ಸಲ್ಮಾನ್ ಖಾನ್ ಹತ್ಯೆಗೆ 30 ಲಕ್ಷ ರೂ. ಸುಪಾರಿ ಪಡೆದಿದ್ದೆ | ರಾಜ್ ಕುಂದ್ರಾ ಕಛೇರಿಯಿಂದ 8 ಕೋಟಿ ದೋಚಿದ್ದು ನಾನೇ !- ರವಿ ಮಲ್ಲಿಕ್ @ ಭೂರಾ

ಖ್ಯಾತ ಬಾಲಿವುಡ್​ ನಟ ಸಲ್ಮಾನ್​ಖಾನ್​ ಅವರನ್ನು ಹತ್ಯೆ ಮಾಡಲು 30 ಲಕ್ಷ ರೂಪಾಯಿ ಸುಪಾರಿ ಪಡೆದಿರುವುದನ್ನು ಭೂಗತ ಪಾತಕಿ ರವಿ ಭೂರಾ ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ತಿಳಿದು ಬಂದಿದೆ.

ಗ್ಯಾಂಗ್​ಸ್ಟರ್​ ಶಿವಶಕ್ತಿ ನಾಯ್ಡು ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಪಾತಕಿ ರವಿ ಮಲ್ಲಿಕ್ ಉರುಫ್​ ಭೂರಾ ಪೊಲೀಸರಿಗೆ ವಿಚಾರಣೆ ವೇಳೆ ಈ ವಿಚಾರ ತಿಳಿಸಿದ್ದಾನೆ.


Ad Widget

Ad Widget

Ad Widget

Ad Widget

Ad Widget

Ad Widget

ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್​ಕುಂದ್ರಾ ಕಚೇರಿ ಲೂಟಿ ಮಾಡಿ 8 ಕೋಟಿ ಹಣ ಕದ್ದಿರುವುದಾಗಿ ಕೂಡ ಆತ ಒಪ್ಪಿಕೊಂಡಿದ್ದಾನೆ ಎಂದು ಮೀರತ್​​ನ ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರವಿಭೂರಾ ನೀಡಿರುವ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ರವಿ ಭೂರಾ ಮುಜಾಫರ್​ ನಗರದ ಬಳಿ ಇರುವ ರಾಯಷಿ ನಿವಾಸಿ. ದೆಹಲಿಯ ಜೀವನ ಪಾರ್ಕ್​ ಕಾಲೋನಿಯಲ್ಲಿ ವಾಸವಾಗಿದ್ದ.

ಕಳೆದ ಮಂಗಳವಾರ ಕಂಕರ್​ ಖೇಡಾ ಬಳಿ ಎದುರಾಳಿ ಶಿವಶಕ್ತಿ ನಾಯ್ಡು ಎಂಬಾತನನ್ನು ಹತ್ಯೆ ಮಾಡಿ ತಲೆ ಮರೆಸಿಕೊಂಡಿದ್ದ.

ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದಾರೆ.

error: Content is protected !!
Scroll to Top
%d bloggers like this: