ಬಿರುಮಲೆ ಬೆಟ್ಟದಲ್ಲಿ ಚೆಲ್ಲಾಟ ! ಮೈಸೂರಿನ ಯುವತಿಯರ ಜತೆ ಒಳತಡ್ಕದ ಯುವಕ ಪೊಲೀಸ್ ವಶಕ್ಕೆ

ಪುತ್ತೂರು : ಮದುವೆ ಕಾರ್ಯಕ್ರಮಕ್ಕೆಂದು ಪುತ್ತೂರಿಗೆ ಬಂದಿದ್ದ ಮೈಸೂರಿನ ಯುವತಿಯರ ಜತೆ ಪುತ್ತೂರಿನ ಮುಸ್ಲಿಂ ಯುವಕನೊಬ್ಬನ ಅಸಭ್ಯ ವರ್ತನೆ ಗಮನಿಸಿದ ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ ಘಟನೆ ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿ ನಡೆದಿದೆ.

ಪುತ್ತೂರಿನ ಪ್ರವಾಸಿದಾಮ ಬಿರುಮಲೆ ಗುಡ್ಡೆಯ ಪಾರ್ಕ್ ನಲ್ಲಿ ಕೃತ್ಯ ನಡೆದಿದ್ದೂ ನಾಲ್ವರು ಯುವಕರು ಹಾಗೂ 8 ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಮೈಸೂರಿನ ಯುವತಿಯರಿಗೆ ಇಲ್ಲಿನ ಕೆಲ ಯುವಕರ ಖದೀಮ‌ ಬುದ್ದಿಯ ಅರಿವಿರದೆ ಮದುವೆಗೆ ಬಂದವರು ಇಲ್ಲಿನ ಯುವಕರ ಜತೆ ಬಿರುಮಲೆ ಗೆ ಬಂದಿದ್ದರು.ಬೆಟ್ಟ ತಲುಪಿದ ಮೇಲೆ ಹರಟುತ್ತಿರುವಾಗ ಯುವಕರು ತಮ್ಮ ಚಾಳಿ ಪ್ರದರ್ಶಿಸಿದ್ದಾರೆ. ವಿಷಯ ಅರಿತ ಹಿಂದುಸಂಘಟನೆಗಳ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪುತ್ತೂರು ಒಳತ್ತಡ್ಕದ ಉಮ್ಮರ್ ಹಸಿನ್ ಎಂಬಾತನ ಮನೆಗೆ ಮೈಸೂರು ಮೂಲದ ಈ ಎಂಟು ಯುವತಿಯರು ಮದುವೆ ಪ್ರಯುಕ್ತ ಆಗಮಿಸಿದ್ದರು ಎನ್ನಲಾಗಿದೆ. ಆದರೆ ನಿಜಕ್ಕೂ ಮದುವೆ ಇತ್ತು ಎಂಬುದು ಇನ್ನೂ ಖಚಿತವಾಗಿ ಬೇಕಾಗಿದೆ. ಅವರನ್ನು ಇನ್ನೋವ ಕಾರಿನಲ್ಲಿ ಬಿರುಮಲೆ ಗುಡ್ಡೆಗೆ ಕರೆದುಕೊಂಡು ಬಂದಿದ್ದ ಎನ್ನಲಾಗಿದೆ.

ಅಲ್ಲಿಗೆ ಕೇರಳ ನೊಂದಣಿ ಯ ಕಾರಿನಲ್ಲಿ ಮತ್ತೆ ನಾಲ್ಕು ಯುವಕರು ಬಂದು ಉಮ್ಮರ್ ಹಸೀನ್ ಜೊತೆ ಸೇರಿಕೊಂಡು ಯುವತಿಯರ ಜೊತೆ ಅಸಭ್ಯವಾಗಿ ವರ್ತಿಸುತಿದ್ದರು ಎನ್ನಲಾಗಿದೆ.

ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು , ಠಾಣೆ ಮುಂಭಾಗ ಎರಡು ಕೋಮಿನ ಯುವಕರು ಸೇರಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿತ್ತು.

ರಾತ್ರಿಯ ಹೊತ್ತಲ್ಲಿ ಹುಡುಗಿಯರನ್ನು ಕರೆದುಕೊಂಡು ಬಿರುಮಲೆ ಗುಡ್ಡದಲ್ಲಿ ಮಾಡುವ ಕೆಲಸವಾದರೂ ಏನು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

error: Content is protected !!
Scroll to Top
%d bloggers like this: