ದೇಶದ್ರೋಹಿಗಳಿಗೆ ಇನ್ಮುಂದೆ ಜೈಲು ಶಿಕ್ಷೆ ಇಲ್ಲ, ನೇರ ಗುಂಡೇಟು : ಬಸನಗೌಡ ಪಾಟೀಲ ಯತ್ನಾಳ

“ದೇಶದ್ರೋಹದ ಕಾರ್ಯದಲ್ಲಿ ಭಾಗಿಯಾಗುವವರಿಗೆ ಇನ್ನು ಮುಂದೆ ಜೈಲು ಶಿಕ್ಷೆ ಇಲ್ಲ, ನೇರವಾಗಿ ಗುಂಡೇಟು” ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ತಮ್ಮ ಎಂದಿನ ನೇರ ನಿಷ್ಠುರ ಮಾತಿಗೆ ಹೆಸರಾದ ಬಸವನ ಗೌಡ ಪಾಟೀಲ್ ಯತ್ನಾಳ್ ಅವರು ವಿಜಯಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಅವರು, “ಪಾಕ್ ಪರ ಘೋಷಣೆ ಕೂಗುವ, ದೇಶದ್ರೋಹಿ ಕೃತ್ಯ ಎಸಗುವ, ಫೇಸ್‌‌ಬುಕ್ ನಲ್ಲಿ ಪೋಸ್ಟ್ ಹಾಕುವ ದೇಶದ್ರೋಹಿಗಳಿಗೆ ನೇರವಾಗಿ ಗುಂಡೇಟು ಸಲ್ಲುತ್ತವೆ ” ಎಂದರು.

“ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್ ದೊರೆಸ್ವಾಮಿ ಅವರು ದೇಶದಲ್ಲಿ ಪಾಕ್ ಪರ ಘೋಷಣೆ ಕೂಗುವ ವ್ಯಕ್ತಿಗಳನ್ನು ಸಮರ್ಥಿಸುವಂತೆ ಹೇಳಿಕೆ ನೀಡುತ್ತಿದ್ದಾರೆ. ಅವರು ನಕಲಿ ಸ್ವಾತಂತ್ರ್ಯ ಹೋರಾಟಗಾರ, ಪಾಕ್ ಏಜೆಂಟ್” ಎಂದು ಬೇಂಕಿಯುಗುಳಿದ್ದಾರೆ.

“ಮೋದಿ, ಅಮಿತ್ ಶಾ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದಾರಾ ಎಂದು ಕಾಂಗ್ರೆಸ್‌ ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸೋನಿಯಾ ಗಾಂಧಿ, ಸಿದ್ಧರಾಮಯ್ಯ ಅವರು ಪಾಲ್ಗೊಂಡಿದ್ದಾರಾ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿಯ ಹಿರಿಯ ತಲೆಮಾರಿನ ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಪಾಲ್ಗೊಂಡಿರಲಿಲ್ಲವೇ” ಎಂದು ಮರು ಪ್ರಶ್ನಿಸಿದ್ದಾರೆ.

” ನೇತಾಜಿ ಸುಭಾಷ್ ಚಂದ್ರ ಭೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಪ್ರಧಾನಿ ಆಗಿದ್ದರೆ ಪಾಕ್ ಎಂಬ ಅಕ್ರಮ ಸಂತಾನ ಹುಟ್ಟುತ್ತಲೇ ಇರಲಿಲ್ಲ. ಮೋತಿಲಾಲ್ ನೆಹರು ತಮ್ಮ ಮಗನನ್ನು ಪ್ರಧಾನಿ‌ ಮಾಡುವ ಸ್ವಾರ್ಥಕ್ಕಾಗಿ ಪಾಕ್ ಎಂಬ ಬಚ್ಚಾ ದೇಶ ಹುಟ್ಟಿಕೊಂಡಿತು” ಎಂದರು.

Leave A Reply