ಕಂಬಳ ಕಣದ ಓಟದ ವೀರ ಶ್ರೀನಿವಾಸಗೌಡ । ದೆಹಲಿ ತಲುಪಿದ ಕಂಬಳದ ಕಂಪು !

ತುಳುವರ ಜಾನಪದ ಕ್ರೀಡೆ ಕಂಬಳ ಕಣದ ಓಟದ ವೀರ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ಕೀರ್ತಿ ದೇಶದ ರಾಜಧಾನಿ ದೆಹಲಿಯನ್ನೂ ಮುಟ್ಟಿದೆ.

ಕೇಂದ್ರ ಯುವಜನ ಮತ್ತು ಕ್ರೀಡಾ ರಾಜ್ಯ ಸಚಿವ ರಾದ ಕಿರಣ್ ರಿಜಿಜು ಅವರು ಟ್ವೀಟ್ ಮಾಡಿ ಶ್ರೀನಿವಾಸ ಗೌಡರನ್ನು ಹೆಚ್ಚಿನ ತರಬೇತಿಗಾಗಿ ದೆಹಲಿಗೆ ಆಹ್ವಾನಿಸಿದ್ದಾರೆ. ಅಲ್ಲದೆ ಅದಕ್ಕೆ ಬೇಕಾದರೂ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಮಾಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

ಶ್ರೀನಿವಾಸ ಗೌಡರಿಗೆ SAI ( ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ) ನಲ್ಲಿ ವಿಶೇಷ ತರಬೇತಿಯನ್ನು ನೀಡುವ ಇರಾದೆ ಕೇಂದ್ರ ಸಚಿವರದ್ದು.

ಇತ್ತೀಚೆಗೆ ಫೆಬ್ರವರಿ 1 ರಂದು ಮಂಗಳೂರಿನ ಸಮೀಪದ ಐಕಳದಲ್ಲಿ ನಡೆದ ಕಂಬಳ ಕ್ರೀಡೆಯಲ್ಲಿ 142.5 ಮೀಟರಿನ ಕಂಬಳ ಕರೆಯಲ್ಲಿ ಹೊಡಿದ ಶ್ರೀನಿವಾಸಗೌಡರು ಮತ್ತು ಕೇವಲ 13.62 ಸೆಕೆಂಡುಗಳಲ್ಲಿ ಹಾಕಿದ್ದರು. ಈ ವೇಗವು ಇಲ್ಲಿಯ ತನಕದ ಅತ್ಯಂತ ವೇಗದ ಆಟವಾಗಿದ್ದು ಕೂಟ ದಾಖಲೆಯನ್ನು ನಿರ್ಮಿಸಿದೆ.

ಕಲ್ಲಿನಿಂದ ಕಡೆದ ಮೈಕಟ್ಟಿನ ಶ್ರೀನಿವಾಸಗೌಡರ ಓಟವನ್ನು ಜಮೈಕಾ ಓಟದ ಪ್ರತಿಭೆ ಉಸೇನ್ ಬೋಲ್ಟ್ ಗೆ, ಗೌಡರ ಕಂಬಳದ ಓಟವನ್ನು ನೋಡಿದವರು ಹೋಲಿಸುತ್ತಿದ್ದಾರೆ.

ಇಂಗ್ಲಿಷ್ ಪತ್ರಿಕೆಗಳು ಶ್ರೀನಿವಾಸ್ ಗೌಡರ ಬಗ್ಗೆ ಬರೆದು, ಉಸೇನ್ ಬೋಲ್ಟ್ 100 ಮೀಟರು 9.58 ಸೆಕಂಡುಗಳಲ್ಲಿ ಓದಿದ್ದರೆ. ಈಗ ಶ್ರೀನಿವಾಸ ಗೌಡರು ಓದಿದ 142.5 ಮೀಟರಿನ ವೇಗವನ್ನು ಲೆಕ್ಕಹಾಕಿದರೆ ಅದು 9.55 ಆಗುತ್ತದೆ. ಅದು ಉಸೇನ್ ಬೋಲ್ಟ್ ನ ವೇಗಕ್ಕಿಂತಲೂ ಅಧಿಕವಾದುದು ಎಂದು ಬರೆದಿದ್ದಾರೆ.

ಉಸೈನ್ ಬೋಲ್ಟ್ ನ ವೇಗವೇನೂ ಸಾಮಾನ್ಯ ವೇಗವಲ್ಲ. ಅದನ್ನು ಸುಲಭವಾಗಿ ಹಿಂತಳ್ಳುವುದು ಕಷ್ಟ.
ಅಲ್ಲದೆ ಈ ಎರಡೂ ಓಟದ ವೇಗದ ಹೋಲಿಕೆಯಿಂದ ಶ್ರೀನಿವಾಸಗೌಡರು ಉಸೇನ್ ಬೋಲ್ಟ್ ನಷ್ಟು ಓಡಬಲ್ಲರು ಎಂದು ಈಗಲೇ ಹೇಳಕಾಗುವುದಿಲ್ಲ. ಹಾಗೆ ನೋಡಿದರೆ ಕಂಬಳ ನೀರಿನಲ್ಲಿ ಓಡುವ ಓಟ. ಜತೆಗೆ ಮರಳು ಕೂಡ ಇರುತ್ತದೆ. ಆದುದರಿಂದ ಟ್ರ್ಯಾಕ್ನಲ್ಲಿ ಓಡುವುದಕ್ಕಿಂತ ಕಡಿಮೆ ವೇಗದಲ್ಲಿ ಮಾತ್ರ ಓಡಬಹುದು. ಆದರೂ ಶ್ರೀನಿವಾಸಗೌಡರು ವೇಗವಾಗಿ ಓಡಿದ್ದಾರೆಂದರೆ ಅದಕ್ಕೆ ಇನ್ನೊಂದು ಪ್ರಬಲ ಕಾರಣವಿದೆ : ಅದು ಕೋಣಗಳು !

ಕೋಣಗಳು ಮನುಷ್ಯನಿಗಿಂತ ವೇಗವಾಗಿ ನಾಲ್ಕು ಕಾಲುಗಳಲ್ಲಿ ನೆಗೆದು ಓಡುತ್ತವೆ. ಮನುಷ್ಯ ಎರಡು ಸ್ಟೆಪ್ ಇಡುವಾಗ ಕೋಣಗಳು ಆ ದೂರವನ್ನು ಒಂದೇ ನೆಗೆತದಲ್ಲಿ ಕವರ್ ಮಾಡುತ್ತವೆ. ಅಲ್ಲದೆ, ಕೋಣಗಳ ಜತೆ ಓಡುವ ವ್ಯಕ್ತಿ ತನ್ನ ಕೈಯಲ್ಲಿ ಹಗ್ಗ ಹಿಡಿದುಕೊಂಡು ಓಡುತ್ತಾನೆ. ಹಗ್ಗ ಟೈಟ್ ಆಗಿ ಹಿಡಿದಷ್ಟು ಕೋಣಗಳು ಮುನ್ನುಗ್ಗುತ್ತವೆ. ಆಗ ಕೋಣದ ಹಿಂದೆ ಓಡುವಾತನಿಗೂ ಹಗ್ಗದ ಸಪೋರ್ಟ್ ಸಿಗುತ್ತದೆ. ಆತನ ಓಟದ ಸ್ಪೀಡು ಅನಿವಾರ್ಯವಾಗಿ ಜಾಸ್ತಿಯಾಗುತ್ತದೆ.

ಅಲ್ಲದೆ, ಓಟದ ವೇಗ ಲೆಕ್ಕಾಚಾರ ಮಾಡುವ ಇನ್ಸ್ಟ್ರುಮೆಂಟ್ ಕ್ಯಾಲಿಬ್ರೇಟ್ ( ಪರ್ಫಾರ್ಮನ್ಸ್ ಪರಿಶೀಲನೆ ) ಆಗಿದ್ಯಾ ಇಲ್ಲವ ಎಂದು ನೋಡಬೇಕಾಗುತ್ತದೆ. ಹಾಗೊಂದು ವೇಳೆ ಅದರಲ್ಲೇ ತೊಂದರೆಯಿದ್ದರೆ ತಪ್ಪು ಲೆಕ್ಕ ಬೀಳುವ ಸಂಭವ ಹೆಚ್ಚು.

ಇಂಗ್ಲಿಷ್ ಪತ್ರಿಕೆಯ ವರದಿ ನೋಡಿ ಮಹೀಂದ್ರಾ ಕಂಪನಿಯ ಆನಂದ್ ಮಹೀಂದ್ರಾ ಟ್ವೀಟ್ ಮಾಡಿ ಶ್ರೀನಿವಾಸಗೌಡರ ವೇಗ ಮತ್ತು ಕಟ್ಟುಮಸ್ತು ದೇಹವನ್ನು ಹೊಗಳಿದ್ದರು. ಆನಂತರ ಕ್ರೀಡಾಮಂತ್ರಿಗಳು ಶ್ರೀನಿವಾಸಗೌಡರನ್ನು ದೆಹಲಿಗೆ ಹೆಚ್ಚಿನ ತರಬೇತಿಗಾಗಿ ಕರೆದಿದ್ದಾರೆ.

ಒಟ್ಟಾರೆ ಹಳ್ಳಿ ಕ್ರೀಡೆಯ ಜತೆಗೆ ಗ್ರಾಮೀಣ ಪ್ರತಿಭೆಯೊಂದು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದುದು ನಮ್ಮ ಹೆಮ್ಮೆ. ದಿಲ್ಲಿ ಪ್ರಯಾಣಕ್ಕೆ ಗೌಡರು ಕೇಸರಿ ಮುಂಡಾಸು ಹಾಕಿಕೊಂಡು ರೆಡಿಯಾಗಿದ್ದಾರೆ. ಶ್ರೀನಿವಾಸಗೌಡರು ಸಾಧಿಸಿ ಬರಲೆಂದು ತುಳುವರೆಲ್ಲರ ಹಾರೈಕೆ.

ನೇತ್ರಾವದಿ ಸೇತುವೆ ಬಳಿ ಕಾರು ನಿಲ್ಲಿಸಿ ಅಪ್ಪ ಮಗ ನಾಪತ್ತೆ । ನದಿಗೆ ಜಿಗಿದಿರುವ ಶಂಕೆ

0 thoughts on “ಕಂಬಳ ಕಣದ ಓಟದ ವೀರ ಶ್ರೀನಿವಾಸಗೌಡ । ದೆಹಲಿ ತಲುಪಿದ ಕಂಬಳದ ಕಂಪು !”

  1. Pingback: ನೇತ್ರಾವದಿ ಸೇತುವೆ ಬಳಿ ಕಾರು ನಿಲ್ಲಿಸಿ ಅಪ್ಪ ಮಗ ನಾಪತ್ತೆ! ನದಿಗೆ ಜಿಗಿದಿರುವ ಶಂಕೆ - ಹೊಸ ಕನ್ನಡ

error: Content is protected !!
Scroll to Top
%d bloggers like this: