ಸರಕಾರಿ‌ ಬಸ್‌ನಲ್ಲಿ ಗಾಂಜಾ ಸಾಗಾಟ ಪತ್ತೆ, ಆರೋಪಿ ಪರಾರಿ,22 ಕೆಜಿ ಗಾಂಜಾ ವಶ

ಕಾಸರಗೋಡು : ಬಸ್‌ನಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಅಬಕಾರಿ ದಳದ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಕರ್ನಾಟಕ ಕೆಎಸ್ಸಾರ್ಟಿಸಿ ಬಸ್‌ನ ಸೀಟಿನಡಿಯಲ್ಲಿ ಸುಮಾರು 22 ಕೆಜಿ ಗಾಂಜಾವನ್ನು ಬಚ್ಚಿಟ್ಟು ಸಾಗಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಮಂಜೇಶ್ವರ ಚೆಕ್‌ಪೋಸ್ಟ್ ಸಮೀಪ ಬಸ್ಸನ್ನು ತಡೆದು ತಪಾಸಣೆ ನಡೆಸಿದಾಗ ಓರ್ವ ವ್ಯಕ್ತಿಯು ಹಿಂಬಾಗಿಲಿನ ಮೂಲಕ ಇಳಿದು ಪರಾರಿಯಾಗಿದ್ದಾನೆ. ಆತನನ್ನು ಅಧಿಕಾರಿಗಳು ಬೆನ್ನಟ್ಟಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.

ಗಾಂಜಾ ಹೊಂದಿದ್ದ ಬ್ಯಾಗ್‌ನಲ್ಲಿ ಚೆಂಗಳದ ನಿವಾಸಿಯೊಬ್ಬನ ಆಧಾರ್ ಕಾರ್ಡ್ ದೊರೆತಿದ್ದು, ಆತನೇ ಗಾಂಜಾ ಸಾಗಾಟ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಅಬಕಾರಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಈ ಅಮ್ಮನ ಕಣ್ಣೀರ ಕೂಗು ನಿಮ್ಮ ಕರುಣಾರ್ದ್ರ ಹೃದಯಕ್ಕೆ ತಟ್ಟಲಿ । ಜೈ ಭಜರಂಗಿ !

Leave A Reply

Your email address will not be published.