ಕಿಕ್ಕೇರಿಸಲು ತೆರೆಯ ಮೇಲೆ ಬರುತ್ತಿದೆ ‘ ಓಲ್ಡ್ ಮಾಂಕ್ ‘ | ವರ್ಷಾಂತ್ಯದೊಳಗೆ ತೆರೆಗೆ

ಬೆಳ್ ಬೆಳಿಗ್ಗೆಯೇ ‘ಓಲ್ಡ್ ಮಾಂಕ್’ ಕೈಗೆ ಸಿಕ್ಕಿದೆ. ‘ ಓಲ್ಡ್ ಮಾಂಕ್ ‘ ಅ೦ದರೆ ಏನೆಂದು ಪರಿಣಿತರಿಗೆ, ಫೀಲ್ಡ್ ನಲ್ಲಿ ಪಳಗಿದ, ಮಾಗಿದ ಮಂದಿಗೆ ಚೆನ್ನಾಗಿ ಗೊತ್ತು.
ಕಡಿಮೆ ಬೆಲೆಯ 7 ವರ್ಷಕ್ಕಿಂತಲೂ ಅಧಿಕ ಸಮಯ ಏಜಿಂಗ್ ಪ್ರೋಸೆಸ್ ಮಾಡಿದ ಕಡುಕಪ್ಪು ಬಣ್ಣದ, ವಿಶಿಷ್ಟ ಬಾಟಲಿನಲ್ಲಿ ತುಂಬಿದ, ಈ ಎವರ್ ಗ್ರೀನ್ ರಮ್ ನ ಗಮ್ಮತ್ತೇ ಬೇರೆ.

ಇಂತಹ ಪವರ್ಫುಲ್ ಬ್ರಾಂಡ್ ಒಂದರ ಹೆಸರನ್ನಿಟ್ಟುಕೊಂಡು ಚಿತ್ರತಂಡ ಓಲ್ಡ್ ಮಾಂಕ್ ಎಂಬ ಚಿತ್ರ ಕೈಗೆತ್ತಿಕೊಂಡಿದೆ. ಚಿತ್ರಕ್ಕೆ ಎಂಜಿ ಶ್ರೀನಿವಾಸ್ ನಿರ್ದೇಶನವಿದೆ. ಪ್ರದೀಪ್ ಶರ್ಮಾ ನಿರ್ಮಾಣ ಮಾಡುತ್ತಿರುವ ಓಲ್ಡ್ ಮಾಂಕ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

ಚಿತ್ರದ ನಾಯಕನಾಗಿ ಸ್ವತಹ ಎಂಜಿ ಶ್ರೀನಿವಾಸ್ ನಟಿಸಲಿದ್ದಾರೆ ನಾಯಕಿಯಾಗಿ ಅದಿತಿ ಪ್ರಭುದೇವ ಕಿಕ್ಕೇರಿಸಲಿದ್ದಾರೆ. ಕಾಮಿಡಿ ಪ್ರಧಾನ ಚಿತ್ರವಾಗಿರುವ ಓಲ್ಡ್ ಮಾಂಕ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಈಗಾಗಲೇ ಪ್ರಕಟಿಸಿದ್ದು, ಚಿತ್ರವು 11 ಡಿಸೆಂಬರ್ 2020 ರಲ್ಲಿ ತೆರೆ ಮೇಲೆ ಮೂಡಿಬರಲಿದೆ.

ಹೇಳಿಕೇಳಿ ಇದು ಓಲ್ಡ್ ಮಾಂಕ್ ! ನವರಸಗಳಲ್ಲಿ ಕೆಲವನ್ನಾದರೂ ಅರೆದು ರುಬ್ಬಿ ಕಿಕ್ಕೇರಿಸುವ ಅನಿವಾರ್ಯತೆ ಚಿತ್ರತಂಡಕ್ಕಿದೆ.

Leave A Reply