ಕಾವು : ಓಮ್ನಿ-ಲಾರಿ ನಡುವೆ ಭೀಕರ ಅಪಘಾತ,ಕೊಡಿಪ್ಪಾಡಿ ನಾರಾಯಣ ಜೋಯಿಸ ಮೃತ್ಯು

ಪುತ್ತೂರು : ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಕಾವು ಎಂಬಲ್ಲಿ ಓಮ್ನಿ ಮತ್ತು ಲಾರಿಯ ನಡುವೆ ನಡೆದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾರೆ.

ಕಾವಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಈ ಅಪಘಾತ ನಡೆದಿದ್ದು, ಪೆರ್ಲಂಪಾಡಿ ಕಡೆ ಹೋಗುತ್ತಿದ್ದ ಮಾರುತಿ ಓಮ್ನಿ ಮತ್ತು ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಲಾರಿ ನಡುವೆ ಫೆ.23 ರಂದು ಮಧ್ಯಾಹ್ನ ಅಪಘಾತ ನಡೆದಿದ್ದು ,ಘಟನೆಯಲ್ಲಿ ಗಂಭೀರ ಗಾಯಗೊಂಡ ಕೊಡಿಪ್ಪಾಡಿ ನಿವಾಸಿ ನಾರಾಯಣ ಜೋಯಿಸ ಅವರು ಮೃತಪಟ್ಟಿದ್ದಾರೆ.

ನಾರಾಯಣ ಜೋಯಿಶ

ನಾರಾಯಣ ಜೋಯಿಷ ಅವರು ಪೆರ್ಲಂಪಾಡಿಯ ತಮ್ಮ ತರವಾಡು ಮನೆಯಲ್ಲಿ ಕಾರ್ಯಕ್ರಮ ನಿಮಿತ್ತ ಮಾರುತಿ‌ ಓಮ್ನಿ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಮಾರುತಿ ಓಮ್ನಿಯ ಹಿಂದುಗಡೆ ನಾರಾಯಣ ಜೋಯಿಸ ಅವರ ಕುಟುಂಬಸ್ಥರು ಬರುತ್ತಿದ್ದು ಅಪಘಾತವನ್ನು‌ ನೋಡಿ ತಕ್ಷಣ ಗಾಯಾಳು ನಾರಾಯಣ ಜೋಯಿಸ ಅವರನ್ನು ತಮ್ಮ ಕಾರಿನಲ್ಲಿ ಪುತ್ತೂರಿನ ಆಸ್ಪತ್ರೆಗೆ ಕರೆ ತಂದು ಹೆಚ್ಚಿನ ಚಿಕಿತ್ಸೆಗೆ‌ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ದಾರಿ‌ ಮಧ್ಯೆ ಮೃತಪಟ್ಟಿದ್ದಾರೆ.

ಕಾವಿನಲ್ಲಿ ಕಳೆದ ಕೆಲದಿನಗಳಿಂದ ಒಂದರ ಮೇಲೊಂದು ಅಪಘಾತ ನಡೆಯುತ್ತಿದೆ. ಕಾವು ಎಂಬ ಹೆಸರು ಕೇಳಿದಾಗ ಜನರು ಬೆಚ್ಚಿ ಬೀಳುವಂತಾಗಿದೆ.

Leave A Reply