ಸಾಂದೀಪನಿ ವಿದ್ಯಾಸಂಸ್ಥೆಗೆ ಸಂಸದೆ ಶೋಭಾ ಕರಂದ್ಲಾಜೆ ಭೇಟಿ


Ad Widget


ನರಿಮೊಗರು : ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗೆ ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಇವರು ಭೇಟಿ ನೀಡಿದರು. ವಿದ್ಯಾಸಂಸ್ಥೆಯ ಕಾರ್ಯಚಟುವಟಿಕೆಗಳು,  ಸಂಸ್ಕಾರಯುತ ಶಿಕ್ಷಣ ,ಪಠ್ಯೇತರ ಚಟುವಟಿಕೆಗಳು , ಸಂಸ್ಥೆಯ ವಿಶೇಷತೆಗಳನ್ನು ಮನಗಂಡು ಸಂತಸ ಪಟ್ಟರು.ವಸತಿ ನಿಲಯದ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದವನ್ನು ನಡೆಸಿದರು.ಪರೀಕ್ಷಾ ಪೂರ್ವ ತಯಾರಿಯ ಬಗ್ಗೆ ಕೆಲವು ಸಲಹೆಗಳನ್ನು ನೀಡಿದರು.


Ad Widget

ದೇಶವನ್ನು ರಕ್ಷಣೆ ಮಾಡುವಂತಹ ಯೋಧರಂತೆ ಸದಾ ದೇಶಭಕ್ತ ವಿದ್ಯಾರ್ಥಿಗಳು ನೀವಾಗಿರಬೇಕೆಂದು ತಿಳಿಸಿದರು.ಅಂತಹ ದೇಶಭಕ್ತ ಪ್ರಜೆಗಳ ನಿರ್ಮಾಣ ಮಾಡಲು ಪೂರಕವಾದ ವಾತಾವರಣ ಇಲ್ಲಿ ನಡೆಯುತ್ತಿದೆ ಎಂದರು. ವಿದ್ಯಾರ್ಥಿಗಳ ಎಲ್ಲಾ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.


Ad Widget

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಯರಾಮ ಕೆದಿಲಾಯ ,ಸಂಚಾಲಕರಾದ ಶ್ರೀ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿಗಳಾದ ಶ್ರೀ ಕೃಷ್ಣ ಪ್ರಸಾದ್ ಕೆದಿಲಾಯ, ಸದಸ್ಯರಾದ ಶ್ರೀ ಹರೀಶ್ ಪುತ್ತೂರಾಯ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಜಯಮಾಲಾ. ವಿ.ಎನ್, ಹಿಂದೂ ಧಾರ್ಮಿಕ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ, ಶ್ರೀ ಅಶೋಕ್ ಕುಮಾರ್ ಪುತ್ತಿಲ, ಶ್ರೀ ಲಕ್ಷ್ಮಣ ಕರಂದ್ಲಾಜೆ,  ಶ್ರೀ ಶ್ರೀಕಾಂತ್ ಆಚಾರ್ , ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು,  ಶಿಕ್ಷಕ ವೃಂದ,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Ad Widget

Ad Widget

Ad Widget

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಬಳಿಕ ಶೋಭಾ ಕರಂದ್ಲಾಜೆಯವರು ಸ್ವತಃ ಸಿಹಿ ತಿಂಡಿಯನ್ನು ವಿದ್ಯಾರ್ಥಿಗಳಿಗೆ ಹಂಚುವ ಮೂಲಕ ಗಮನ ಸೆಳೆದರು.ಬಳಿಕ ಆಟದ ಮೈದಾನ ಹಾಗೂ ವಸತಿ ನಿಲಯವನ್ನು ವೀಕ್ಷಿಸಿ ಸಂಸ್ಥೆಯ ಬೆಳವಣಿಗೆಗೆ ಶುಭ ಹಾರೈಸಿದರು.

error: Content is protected !!
Scroll to Top
%d bloggers like this: