Home Breaking Entertainment News Kannada ಆಸ್ಕರ್‌ ರೇಸಿನಲ್ಲಿ ಕಾಂತಾರ : ನಿರ್ಮಾಪಕ ವಿಜಯ್‌ ಕಿರಗಂದೂರು ನೀಡಿದ್ರು ಬಿಗ್‌ ನ್ಯೂಸ್‌ | ಇಲ್ಲಿದೆ...

ಆಸ್ಕರ್‌ ರೇಸಿನಲ್ಲಿ ಕಾಂತಾರ : ನಿರ್ಮಾಪಕ ವಿಜಯ್‌ ಕಿರಗಂದೂರು ನೀಡಿದ್ರು ಬಿಗ್‌ ನ್ಯೂಸ್‌ | ಇಲ್ಲಿದೆ ಫುಲ್‌ ಡಿಟೇಲ್ಸ್‌

Hindu neighbor gifts plot of land

Hindu neighbour gifts land to Muslim journalist

ಕಾಂತಾರ ಸಿನೆಮಾ ಒಂದಲ್ಲ ಒಂದು ವಿಚಾರಕ್ಕೆ ದಿನಂಪ್ರತಿ ಸುದ್ದಿಯಲ್ಲಿ ಇರುತ್ತದೆ. ಯಶಸ್ಸಿನ ನಗೆ ಬೀರುತ್ತಿರುವ ಸಿನೆಮಾದ ಬಗ್ಗೆ ಹೊಸ ವಿಚಾರವೊಂದು ಹರಿದಾಡುತ್ತಿದೆ. ಹೌದು!!! ಆಸ್ಕರ್ ರೇಸ್ ಗೆ ಕಾಂತಾರ ಸಿನೆಮಾ ಎಂಟ್ರಿ ಕೊಡಲು ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ರಿಷಬ್ ಶೆಟ್ಟಿ ನಿರ್ದೇಶನದ ಚಿತ್ರ ಕಾಂತಾರ ಎಲ್ಲೆಡೆ ದಾಖಲೆ ನಿರ್ಮಿಸಿ ಗೆಲುವಿನ ನಾಗಾಲೋಟ ಬೀರಿ ಬೇರೆ ಭಾಷೆಗಳಲ್ಲಿ ಕೂಡ ಡಬ್ಬಿಂಗ್ ಆಗಿ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿದ್ದು ಮಾತ್ರವಲ್ಲ, ಬಾಕ್ಸ್ ಆಫೀಸಲ್ಲಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯುತ್ತಿರುವ ಸಿನಿಮಾ ಎಲ್ಲ ಹಿಟ್ ಸಿನಿಮಾಗಳ ದಾಖಲೆ ಪುಡಿ ಮಾಡಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಇಂದಿಗೂ ಕನ್ನಡದ ಕಾಂತಾರ ಅರ್ಭಟ ಕಮ್ಮಿ ಆಗಿಲ್ಲ.


ಕಾಂತಾರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ರಿಷಬ್ ಈ ಚಿತ್ರಕ್ಕಾಗಿ ನಾಲ್ಕು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. ಹಲವು ಆಫರ್​ಗಳು ರಿಷಬ್ ಅವರನ್ನು ಅರಸಿ ಬರುತ್ತಿವೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಸಿನಿಮಾ ದಿನಕ್ಕೊಂದು ದಾಖಲೆ ಸೃಷ್ಟಿಸುತ್ತಿದೆ. ಈ ಸಿನಿಮಾದ ಬಗ್ಗೆ ದಿನಕ್ಕೊಂದು ಹೊಸ ವಿಚಾರ ಹುಟ್ಟಿಕೊಳ್ಳುತ್ತಿದೆ. ಈ ಸಿನಿಮಾ ನೋಡಿದ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದ ಭದ್ರ ಸ್ಥಾನ ಪಡೆದಿದ್ದು , ಈ ಸಿನೆಮಾ ಅನೇಕ ಸೂಕ್ಷ್ಮ ವಿಚಾರಗಳ ಸುತ್ತ ಕಥೆ ಹೆಣೆದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ಈ ಸಿನಿಮಾ ನೋಡಿ ಮಂತ್ರಮುಗ್ಧರಾಗಿದ್ದಾರೆ. ಥಿಯೇಟರ್ ನಲ್ಲಿ ದೂಳೆಬ್ಬಿಸಿದ್ದು ಮಾತ್ರವಲ್ಲ ಒಟಿಟಿಗೆ ಕಾಲಿಟ್ಟ ಬಳಿಕ ಕೂಡ ಚಿತ್ರವನ್ನು ಪ್ರೇಕ್ಷಕರು ಹಲವು ಬಾರಿ ವೀಕ್ಷಣೆ ಮಾಡಿದ್ದಾರೆ.

ಈಗ ರಿಷಬ್ ಶೆಟ್ಟಿ ಅವರ ‘ಕಾಂತಾರ’ (Kantara Movie) ಆಸ್ಕರ್​ ರೇಸ್​ಗೆ ಇಳಿಯಲು ಸಜ್ಜಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್​​ನ ವಿಜಯ್ ಕಿರಗಂದೂರು ಅವರು ಮಾಹಿತಿ ನೀಡಿದ್ದಾರೆ. ‘ಆರ್​ಆರ್​ಆರ್​’ ಮಾದರಿಯಲ್ಲೇ ‘ಕಾಂತಾರ’ ಕೂಡ ಆಸ್ಕರ್​ ರೇಸ್​ಗೆ ತೆರಳಲಿದೆ. ಇಲ್ಲು ಕೂಡ ಮತ್ತೊಂದು ಇತಿಹಾಸ ಸೃಷ್ಟಿ ಮಾಡಲಿದ್ದು, ಕನ್ನಡದ ಸಿನಿಮಾವೊಂದು ಆಸ್ಕರ್​ ರೇಸ್​ಗೆ ಇಳಿಯುತ್ತಿರುವುದು ಕೂಡ ಇದೇ ಮೊದಲು ಎನ್ನುವುದು ವಿಶೇಷ ಸಂಗತಿ.

ಫಿಲ್ಮ್​ ಫೆಡರೇಷನ್​ ಆಫ್​ ಇಂಡಿಯಾ’ ಕಡೆಯಿಂದ ‘ಆರ್​ಆರ್​ಆರ್​’ ಸಿನಿಮಾ ಆಸ್ಕರ್​ ಸ್ಪರ್ಧೆಗೆ ಅರ್ಹತೆಯನ್ನು ಪಡೆದಿರಲಿಲ್ಲ. ಹೀಗಾಗಿ, ಈ ಸಲುವಾಗಿ, For Your Consideration ಮೂಲಕ ‘ಆರ್​ಆರ್​ಆರ್​’ ಸಿನಿಮಾ ಆಸ್ಕರ್​ ರೇಸ್​ಗೆ ಎಂಟ್ರಿ ಪಡೆಯಲು ಪ್ರಯತ್ನಿಸಿತ್ತು. ಈಗ ‘ಕಾಂತಾರ’ ಸಿನಿಮಾ ಕೂಡ ಇದೇ ಹಾದಿಯಲ್ಲಿ ನಡೆದಿವೆ ನಡೆಯುತ್ತಿದ್ದು, ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ವಿಜಯ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

‘ಆಸ್ಕರ್​ ರೇಸ್​​ನಲ್ಲಿ ಸ್ಪರ್ಧೆ ಮಾಡಲು ಅರ್ಜಿ ಸಲ್ಲಿಕೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದು, ಅಂತಿಮ ನಾಮನಿರ್ದೇಶನ ಪಟ್ಟಿ ಇನ್ನಷ್ಟೇ ಬರಬೇಕಿದೆ’ ಎಂದು ವಿಜಯ್ ಅವರು ಹೇಳಿದ್ದಾರೆ. ಈ ಮೂಲಕ ಮುಂದೇನಾಗಲಿದೆಯೋ ಎಂಬ ಕುತೂಹಲ ಸೃಷ್ಟಿಸಿದೆ. ಈ ನಡುವೆ ‘ಕಾಂತಾರ’ ಚಿತ್ರಕ್ಕೆ ಸೀಕ್ವೆಲ್ ಬರಲಿದೆ ಎಂಬ ಸುದ್ದಿಗಳು ಎಲ್ಲೆಡೆ ಹಬ್ಬಿದ್ದು, ಈ ಬಗ್ಗೆಯೂ ವಿಜಯ್ ಅವರು ಮಾತನಾಡಿದ್ದಾರೆ. ‘ರಿಷಬ್ ಶೆಟ್ಟಿ ಅವರು ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದು, ಅವರು ಮರಳಿದ ನಂತರದಲ್ಲಿ ಈ ಸಿನಿಮಾಗೆ ಸೀಕ್ವೆಲ್ ಮಾಡಬೇಕೋ ಇಲ್ಲವೇ ಪ್ರೀಕ್ವೆಲ್ ಮಾಡಬೇಕೋ ಎಂಬ ಬಗ್ಗೆ ಚರ್ಚೆ ನಡೆಸಲಿದ್ದೇವೆ. ‘ಕಾಂತಾರ 2’ ಮಾಡಲು ನಾವು ಪ್ಲ್ಯಾನ್ ಮಾಡಿಕೊಂಡಿರುವುದು ನಿಜ ಎಂದು ಒಪ್ಪಿಕೊಂಡಿದ್ದು, ಆದರೆ, ಅದಕ್ಕೆ ಟೈಮ್ ಲೈನ್ ಇದೆ ಎಂದು ವಿಜಯ್ ಕಿರಗಂದೂರು ಅವರು ಮಾಹಿತಿ ನೀಡಿದ್ದಾರೆ.