಪಿ, ಕಾಸರಗೋಡು, ಬೆಂಗಳೂರು, ಗೋವಾ, ಮಡಿಕೇರಿ, ಚಿಕ್ಕಮಗಳೂರು ಹೀಗೆ …

ಪುತ್ತೂರು| ಗೆಜ್ಜೆಗಿರಿ ಬ್ರಹ್ಮಕಲಶ- ಇತಿಹಾಸ ಸೃಷ್ಟಿಸಿದ ಹೊರೆಕಾಣಿಕೆ ಮೆರವಣಿಗೆ Read More »

error: Content is protected !!
Scroll to Top