ಕುದ್ಮಾರು ಅತ್ಯಾಚಾರ ಯತ್ನ ಪ್ರಕರಣ | ಪೊಲೀಸರ ಸಕಾಲಿಕ ಕಾರ್ಯಕ್ಕೆ ಶ್ಲಾಘನೆ

ಕುದ್ಮಾರು ಪ್ರಕರಣ : ಪೊಲೀಸರ ಸಕಾಲಿಕ ಕಾರ್ಯಕ್ಕೆ ಶ್ಲಾಘನೆ

ಅತ್ಯಾಚಾರ ಯತ್ನದ ಆರೋಪಿ ಅಬ್ದುಲ್ಲಾ

ಕಡಬ : 5ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಫೆ.14ರಂದು ನಡೆದಿದ್ದು,ಪ್ರಕರಣಕ್ಕೆ ಸಂಭಂಧಿಸಿದಂತೆ ಕುದ್ಮಾರು ರಸ್ತೆಬದಿಯಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ಲಾ ಎಂಬಾತನನ್ನು ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಆರೋಪಿ‌ ಅಬ್ದುಲ್ಲಾ ಕುದ್ಮಾರಿನಲ್ಲಿ ಹೊಂದಿದ್ದ ಅಂಗಡಿಯನ್ನು ಸುಟ್ಟು ಹಾಕಿರುವ ಪ್ರಕರಣದಲ್ಲಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಈ ಎರಡೂ ಪ್ರಕರಣಗಳಲ್ಲಿ ಪೊಲೀಸರ ಸಕಾಲಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಅತ್ಯಾಚಾರ ಯತ್ನದ ಆರೋಪಿ ಅಬ್ದುಲ್ಲಾಗೆ 2 ಮದುವೆಯಾಗಿ 6 ಮಕ್ಕಳಿರುವ ಈತ 5ನೇ ತರಗತಿಗೆ ಹೋಗುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದು ,ಬಾಲಕಿ ನೀಡಿರುವ ದೂರಿನಂತೆ ಪೊಲೀಸರು ಅಬ್ದುಲ್ಲಾ ಎಂಬಾತನನ್ನು ಫೆ.14ರಂದು ಸಂಜೆ ಬಂಧಿಸಿದ್ದರು. ಈ ನಡುವೆ ಫೆ.14 ರಂದು ರಾತ್ರಿ ಕುದ್ಮಾರು ರಸ್ತೆ ಬದಿಯಲ್ಲಿದ್ದ ಆರೋಪಿ ಅಬ್ದುಲ್ಲಾ ನ ಅಂಗಡಿಗೆ ಬೆಂಕಿಹಚ್ಚಿದರಿಂದ ಅಂಗಡಿ ಸಂಪೂರ್ಣ ಭಸ್ಮವಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಡಿವೈಎಸ್ಪಿ ದಿನಕರ್ ಶೆಟ್ಟಿ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಅವರ ನೇತೃತ್ವದಲ್ಲಿ ಬೆಳ್ಳಾರೆ ಠಾಣಾ ಪ್ರಭಾರ ಎಸೈ ಆಂಜನೇಯ ರೆಡ್ಡಿ ಹಾಗೂ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ ,ಆರೋಪಿಗಳಾದ ಬರೆಪ್ಪಾಡಿಯ ಪ್ರವೀಣ್, ಪ್ರದೀಪ್, ಸುಧೀರ್ ಎಂಬವರನ್ನು ಬಂಧಿಸಿದ್ದರು.

ಕ್ಷಿಪ್ರ ಕಾರ್ಯಾಚರಣೆಗೆ ಶ್ಲಾಘನೆ

ಅತ್ಯಾಚಾರ ಯತ್ನ ಪ್ರಕರಣದ ಆರೋಪಿ ಅಬ್ದುಲ್ಲಾ ಹಾಗೂ ಆತನ ಅಂಗಡಿಗೆ ಬೆಂಕಿ ಹಚ್ಚಿದ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿರುವ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಆರೋಪಿಗಳನ್ನು ಶೀಘ್ರವಾಗಿ ಪತ್ತೆಹಚ್ಚಿ ಬಂಧಿಸಲಾಗಿದೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರೂ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಸ್ಥಳದಲ್ಲಿ ಬೆಳ್ಳಾರೆ ಠಾಣೆಯ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ನೇತ್ರಾವದಿ ಸೇತುವೆ ಬಳಿ ಕಾರು ನಿಲ್ಲಿಸಿ ಅಪ್ಪ ಮಗ ನಾಪತ್ತೆ । ನದಿಗೆ ಜಿಗಿದಿರುವ ಶಂಕೆ

Leave A Reply

Your email address will not be published.