ಕೊಳ್ತಿಗೆ ಪ್ರಾ.ಕೃ.ಪ.ಸಹಕಾರ ಸಂಘ : ಕಾಂಗ್ರೆಸ್ ಬೆಂಬಲಿಗರ ಮೇಲು ಗೈ
ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ.
ಆಡಳಿತಾರೂಡ ಸಹಕಾರ ಭಾರತಿ ಅಧಿಕಾರ ಕಳೆದುಕೊಂಡಿದೆ.
ಸಾಲಗಾರರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗಂಗಾಧರ ಗೌಡ ಕೆ,ವಸಂತ ಕುಮಾರ್ ರೈ ಕೆ,ವೆಂಕಟರಮಣ ಕೆ.ಎಸ್,ಬಿಜೆಪಿಯ ತೀರ್ಥಾನಂದ ದುಗ್ಗಳ,ಸತೀಶ್ ಪಾಂಬಾರು, ಪ.ಜಾ.ಕ್ಷೇತ್ರದಲ್ಲಿ ಕಾಂಗ್ರೆಸ್ ನ ಗುರುವಪ್ಪ ಎಂ,ಪ.ಪಂ.ಕ್ಷೇತ್ರದಲ್ಲಿ ಹಾಲಿ ಉಪಾಧ್ಯಕ್ಷ ಬಿಜೆಪಿ ಯ ಅಣ್ಣಪ್ಪ ನಾಯ್ಕ ಬಿ,ಹಿಂದುಳಿದ ವರ್ಗ ಎ ಸ್ಥಾನದಲ್ಲಿ ಕಾಂಗ್ರೆಸ್ ನ ಶಿವರಾಮ, ಹಿಂದುಳಿದ ವರ್ಗ ಬಿ ಸ್ಥಾನದಲ್ಲಿ ಹಾಲಿ ಅಧ್ಯಕ್ಷ ಬಿಜೆಪಿಯ ವಸಂತ ಕುಮಾರ್ ಕೆ ಪೆರ್ಲಂಪಾಡಿ,ಮಹಿಳಾ ಸ್ಥಾನದಿಂದ ಕಾಂಗ್ರೆಸ್ ನ ಲಕ್ಷ್ಮೀ ಕೆ.ಜಿ,ನಾಗವೇಣಿ ಕೆ.ಕೆ, ,ಸಾಲಗಾರರಲ್ಲದ ಕ್ಷೇತ್ರದಲ್ಲಿ ಕಾಂಗ್ರೆಸ್ ನ ವಿಶಾಲಾಕ್ಷಿ ಆಯ್ಕೆ ಯಾಗಿದ್ದಾರೆ.
ಕಾಂಗ್ರೆಸ್8 ,ಬಿಜೆಪಿ ಸಹಕಾರ ಭಾರತಿಯ 4ಮಂದಿ ನಿರ್ದೇಶಕರಾಗಿ ಆಯ್ಕೆ ಯಾಗುವ ಮೂಲಕ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.ಕಳೆದ ಅವಧಿಯಲ್ಲಿ ಬಿಜೆಪಿ ಅಧಿಕಾರ ದ ಚುಕ್ಕಾಣಿ ಹಿಡಿದಿತ್ತು.
ಕಳೆದ ಅವಧಿಯಲ್ಲಿ1 ಸ್ಥಾನ ಪಡೆದಿದ್ದ ಕಾಂಗ್ರೆಸ್ ಈ ಬಾರಿ ತನ್ನ ಸಂಘಟನಾ ಚತುರತೆಯಿಂದ 7 ಸ್ಥಾನಗಳನ್ನು ಹೆಚ್ಚಿಕೊಂಡಿದೆ.ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಬಾರಿ ಪಾಲ್ತಾಡಿ ಗ್ರಾಮದಿಂದ ಎರಡೂ ಪಕ್ಷದಿಂದ ಒಂದೂ ನಿರ್ದೇಶಕರು ಆಯ್ಕೆಯಾಗಿಲ್ಲ..