ಬ್ರೇಕಿಂಗ್ ನ್ಯೂಸ್ । ಕಡಬದ ಪೇರಡ್ಕದ ಬಳಿ ಮಗುಚಿ ಬಿದ್ದ ತುಂಬಿದ ಖಾಸಗಿ ಬಸ್ಸು

ಕಡಬ : ಇಲ್ಲಿನ ಪೇರಡ್ಕದ ಪೆಟ್ರೋಲ್ ಪಂಪ್ ನ ಬಳಿ ಬೆಳ್ಳಂಬೆಳಿಗ್ಗೆ ಬಸ್ಸು ಅಪಘಾತವಾಗಿದೆ.
ಬೆಂಗಳೂರಿನಿಂದ ಬಂದ ಬಸ್ಸು ಸುಬ್ರಮಣ್ಯದಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿತ್ತು.


Ad Widget

Ad Widget

Ad Widget

Ad Widget
Ad Widget

Ad Widget

Ad Widget

ಆ ಸಂದರ್ಭದಲ್ಲಿ ಬೆಳಿಗ್ಗೆ 6.50 ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಚರಂಡಿಯ ಕಡೆ ಸರಿದಿದೆ. ಆನಂತರ ಅಡ್ಡಕ್ಕೆ ಬಿದ್ದುಬಿಟ್ಟಿದೆ.


Ad Widget

ಘಟನೆಯಲ್ಲಿ ಹಲವರಿಗೆ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಪಘಾತಗೊಂಡ ಬಸ್ಸು ಸುಬ್ರಮಣ್ಯ ಟೂರ್ಸ್ ಅಂಡ್ ಟ್ರಾವೆಲ್ಸ್ ಗೆ ಸೇರಿದುದಾಗಿದೆ.

ಕೆಲವು ಖಾಸಗಿ ಬಸ್ಸಿನವರು ಬೆಂಗಳೂರು ಮತ್ತು ಬೇರೆ ಕೆಲವು ಊರುಗಳಿಂದ ತಡವಾಗಿ ಹೊರತು ಆ ನಂತರ ನಿಗದಿತ ದೂರವನ್ನು ತಲುಪಲು ಜಾಸ್ತಿ ವೇಗದಿಂದ ಚಲಿಸುತ್ತವೆ. ಅಪಘಾತಕ್ಕೆ ವೇಗದ ಚಾಲನೆಯೇ ಕಾರಣ ಎನ್ನಲಾಗುತ್ತಿದೆ.

error: Content is protected !!
Scroll to Top
%d bloggers like this: