ನೇತ್ರಾವದಿ ಸೇತುವೆ ಬಳಿ ಕಾರು ನಿಲ್ಲಿಸಿ ಅಪ್ಪ ಮಗ ನಾಪತ್ತೆ! ನದಿಗೆ ಜಿಗಿದಿರುವ ಶಂಕೆ

ಮಂಗಳೂರು: ತಂದೆ ಮತ್ತು ಆರು ವರ್ಷದ ಮಗ ರಾಷ್ಟ್ರೀಯ ಹೆದ್ದಾರಿ 66 ರ ನೇತ್ರಾವತಿ ಸೇತುವೆ ಬಳಿ ಫೆ.16ರ ಬೆಳಗ್ಗಿನ ಜಾವ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ನಾಪತ್ತೆಯಾಗಿರುವವರನ್ನು ಗೋಪಾಲಕೃಷ್ಣ ರೈ(45) ಮತ್ತು ನಮೀಶ್ ರೈ(6) ಎಂದು ಗುರುತಿಸಲಾಗಿದ್ದು, ಇವರು ಬಂಟ್ವಾಳ ಬಾಳ್ತಿಲ ನಿವಾಸಿಗಳೆಂದು ಹೇಳಲಾಗಿದೆ.

ಸದ್ಯ ಮುಂಬೈಯಲ್ಲಿ ನೆಲೆಸಿರುವ ಗೋಪಾಲಕೃಷ್ಣ ರೈ ಕೊಣಾಜೆಯ ಪಾವೂರಿನಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ನಡೆಯುವ ನೇಮೋತ್ಸವಕ್ಕಾಗಿ ಎರಡು ದಿನಗಳ ಹಿಂದೆ ಪತ್ನಿ, ಮಗನ ಜೊತೆ ಆಗಮಿಸಿದ್ದರೆನ್ನಲಾಗಿದೆ. ಆದರೆ ಕಳೆದ ರಾತ್ರಿ 2:30 ಗಂಟೆ ಸುಮಾರಿಗೆ ಗೋಪಾಲಕೃಷ್ಣ ರೈ ಪುತ್ರ ನಮೀಶ್ ಜೊತೆ ಕಾರಿನಲ್ಲಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ.

ಬೆಳಗ್ಗಿನ ಜಾವ ಅವರ ಕಾರು ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಪತ್ತೆಯಾಗಿದೆ. ಮಹಾರಾಷ್ಟ್ರ ನೋಂದಣಿಯ ಈ ಕಾರಿನಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಇವರಿಬ್ಬರು ನೇತ್ರಾವತಿ ನದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು, ಹುಡುಕಾಟ ಮುಂದುವರಿದಿದೆ.

ಕಂಬಳ ಕಣದ ಓಟದ ವೀರ ಶ್ರೀನಿವಾಸಗೌಡ । ದೆಹಲಿ ತಲುಪಿದ ಕಂಬಳದ ಕಂಪು !

0 thoughts on “ನೇತ್ರಾವದಿ ಸೇತುವೆ ಬಳಿ ಕಾರು ನಿಲ್ಲಿಸಿ ಅಪ್ಪ ಮಗ ನಾಪತ್ತೆ! ನದಿಗೆ ಜಿಗಿದಿರುವ ಶಂಕೆ”

  1. Pingback: ಕಂಬಳ ಕಣದ ಓಟದ ವೀರ ಶ್ರೀನಿವಾಸಗೌಡ । ದೆಹಲಿ ತಲುಪಿದ ಕಂಬಳದ ಕಂಪು !

  2. Pingback: ಕುದ್ಮಾರು ಅತ್ಯಾಚಾರ ಯತ್ನ ಪ್ರಕರಣ | ಪೊಲೀಸರ ಸಕಾಲಿಕ ಕಾರ್ಯಕ್ಕೆ ಶ್ಲಾಘನೆ - ಹೊಸ ಕನ್ನಡ

Leave a Reply

error: Content is protected !!
Scroll to Top
%d bloggers like this: