ನಿಮ್ಮವಳಿಗೆ ಕೊಡಲು ಒಂದು ಸುಂದರ ಉಡುಗೊರೆ । ‘ಸಿರಿಗನ್ನಡ ಸವಿಜೇನು’ ಕವನ ಸಂಕಲನ

Share the Article

ಇದು ಒಟ್ಟು 46 ಜನ ಕವಿ-ಕವಯಿತ್ರಿಯರು ಸೇರಿಕೊಂಡು ಬಿಡಿಸಲು ಹೊರಟ ಚಿತ್ತಾರ. ಮುಖಪುಟ ನೋಡಿದರೆ ಖಂಡಿತಾ ಓದಬೇಕೆನಿಸುತ್ತಿದೆ : ಅಷ್ಟು ಮುದ್ದಾಗಿ ಮೂಡಿ ಬಂದಿದೆ ಕವನ ಸಂಕಲನದ ಮುಖ.

ಇವತ್ತು ಸಹಕಾರ ತತ್ವದಡಿಯಲ್ಲಿ ಹಾಲು ಉತ್ಪಾದನೆ-ಮಾರುಕಟ್ಟೆ, ಕೃಷ್ಯುತ್ಪನ್ನ ಮಾರುಕಟ್ಟೆ , ಬ್ಯಾಂಕಿಂಗ್ ಮುಂತಾದುವುಗಳು ನಡೆಯುತ್ತಿರುವಾಗ, ಸಾಹಿತ್ಯ ಕೃಷಿಯನ್ನೂ ಯಾಕೆ ತರಬಾರದು ಎಂದುಕೊಂಡು ಸಹಕಾರ ತತ್ವದಡಿ ಕವನ ಸಂಕಲನ ತಂದಿದ್ದಾರೆ ಆಯೋಜಕರು.

ಈ ಎಲ್ಲರೂ ಕವಿಗಳ ಹಿಂಡು ಸೇರಿ ಕೊಂಡು ಪ್ರಕಾಶನ ಕಾಣಿಸುತ್ತಿದ್ದಾರೆ ‘ ಸಿರಿಗನ್ನಡ ಸವಿಜೇನು ‘ ಕವನ ಸಂಕಲನ.

ಈ 46 ಜನರ ಜತೆ, 10 ಜನ ಆಹ್ವಾನಿತ ಕವಿಗಳು ಕೂಡ ತಮ್ಮತಮ್ಮ ಹೃದಯ ಗೀತೆ ಹಾಡಲಿದ್ದಾರೆ.

180 ರೂ ಮುಖಬೆಲೆಯ ಪುಸ್ತಕ, ಇವತ್ತೇ ಬುಕ್ ಮಾಡಿಕೊಂಡರೆ 130 ರೂ ಗಳಿಗೆ ನಿಮ್ಮ ಮನೆಬಾಗಿಲಿಗೆ ತಲುಪಿಸಿ ಹೋಗುತ್ತಾರೆ.

ಸಂಪಾದಕರು ಮಧುರ ಕಾನನ ಭಟ್ಟರು. ಅವರ ಹೆಸರಿನಲ್ಲೇ ಇದೆ ಮಧು. ಜತೆಗೆ ಕಾಡು ಕೂಡ. ಜೇನು ಸಿಹಿಯಾಗದೆ ಇರಲು ಹೇಗೆ ತಾನೇ ಸಾಧ್ಯ? ಕವನ ಸಂಕಲದ ಬಿಡುಗಡೆ, ಫೆಬ್ರವರಿ 9 ಕ್ಕೆ, ಪುತ್ತೂರಿನಲ್ಲಿ.

ಹೊಸಕನ್ನಡ ನೀವು ನಿರಂತರ ಓದುತ್ತಾ ಬನ್ನಿ. ನಾವು ‘ ಸಿರಿಗನ್ನಡ ಸವಿಜೇನು ‘ ಕವನ ಸಂಕಲನದ ಬಿಡುಗಡೆ ದಿನಾಂಕ ಮತ್ತು ಬಿಡುಗಡೆ ದಿನದ ವರದಿಯನ್ನುನಿಮಗೆ ನೀಡುತ್ತಾ ಬರುತ್ತೇವೆ.

ಪ್ರಕಾಶಕರ ಸಂಪರ್ಕಿಸಿ : 94829 98611

ನಮ್ಮ ಫೇಸ್ ಬುಕ್ ಪೇಜ್ : https://www.facebook.com/Hosakannada-100160538140392/?modal=admin_todo_tour

Leave A Reply

Your email address will not be published.