ಫರಂಗಿಪೇಟೆಯಲ್ಲಿ ಬಸ್ಸಿಗೆ ಕಲ್ಲು | ಎಂದಿನಂತೆ ಸ್ಕೂಲು, ಮಾಮೂಲಿನಂತೆ ಬಸ್ಸು ಸಂಚಾರ

ದಕ್ಷಿಣಕನ್ನಡದ ಫರಂಗಿಪೇಟೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ ನಡೆದಿದೆ. ಮುಸ್ಲಿಂ ಬಾಹುಳ್ಯವಿರುವ ಈ ಪ್ರದೇಶದಲ್ಲಿ ಪದೇಪದೇ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಸರಕಾರಿ ಆಸ್ತಿ ಮತ್ತು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಯುತ್ತಾ ಬರುತ್ತಿದೆ. ಕಲ್ಲು ತೂರಾಟದಿಂದ ಹಲವು ಬಸ್ಸುಗಳಿಗೆ ಹಾನಿಯಾಗಿದೆ.

ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಪರಂಗಿಪೇಟೆಯಲ್ಲಿ ಜಮೆಯಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.

ಇವತ್ತು ಕರ್ನಾಟಕ ಬಂದ್ ಹಲವು ಸಂಘಟನೆಗಳು ಡಾಕ್ಟರ್ ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರುವಂತೆ ಬಂದು ಬಂದ್ ಗೆ ಕರೆ ನೀಡಿದ್ದವು. ಬಂದ್ ಗೆ ಜಯಕರ್ನಾಟಕ, ಕರ್ನಾಟಕ ಸೇನೆ ಒಕ್ಕೂಟ, ಕರವೇ ಸ್ವಾಭಿಮಾನಿ ಬಣ, ದಲಿತ ಪರ ಸಂಘಟನೆಗಳು, ಅಂಬೇಡ್ಕರ್ ಸೇನೆ ಮುಂತಾದ ಸಂಘಟನೆಗಳು ಬೆಂಬಲ ಘೋಷಿಸಿವೆ. ಆದರೆ ಕರವೇ ಪ್ರವೀಣ್ ಶೆಟ್ಟಿ ಬಣ ಮತ್ತು ಕೆಲವು ಸಂಘಟನೆಗಳು ಬೆಂಬಲ ಘೋಷಿಸಿಲ್ಲ.

ಬೆಂಗಳೂರಿನಲ್ಲಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಡ್ರಾಪ್ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ರಾಜ್ಯಾದ್ಯಂತ ಎಲ್ಲಾ ಬಸ್ಸುಗಳು ಓಡಾಡುತ್ತವೆ. ಆದರೆ ಓಡಾಡುತ್ತಿರುವ ಜನರು ವಿರಳವಾಗಿದ್ದಾರೆ.

ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ದೊಡ್ಡಮಟ್ಟದ ಪ್ರತಿಭಟನೆ ಯಾಗುತ್ತಿದೆ. ಹಾಸನದಲ್ಲೂ ಸ್ವಲ್ಪಮಟ್ಟಿನ ಪ್ರತಿಭಟನೆಯ ಬಿಸಿ ಕಾಣುತ್ತಿದೆ. ಎಂದೂ ಜನರಿಂದ ಮಿಜಿಮಿಜಿ ಗುಡುತ್ತಿರುವ ಬೆಂಗಳೂರಿನ ಮೆಜೆಸ್ಟಿಕ್ ಜನರಿಲ್ಲದೆ ಬಿಕೋ ಅನ್ನುತ್ತಿದೆ.

ಹೋಟೆಲ್ ಮಾಲೀಕರ ಸಂಘ ಬಂದ್ ಗೆ ಬೆಂಬಲ ಘೋಷಿಸಿಲ್ಲ. ಮೆಜೆಸ್ಟಿಕ್ ನಲ್ಲಿ ಮುಂಜಾನೆಯಿಂದಲೇ ಹೋಟೆಲ್ ಗಳು ತೆರೆದಿದ್ದವು. ಆದರೆ ಒಂದಿಷ್ಟು ಪ್ರತಿಭಟನಾಕಾರರು ಹೋಟೆಲ್ಗಳನ್ನು ಒತ್ತಾಯಪೂರ್ವಕವಾಗಿ ಮುಚ್ಚಿಸಲು ಪ್ರಯತ್ನಿಸಿದ್ದು ಕಂಡು ಬಂತು. ಆಗ ಪೊಲೀಸರು ಮಧ್ಯೆ ಪ್ರಯತ್ನಿಸಿ ಪ್ರತಿಭಟನಾ ನಿರತರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇನ್ನೊಂದೆಡೆ ಕೆಲವು ಕನ್ನಡ ಸಂಘಟನೆಗಳು ಇವತ್ತು ಬಂದ್ ಬೇಡ ಎಂದು ಪ್ರತಿ- ಪ್ರತಿಭಟನೆಗೆ ಇಳಿದಿವೆ. ಮೆಜೆಸ್ಟಿಕ್ ನಲ್ಲಿ ಈ ದೃಶ್ಯ ಕಂಡು ಬರುತ್ತಿದೆ.

ಈ ಮಧ್ಯೆಪ್ರತಿಭಟನೆ ಕೈ ಬಿಟ್ಟು ಮಾತುಕತೆಗೆ ಬರುವಂತೆ ಮುಖ್ಯಮಂತ್ರಿ ಬಿಎಸ್ ವೈ ಬಂದ್ ಗೆ ನೀಡಿದವರನ್ನು ಆಹ್ವಾನಿಸಿದ್ದಾರೆ.

ಈ ಅಮ್ಮನ ಕಣ್ಣೀರ ಕೂಗು ನಿಮ್ಮ ಕರುಣಾರ್ದ್ರ ಹೃದಯಕ್ಕೆ ತಟ್ಟಲಿ । ಜೈ ಭಜರಂಗಿ !

Leave A Reply

Your email address will not be published.